Bihar Exit Poll ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ, 145 ಸ್ಥಾನದೊಂದಿಗೆ ಎನ್‌ಡಿಎಗೆ ಬಹುಮತ, ಬಿಹಾರದ ಎರಡು ಹಂತದ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಬಹಿರಂಗಗೊಂಡಿದೆ.

ನವದೆಹಲಿ (ನ.11) ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ತೀವ್ರ ಕತೂಹಲ ಕೆರಳಿಸಿದೆ. ಎರಡು ಹಂತದಲ್ಲಿ ನಡೆದ ಮತದಾನ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಬಿಹಾರದ ಎಕ್ಸಿಟ್ ಪೋಲ್ ಬಹಿರಂಗವಾಗಿದೆ. ಹಲವು ಸಂಸ್ಥೆಗಳು ಬಿಹಾರ ಮತಗಟ್ಟೆ ಸಮೀಕ್ಷೆ ಬಹಿರಂಗ ಮಾಡಿದೆ. ಈ ಪೈಕಿ ದೈನಿಕ್ ಬಾಸ್ಕರ್ ಪ್ರಕಟಿಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸರಳ ಬಹುಮತ ಎಂದಿದೆ. ಇತ್ತ ಮಹಾಘಟನಬಂಧನ್ ಕೂಡ ತೀವ್ರ ಪೈಪೋಟಿ ನೀಡಲಿದೆ ಎಂದಿದೆ.

ದೈನಿಕ್ ಭಾಸ್ಕರ್ ಮತಗಟ್ಟ ಸೆಮೀಕ್ಷೆ

  • ಎನ್‌ಡಿಎ: 145-160
  • ಮಹಾಘಟನಬಂಧನ: 73-91
  • ಜೆಎಸ್‌ಪಿ: 0-03
  • ಇತರರು: 5-7

ಎನ್‌ಡಿಎ 131 ಸ್ಥಾನಗಳ ಪೈಕಿ ಬಿಜೆಪಿ 80 ಸ್ಥಾನ ಪಡೆಯಲಿದೆ ಎಂದಿದೆ. ಇತ್ತ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 45 ಸ್ಥಾನ ಪಡೆಯಲಿದೆ ಎಂದಿದೆ.

ಕಾಂಗ್ರೆಸ್, ಆರ್‌ಜೆಡಿ ನೇತೃತ್ವದ ಮಹಾಘಟನಬಂದನ ಈ ಬಾರಿ ಬಿಹಾರ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಲಿದೆ ಎಂದು ಸಮೀಕ್ಷಾ ಫಲಿತಾಂಶ ಹೇಳುತ್ತಿದೆ. 112 ಸ್ಥಾನ ಗೆಲ್ಲಲಿದೆ ಎಂದಿದೆ. ಸದ್ಯ ದೈನಿಕ್ ಭಾಸ್ಕರ್ ಎನ್‌ಡಿಎ ಸರಳ ಬಹುಮತ ನೀಡಿದೆ. ಆದರೆ ಪೈಪೋಟಿ ತೀವ್ರಗೊಂಡಿರುವ ಕಾರಣ ಅಸಲಿ ಫಲಿತಾಂಶ ಅಚ್ಚರಿ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬಿಹಾರ ವಿಧಾನಸಭಾ ಚುನಾವಣೆ

ಬಿಹಾಹದಲ್ಲಿ 243 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ಎರಡು ಹಂತದಲ್ಲಿ ನಡೆದಿತ್ತು. ಮ್ಯಾಜಿಕ್ ನಂಬರ್ 122. ಈ ಮ್ಯಾಜಿಕ್ ಸ್ಥಾನ ಪಡೆದ ಪಕ್ಷ ಸರ್ಕಾರ ರಚನೆ ಮಾಡಲಿದೆ.