Asianet Suvarna News Asianet Suvarna News

ಸೈಕಲ್‌ನಿಂದ ಬಿದ್ದ ವೃದ್ಧ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ: 2 ಮಹಿಳಾ ಪಿಸಿಗಳು ಸಸ್ಪೆಂಡ್

ಸೈಕಲ್‌ನಿಂದ ಬಿದ್ದ ವೃದ್ಧ ಶಿಕ್ಷಕನ ಮೇಲೆ ಮಾನವೀಯತೆ ಮರೆತು ಹಲ್ಲೆ ನಡೆಸಿದ್ದ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳನ್ನು ಸಸ್ಪೆಂಡ್ ಮಾಡಲಾಗಿದೆ.  ಮಹಿಳಾ ಕಾನ್ಸ್‌ಟೇಬಲ್‌ಗಳಿಬ್ಬರು ಸೈಕಲ್‌ನಿಂದ ಕೆಳಗೆ ಬಿದ್ದ ವೃದ್ಧ ಶಿಕ್ಷಕನ ಮೇಲೆ ಲಾಠಿಯಿಂದ ವೃದ್ಧ ಎಂಬುದನ್ನು ಕೂಡ ಮರೆತು ಹಿಗ್ಗಾಮುಗ್ಗಾ ಥಳಿಸಿದ್ದರು.

Bihar Elderly teacher beaten with baton after falling from bicycle Two women PCs suspended akb
Author
First Published Jan 22, 2023, 8:44 PM IST

ಪಾಟ್ನಾ: ಸೈಕಲ್‌ನಿಂದ ಬಿದ್ದ ವೃದ್ಧ ಶಿಕ್ಷಕನ ಮೇಲೆ ಮಾನವೀಯತೆ ಮರೆತು ಹಲ್ಲೆ ನಡೆಸಿದ್ದ ಇಬ್ಬರು ಮಹಿಳಾ ಕಾನ್ಸ್‌ಟೇಬಲ್‌ಗಳನ್ನು ಸಸ್ಪೆಂಡ್ ಮಾಡಲಾಗಿದೆ.  ಮಹಿಳಾ ಕಾನ್ಸ್‌ಟೇಬಲ್‌ಗಳಿಬ್ಬರು ಸೈಕಲ್‌ನಿಂದ ಕೆಳಗೆ ಬಿದ್ದ ವೃದ್ಧ ಶಿಕ್ಷಕನ ಮೇಲೆ ಲಾಠಿಯಿಂದ ವೃದ್ಧ ಎಂಬುದನ್ನು ಕೂಡ ಮರೆತು ಹಿಗ್ಗಾಮುಗ್ಗಾ ಥಳಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳಾ ಪೊಲೀಸ್ ಪೇದೆಯವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜನ ಮಹಿಳಾ ಪೇದೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಅದರಂತೆ ಈಗ ಇಬ್ಬರು ಮಹಿಳಾ ಪೊಲೀಸ್ ಪೇದೆಯರನ್ನು ಮೂರು ತಿಂಗಳವರೆಗೆ ಸೇವೆಯಿಂದ ಅಮಾನತು ಮಾಡಲಾಗಿದೆ. 

ಬಿಹಾರದ (Bihar) ಕೈಮುರ್ (Kaimur) ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು.  70 ದಾಟಿದ ವೃದ್ಧ ನವಲ್ ಕಿಶೋರ್ ಶರ್ಮಾ ಸೈಕಲ್‌ನಲ್ಲಿ ಹೋಗುತ್ತಿದ್ದ ವೇಳೆ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದರು.  ಬಿದ್ದ ನಂತರ ಬೇಗ ಮೇಲೆದ್ದಿಲ್ಲ ಎಂದು ಈ ಕ್ರೂರಿ ಮಹಿಳಾ ಪೇದೆಯರು ವೃದ್ಧ ಎಂಬುದನ್ನು ಕೂಡ ನೋಡದೆ ಅವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದರು.  ಅವರು ಮೇಲೆದ್ದು ಸೈಕಲ್ ಎತ್ತಿಕೊಳ್ಳುವ ಮೊದಲೇ ಮೃಗಗಳಂತೆ ಈ ಮಹಿಳಾ ಪೇದೆಯರು ಲಾಠಿಯಿಂದ ಅವರ ಕಾಲಿಗೆ ಬಡಿದಿದ್ದರು.  ಈ ಅಮಾನವೀಯ ಘಟನೆಯ ದೃಶ್ಯ  ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ ಆಗಿತ್ತು.  ಅಲ್ಲದೇ ಮಾನವೀಯತೆ ಮರೆತ ಈ ಮಹಿಳಾ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

‘ನೀವು ಪಾಕಿಸ್ತಾನದವರಾ?’ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಹಲ್ಲೆ?

ಹೀಗೆ ಮಹಿಳಾ ಕಾನ್ಸ್‌ಟೇಬಲ್‌ಗಳಿಂದ ಹಲ್ಲೆಗೊಳಗಾದ ಕಿಶೋರ್ ಪಾಂಡೆ (Naval Kishore Pandey) ಅವರು  40 ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.  ಇವರು ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ತಮ್ಮ ಸೈಕಲ್‌ನಲ್ಲಿ ಮನೆಗೆ ಮರಳುತ್ತಿರುವಾಗ ವಾಹನ ದಟ್ಟಣೆ ಇರುವ ಭಬುವ (Bhabhua) ಪ್ರದೇಶದಲ್ಲಿ ಸೈಕಲ್ ಸ್ಕಿಡ್ (cycle skidded) ಆಗಿ ಕೆಳಗೆ ಬಿದ್ದಿದೆ. ಇದು ಅಲ್ಲಿ ಟ್ರಾಫಿಕ್ ಜಾಮ್‌ಗೆ (traffic jam) ಕಾರಣವಾಗಿದೆ.  ಪಾಂಡೆ ಸೈಕಲ್ ಅನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದಾಗ ಈ ವೇಳೆ ಅಲ್ಲಿಗೆ ಬಂದ ಈ ಇಬ್ಬರು ಮಹಿಳಾ ಪೇದೆಗಳು ಅವರಿಗೆ ಸೈಕಲ್ ಮೇಲೆತ್ತಲು ಸಹಾಯ ಮಾಡುವ ಬದಲು ಬೇಗನೆ ಸೈಕಲ್ ಅನ್ನು ಮೇಲೆತ್ತಿಲ್ಲ ಎಂದು ಅವರ ಮೇಲೆ ಲಾಠಿಯಿಂದ ಹಲ್ಲೆ ಮಾಡಿದ್ದಾರೆ.  ಈ ವೇಳೆ ಅವರು ಹೊಡೆಯದಂತೆ ಬೇಡಿಕೊಂಡರು ಈ ಮಹಿಳಾ ಪೇದೆಗಳಿಗೆ ಕರುಣೆ ಬಂದಿಲ್ಲ.  ಈಗ ಈ ದುರ್ವರ್ತನೆ ತೋರಿದ ಮಹಿಳಾ ಕಾನ್ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. 

ಬೆಂಗಳೂರು ಪೊಲೀಸರಿಂದ ಹಲ್ಲೆ: ಜೀವನ್ಮರಣ ಹೋರಾಟದಲ್ಲಿ ಯುವಕ

 

Follow Us:
Download App:
  • android
  • ios