ಇಲ್ಲಿನ ಸರ್ಕಾರಿ ಶಾಲೆಗಳ ಮಧ್ಯಂತರ ಪರೀಕ್ಷೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಕರೆದ ಪ್ರಶ್ನೆಯೊಂದನ್ನು ನೀಡಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಇದರ ಹಿಂದೆ ಪಿತೂರಿ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಪಕ್ಷ ಬಿಜೆಪಿ ಒತ್ತಾಯಿಸಿದೆ.
ಬಿಹಾರ: ಇಲ್ಲಿನ ಸರ್ಕಾರಿ ಶಾಲೆಗಳ ಮಧ್ಯಂತರ ಪರೀಕ್ಷೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎಂದು ಕರೆದ ಪ್ರಶ್ನೆಯೊಂದನ್ನು ನೀಡಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಇದರ ಹಿಂದೆ ಪಿತೂರಿ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಪಕ್ಷ ಬಿಜೆಪಿ ಒತ್ತಾಯಿಸಿದೆ.
ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಬಿಹಾರ ಎಜುಕೇಷನ್ ಪ್ರಾಜೆಕ್ಟ್ ಕೌನ್ಸಿಲ್ ನಡೆಸಿದ ಪರೀಕ್ಷೆಯೊಂದರಲ್ಲಿ ಚೀನಾ (china) ದೇಶದ ಪ್ರಜೆಗಳನ್ನು ಚೀನಿಯರು ಎಂದ ಕರೆಯುತ್ತಾರೆ ಎಂದು ಉದಾಹರಿಸಿ, ಹಾಗಿದ್ದರೆ, ನೇಪಾಳ (Nepala) ದೇಶದ ಜನರನ್ನು, ಬ್ರಿಟನ್ ದೇಶದ ಜನರನ್ನು, ಕಾಶ್ಮೀರ (Kashmir) ದೇಶದ ಜನರನ್ನು ಮತ್ತು ಭಾರತದಲ್ಲಿ ನೆಲೆಸಿರುವವರನ್ನು ಏನೆಂದು ಕರೆಯುತ್ತಾರೆ ಎಂದು ಪ್ರಶ್ನಿಸಲಾಗಿದೆ. ಇದು ವಿವಾದವಾದ ಬಳಿಕ ಕಣ್ತಪ್ಪಿನಿಂದ ಆದ ಘಟನೆ ಎಂದು ಸಂಸ್ಥೆ ತಿಪ್ಪೆ ಸಾರಿಸಿದೆ.
ಪಿಎಸ್‌ಐ ನೇಮಕಾತಿ: ಪ್ರಶ್ನೆಪತ್ರಿಕೆ 1ರಲ್ಲೂ ಅಕ್ರಮ, ಬ್ಲೂಟೂತ್ ಬಳಕೆ ಪತ್ತೆ..!