ಪಿಎಸ್‌ಐ ನೇಮಕಾತಿ: ಪ್ರಶ್ನೆಪತ್ರಿಕೆ 1ರಲ್ಲೂ ಅಕ್ರಮ, ಬ್ಲೂಟೂತ್‌ ಬಳಕೆ ಪತ್ತೆ..!

ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆ ಹಾಗೂ ತುಮಕೂರು ದಾವಣಗೆರೆಗೂ ಇದರ ಲಿಂಕ್‌ ಕುರಿತು ವರದಿ ಮಾಡಿದ್ದ ಕನ್ನಡಪ್ರಭ 

Illegal in PSI Recruitment Exam Question Paper 1 as Well in Karnataka grg

ಆನಂದ್‌ ಎಂ. ಸೌದಿ

ಯಾದಗಿರಿ(ಅ.15):  ಪಿಎಸ್‌ಐ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ-1ರಲ್ಲಿಯೂ (ಭಾಷಾಂತರ, ಪ್ರಬಂಧ ಹಾಗೂ ಸಾರಾಂಶ) ಅಕ್ರಮ ನಡೆದಿರುವ ಬಗ್ಗೆ ತಿಳಿದುಬಂದಿದೆ. ಗುರುವಾರ ಸಿಐಡಿ ಪೊಲೀಸರು ಬಂಧಿಸಿದ ಮೂವರು ಆರೋಪಿ ಅಭ್ಯರ್ಥಿಗಳ ಪೈಕಿ, ಧಾರವಾಡದ ಶ್ರೀಮಂತ ಸತಾಪುರ ಈ ತರಹದ ಅಕ್ರಮ ನಡೆಸಿದ್ದ ಎಂಬುದು ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಇಷ್ಟುದಿನ ಪ್ರಶ್ನೆ ಪತ್ರಿಕೆ-2ರಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಯುತ್ತಿತ್ತು. ಈಗ ಮೊದಲ ಬಾರಿ ಪ್ರಶ್ನೆಪತ್ರಿಕೆ-1ರಲ್ಲೂ ಅಕ್ರಮ ಬೆಳಕಿಗೆ ಬಂದಿದೆ.

ತಾಂತ್ರಿಕ ವಿಶ್ಲೇಷಣೆ ಹಾಗೂ ವೈಜ್ಞಾನಿಕ ವಿಧಾನದಿಂದ ಇಂತಹ ಅಕ್ರಮ ಪತ್ತೆ ಮಾಡಿರುವ ಸಿಐಡಿ ತಂಡ, ಧಾರವಾಡದ ಪರೀಕ್ಷಾ ಕೇಂದ್ರಕ್ಕೆ ಸಂಪರ್ಕಿಸುವ ಎಲ್ಲ ಮೊಬೈಲ್‌ ಕಂಪನಿಗಳ ಸೆಲ್‌ ಐಡಿ ಪಡೆದು, ಸಂಬಂಧಿಸಿದ ಎಲ್ಲ ಮೊಬೈಲ್‌ ಕಂಪನಿ ಸವೀರ್‍ಸ್‌ ಪ್ರೊವೈಡರ್‌ಗಳಿಗೆ ಕಳುಹಿಸಿ ಅಲ್ಲಿ ಬಂದ ಕರೆಗಳ ಸಾಕ್ಷ್ಯಾಧಾರಗಳ ಮೇಲೆ ಆರೋಪಿಯನ್ನು ಬಂಧಿಸಿದ್ದಾರೆ.

PSI Recruitment Scam:ಪಿಎಸ್‌ಐ ಅಕ್ರಮ: ತುಮಕೂರು, ದಾವಣಗೆರೆ, ಮೂಡಬಿದಿರೆಗೂ ಲಿಂಕ್‌..!

ಬೆಳಿಗ್ಗೆ ನಡೆದ ಪರೀಕ್ಷೆ ವೇಳೆ 4 ಬಾರಿ ಸಂಪರ್ಕ ನಡೆದಿರುವುದು ತಾಂತ್ರಿಕ ತನಿಖೆಯಲ್ಲಿ ಪತ್ತೆಯಾಗಿದೆ. ಸುಮಾರು ಅರ್ಧಗಂಟೆಗಳ ಕಾಲ ಸಂಪರ್ಕ ಏರ್ಪಟ್ಟಿತ್ತು. ಪ್ರಬಂಧ ಹಾಗೂ ಭಾಷಾಂತರದ ಈ ಪತ್ರಿಕೆಯಲ್ಲಿ ಉತ್ತರಗಳನ್ನು ಬ್ಲೂಟೂತ್‌ ಮೂಲಕ ಕೇಳಿಸಿಕೊಂಡು ಬರೆಯಲಾಗಿದೆ.

ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆ ಹಾಗೂ ತುಮಕೂರು ದಾವಣಗೆರೆಗೂ ಇದರ ಲಿಂಕ್‌ ಕುರಿತು ಕನ್ನಡಪ್ರಭ ವರದಿ ಮಾಡಿತ್ತು. ಮುಂಬರುವ ದಿನಗಳಲ್ಲಿ ಇನ್ನೂ ಕೆಲವರನ್ನು ಬಂಧಿಸಲಾಗುತ್ತದೆ ಎಂದು ಸಿಐಡಿ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
 

Latest Videos
Follow Us:
Download App:
  • android
  • ios