ಮೂರು ವರ್ಷದ ಹೆಣ್ಣು ಮಗು. ತಲೆಯಲ್ಲಿ ಅವಳಿ ದೇಹದ ಭಾಗ(Parasitic Twin) ಬೆಳೆದಿದೆ. ತೀವ್ರ ನೋವು, ಸಮಸ್ಯೆಯಿಂದ ಕಳೆದ ಮಗುವಿಗೆ ಏಮ್ಸ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಏನಿದು ಪರಾಸಿಟಿಕ್ ಟ್ವಿನ್?
ಭೋಪಾಲ್(ಏ.09) ಅಪರೂಪದಲ್ಲಿ ಅಪರೂಪವಾಗಿರುವ ಪರಾಸಿಟಿಕ್ ಟ್ವಿನ್ ಸಮಸ್ಯೆಯಿಂದ ಬಳಲುತ್ತಿದ್ದ ಮೂರು ವರ್ಷದ ಹೆಣ್ಣು ಮಗುವಿಗೆ ಏಮ್ಸ್ ವೈದ್ಯರು ಯಶಸ್ವಿಯಾಗಿ ಸರ್ಜರಿ ಮಾಡಿದ್ದಾರೆ. ಮಗುವಿನ ತಲೆಯಲ್ಲೇ ಈ ಅವಳಿ ದೇಹದ ಭಾಗ ಅಂಟಿಕೊಂಡು ಬೆಳೆದಿತ್ತು. ಇದರಿಂದ ತೀವ್ರ ನೋವು, ಸಂಕಟ, ಯಾತನೆ ಅನುಭವಿಸಿದ ಮಗುವಿಗೆ ಈಗ ಭೋಪಾಲ್‌ನ ಏಮ್ಸ್ ವೈದ್ಯರು ಸಮಸ್ಯೆಗಳಿಂದ ಮುಕ್ತಿ ನೀಡಿದ್ದಾರೆ. ಯಶಸ್ವಿಯಾಗಿ ಸರ್ಜರಿ ಮಾಡಿದ್ದು, ಇದೀಗ ಮಗು ಆರೋಗ್ಯವಾಗಿದೆ.
ಭೋಪಾಲದ ಅಶೋಕನಗರದ 3 ವರ್ಷದ ಮಗುವಿನ ತಲೆಯಲ್ಲಿ ಈ ದೇಹದ ಅವಳಿ ಭಾಗ ಅಂಟಿಕೊಂಡು ಬೆಳೆದಿತ್ತು. ಇದು ತೀರಾ ಅಪರೂಪದ ಆರೋಗ್ಯ ಸಮಸ್ಯೆ. ಮಗಳ ಭವಿಷ್ಯ ನೆನೆದು ಚಿಂತಾಕ್ರಾಂತರಾಗಿದ್ದರು. ಆದರೆ ಭೋಪಾಲದ ಏಮ್ಸ್ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿಸಿ ಬಾಲಕಿಗೆ ಮರುಜನ್ಮ ನೀಡಿದ್ದಾರೆ. ಬಾಲಕಿಯನ್ನು ಭೋಪಾಲ್ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ ಬೆನ್ನಲ್ಲೇ ನ್ಯೂರೋಸರ್ಜನ್ ವಿಭಾಗ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿದೆ. ಮಗುವಿನ ಆರೋಗ್ಯ ಸೇರಿದಂತೆ ಎಲ್ಲಾ ತಪಾಸಣೆ ನಡೆಸಿದ ವೈದ್ಯರ ತಂಡ ಬಳಿಕ ಸುದೀರ್ಘ ಸರ್ಜರಿ ಮೂಲಕ ಈ ಅವಳಿ ಭಾಗವನ್ನು ಯಶಸ್ವಿಯಾಗಿ ತೆಗೆದಿದ್ದಾರೆ.
ಇದೆಂಥಾ ವಿಚಿತ್ರ ಕಾಯಿಲೆ..ಟಾಯ್ಲೆಟ್‌ನಲ್ಲಿ ಕುಳಿತಿದ್ದಷ್ಟೇ, ಕಾಲಿನ ಮೂಳೆನೇ ಮುರಿದೋಯ್ತು!
ಏನಿದು ಪರಾಸಿಟಿಕ್ ಟ್ವಿನ್ ಸಮಸ್ಯೆ?
ಗರ್ಭಾವಸ್ಥೆಯಲ್ಲಿ ಇದು ಮಕ್ಕಳ ಬಾಧಿಸುತ್ತದೆ. ಗರ್ಭದಲ್ಲಿರುವ ಅವಳಿ ಮಕ್ಕಳಲ್ಲಿ ಒಂದು ಮಗು ಪೂರ್ಣವಾಗಿ ಬೆಳೆಯದೆ, ಮತ್ತೊಂದು ಮಗುವಿನ ದೇಹಕ್ಕೆ ಅಂಟಿಕೊಂಡು ಬೆಳೆಯಲು ಆರಂಭಿಸುತ್ತದೆ. ಅಪೂರ್ಣ ಬೆಳೆದ ಮಗುವಿನ ಭಾಗ ಜನ್ಮ ನೀಡಿದ ಮಗುವಿನ ದೇಹದಲ್ಲಿ ಬೆಳೆಯಲು ಆರಂಭಿಸುತ್ತದೆ. ಇದು ಅಪರೂಪದ ಆರೋಗ್ಯ ವಿದ್ಯಮಾನವಾಗಿದೆ. ಭಾರತದಲ್ಲಿ ಈ ರೀತಿ ಕೆಲ ಪ್ರಕರಣಗಳು ದಾಖಲಾಗಿದೆ. ಬಳಿಕ ಯಶಸ್ವಿಯಾಗಿ ಶಸ್ತ್ರಿಚಿಕಿತ್ಸೆ ಮಾಡಲಾಗಿದೆ.
ಭೋಪಾಲದ 3 ವರ್ಷದ ಮಗುವಿನ ತಲೆಯಲ್ಲೇ ಅವಳಿ ದೇಹದ ಕಾಲು ಬೆಳೆದಿತ್ತು. ಅವಳಿ ದೇಹದ ಕಾಲು ಹಾಗೂ ಸೊಂಟದ ಭಾಗದ ಮೂಳೆಯೂ ಬೆಳೆಯಲು ಆರಂಭಿಸಿತ್ತು. ತಲೆಯಲ್ಲೇ ಈ ಅವಳಿ ಭಾಗ ಬೆಳೆದ ಕಾರಣ ಸೂಕ್ಷ್ಮವಾಗಿತ್ತು. ಇಷ್ಟೇ ಅಲ್ಲ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಮೆದುಳಿನ ಪಕ್ಕದ ಭಾಗದಲ್ಲೇ ಅವಳಿ ಭಾಗ ಬೆಳೆದ ಕಾರಣ ಶಸ್ತ್ರಚಿಕಿತ್ಸೆ ವೈದ್ಯರಿಗೆ ಸವಾಲಾಗಿತ್ತು. ಆದರೆ ಭೋಪಾಲದ ಏಮ್ಸ್ ವೈದ್ಯರು ತೀವ್ರ ಮುತುವರ್ಜಿ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಮೂರು ವರ್ಷದ ಬಾಲಕಿ ಈಗ ಚೇತರಿಸಿಕೊಳ್ಳುತ್ತಿದ್ದಾಳೆ. ಮಗು ಆರೋಗ್ಯವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿದೆ. ಭೋಪಾಲ್ ಏಮ್ಸ್ ವೈದ್ಯರು ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಚಿತ್ರ ಕಾಯಿಲೆಯಿಂದ ಬಳಲ್ತಿರೋ ಮಹಿಳೆ, ಬಿಸ್ಕೆಟ್ ಬಿಟ್ಟು ಬೇರೇನೂ ತಿನ್ನೋ ಹಾಗಿಲ್ಲ..!
