Asianet Suvarna News Asianet Suvarna News

ಅನಸ್ತೇಸಿಯಾ ಚುಚ್ಚಿಕೊಂಡು 24 ವರ್ಷದ ಯುವ ವೈದ್ಯೆ ಆತ್ಮಹತ್ಯೆ

24 ವರ್ಷದ ಮಹಿಳಾ ವೈದ್ಯೆಯೊಬ್ಬರು ಅರಿವಳಿಕೆ ಔಷಧವನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಧ್ಯಪ್ರದೇಶ ಭೋಪಾಲ್‌ನಲ್ಲಿ ನಡೆದಿದೆ.

Bhopal 24 year old doctor commits suicide by injecting herself an anaesthesia drug akb
Author
First Published Jan 5, 2023, 12:56 PM IST

ಭೋಪಾಲ್:  24 ವರ್ಷದ ಮಹಿಳಾ ವೈದ್ಯೆಯೊಬ್ಬರು ಅರಿವಳಿಕೆ ಔಷಧವನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಧ್ಯಪ್ರದೇಶ ಭೋಪಾಲ್‌ನಲ್ಲಿ ನಡೆದಿದೆ.  ಭೋಪಾಲ್‌ನ ಸರ್ಕಾರಿ ಗಾಂಧಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಹಾಸ್ಟೆಲ್‌ನಲ್ಲಿ ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.  ಮೃತ ವೈದ್ಯೆಯನ್ನು ಆಕಾಂಶಾ ಮಹೇಶ್ವರಿ (Akansha Maheshwari) ಎಂದು ಗುರುತಿಸಲಾಗಿದೆ. 

ನಿನ್ನೆ(ಜ.4) ಸಂಜೆ ಆಕೆಯ ಮೃತದೇಹ ಕಾಲೇಜು ಹಾಸ್ಟೆಲ್‌ನ ಕೊಠಡಿಯಲ್ಲಿ ಪತ್ತೆಯಾಗಿದೆ.   ಆಕೆಯ ಕೊಠಡಿಯಲ್ಲಿದ್ದ ಸಿರೀಂಜ್ ಹಾಗೂ ಲಸಿಕೆಯ ಬಾಟಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಕೋಹ್-ಇ-ಫಿಜಾ ಪೊಲೀಸ್ ಠಾಣೆಯ (Koh-e-Fiza police station) ಉಸ್ತುವಾರಿ ವಿಜಯ್ ಸಿಸೋಡಿಯಾ (Vijay Sisodia)ಹೇಳಿದ್ದಾರೆ.  ಮಹಿಳೆಯು ತಲಾ 2.5 ಮಿಲಿಯ ನಾಲ್ಕು ಡೋಸ್ ಅರಿವಳಿಕೆಯನ್ನು  ತನ್ನ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾಳೆ. 

ಆಪರೇಷನ್‌ ಮಾಡಿ ಮಹಿಳೆಯ ಹೊಟ್ಟೆಯೊಳಗೆ ಟವೆಲ್‌ ಬಿಟ್ಟ ವೈದ್ಯ..!

ಆಕೆಯ ಕೊಠಡಿಯಲ್ಲಿ ಡೆತ್‌ನೋಟ್ (security guard) ಪತ್ತೆಯಾಗಿದ್ದು, ಅದರಲ್ಲಿ ನಾನು ಮಾನಸಿಕವಾಗಿ ಗಟ್ಟಿಯಾಗಿಲ್ಲ. ಕೆಲಸದ ಒತ್ತಡ ನಿಭಾಯಿಸಲಾಗುತ್ತಿಲ್ಲ.  ವೈಯಕ್ತಿಕ ಕಾರಣಗಳಿಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಜವಾಬ್ದಾರಿ ಬೇರೆ ಯಾರೂ ಕಾರಣರಲ್ಲ ಎಂದು  ಬರೆದಿದ್ದಾರೆ.  ಅಲ್ಲದೇ  ತನ್ನ ಪೋಷಕರ ಬಳಿ ಕ್ಷಮಿಸುವಂತೆ ಕೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕಾಂಶಾ ಮಹೇಶ್ವರಿ ಅವರು ಸರ್ಕಾರಿ ಜಿಎಂಸಿಯಿಂದ ಮಕ್ಕಳ ವಿಭಾಗದ ತಜ್ಞ (paediatrics stream) ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದು,  ಸ್ನಾತಕೋತ್ತರ ಪದವಿಯ ಮೊದಲ ವರ್ಷದಲ್ಲಿ ಅಧ್ಯಯನ ನಡೆಸುತ್ತಿದ್ದರು.  ಇತರ ಹಾಸ್ಟೆಲ್ ವಿದ್ಯಾರ್ಥಿಗಳ ಪ್ರಕಾರ, ಬುಧವಾರ ಬೆಳಗ್ಗೆಯಿಂದಲೇ ಈಕೆ ವಾಸವಿದ್ದ ಹಾಸ್ಟೆಲ್‌ ಕೊಠಡಿ ಮುಚ್ಚಿತ್ತು.  ಆದರೆ ವಿದ್ಯಾರ್ಥಿಗಳು ಸಂಜೆ ಬಂದು ನೋಡಿದಾಗಲೂ ಕೊಠಡಿ ಬಾಗಿಲು ಮುಚ್ಚಿಯೇ ಇರುವುದನ್ನು ನೋಡಿದಾಗ ಅನುಮಾನ ಬಂದು ಹಾಸ್ಟೆಲ್‌ನ ಭದ್ರತಾ ಸಿಬ್ಬಂದಿ (security guard) ಹಾಗೂ ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾರೆ. ಕೊಠಡಿ ಒಳಗಿನಿಂದ ಚಿಲಕ ಹಾಕಿದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದಾಗ ಯುವತಿ ಶವ ಪತ್ತೆಯಾಗಿದೆ. 

Fraud Case: ರಸ್ತೆ ಬದಿಯ ನಕಲಿ ಆಯುರ್ವೇದ ವೈದ್ಯನಿಂದ 8 ಲಕ್ಷ ರೂ. ಪಂಗನಾಮ: ಮೋಸದ ಜಾಲ ಹೀಗೂ ಉಂಟಾ?

ಮೂಲತ ಮಧ್ಯಪ್ರದೇಶದ ಗ್ವಾಲಿಯರ್‌ನವರಾದ (Gwalior) ಆಕಾಂಶಾ, ಒಂದು ತಿಂಗಳ ಹಿಂದೆ ಜಿಎಂಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸೇರಿದ್ದರು.  ನಿನ್ನೆ ಬೆಳಗ್ಗೆ ಆಕೆ ಪೋಷಕರೊಂದಿಗೆ ಮಾತನಾಡಿದ್ದಾಳೆ ಎಂದು ತಿಳಿದು ಬಂದಿದ್ದು, ನಂತರ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.  ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow Us:
Download App:
  • android
  • ios