ನವದೆಹಲಿ(ಜ.29): ಗಣರಾಜ್ಯೋತ್ಸವ ಅಂಗವಾಗಿ ದೆಹಲಿಗೆ ಬಂದಿದ್ದ ಸೇನಾ ತುಕಡಿಗಳು ಇಂದು ಬೀಟಿಂಗ್ ರೀಟ್ರಿಟ್ ಮೂಲಕ ಮರಳಿ ಬ್ಯಾರೆಕ್ ಸೇರಿವೆ.ಈ ಮೂಲಕ ಗಣರಾಜ್ಯೋತ್ಸವ ಸಮಾರಂಭಕ್ಕೆ ಅಂತಿಮ ತೆರೆ ಬಿದ್ದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮತಿ ಪಡೆದು ಸೇನಾ ತುಕಡಿಗಳು ದೆಹಲಿ ತ್ಯಜಿಸಿವೆ.

"

ದೆಹಲಿಯ ರೈಸಿನಾ ಹಿಲ್ಸ್’ನ ವಿಜಯ್ ಚೌಕ್’ನಲ್ಲಿ ನಡೆದ ಬೀಟಿಂಗ್ ರೀಟ್ರಿಟ್ ಪರೇಡ್’ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು ಸಾಕ್ಷಿಯಾದರು.

ಗಮನ ಸೆಳೆದ CRPF ವುಮೆನ್ ಡೇರ್‌ಡೆವಿಲ್ಸ್ ಸಾಹಸ ಪ್ರದರ್ಶನ!

ಮೂರೂ ಸೇನಾಪಡೆಗಳ ಸೈನಿಕರು ಆಕರ್ಷಕ ಪಥಸಂಚಲನ ನಡೆಸುವ ಮೂಲಕ ಬೀಟಿಂಗ್ ರೀಟ್ರಿಟ್’ಗೆ ರಾಷ್ಟ್ರಪತಿಗಳಿಂದ ಅನುಮತಿ ಪಡೆದರು.

ಏನಿದು ಬೀಟಿಂಗ್ ರೀಟ್ರಿಟ್:

1950ರಲ್ಲಿ ಭಾರತೀಯ ಸೇನೆಯ ಮೇಜರ್ ರಾಬರ್ಟ್ಸ್ ಪರಿಚಯಿಸಿದ ಬೀಟಿಂಗ್ ರೀಟ್ರಿಟ್ ವಿಶೇಷ ಕಾರ್ಯಕ್ರಮವಾಗಿದ್ದು, ಯುದ್ಧದ ಮುಕ್ತಾಯದ ಬಳಿಕ ಸೇನಾ ತುಕಡಿಗಳು ತಮ್ಮ ಬ್ಯಾಂಡ್’ನೊಂದಿಗೆ ಬ್ಯಾರೆಕ್’ಗಳಿಗೆ ಮರಳುವ ವಿಶೇಷ ಸಮಾರಂಭವಾಗಿದೆ. ತದನಂತರ ಇದನ್ನು ಗಣರಾಜ್ಯೋತ್ಸವದ ಸಮಾರೋಪ ಸಮಾರಂಭಗಳಲ್ಲಿ ಅನುಸರಿಸಲು ಪ್ರಾರಂಭಿಸಲಾಯಿತು.

ಮಹಿಳಾ ಬಲ: ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ!

ಸೂರ್ಯ ಮುಳುಗುವುದರೊಳಗಾಗಿ ರಾಷ್ಟ್ರಪತಿಗಳ ಅನುಮತಿ ಪಡೆದು ಮೂರೂ ಸೇನಾಪಡೆಗಳ ತುಕಡಿಗಳು ಮರಳಿ ತಮ್ಮ ಬ್ಯಾರೆಕ್ ಸೇರುವುದು ಸಂಪ್ರದಾಯ. ಇದನ್ನು ಪ್ರತಿವರ್ಷದ ಜನವರಿ 29ರಂದು ಆಯೋಜಿಸಲಾಗುತ್ತದೆ.