ನವದೆಹಲಿ(ಜ.26): ಈ ಬಾರಿಯ ಗಣರಾಜ್ಯೋತ್ಸವ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಮಹಿಳಾ ಕ್ಯಾಪ್ಟನ್’ವೋರ್ವರು ತುಕಡಿಯನ್ನು ಮುನ್ನಡೆಸಿದ್ದರೆ, CRPF ಮಹಿಳಾ ಯೋಧರಿಂದ ಬೈಕ್ ಸಾಹಸ ಪ್ರದರ್ಶನ ಕೂಡ ನಡೆದಿದೆ. 

'ಸಿಆರ್‌ಪಿಎಫ್ ವುಮೆನ್ ಡೇರ್‌ಡೆವಿಲ್ಸ್' ಎಂದೇ ಕರೆಯಲ್ಪಡುವ  ಮಹಿಳಾ ಬೈಕ್‌ ಸವಾರರು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ತಮ್ಮ  ಬೈಕ್ ಸಾಹಸವನ್ನು ಪ್ರದರ್ಶಿಸಿದ್ದಾರೆ. 

ಡೇರ್ ಡೆವಿಲ್ಸ್ ತಂಡವನ್ನು ಮುನ್ನಡೆಸಿದ್ದ ಇನ್ಸ್ಪೆಕ್ಟರ್ ಸೀಮಾ ನಾಗ್, ಚಲಿಸುವ ಮೋಟಾರ್ ಸೈಕಲ್ ಮೇಲೆ ನಿಂತು ರಾಷ್ಟ್ರಪತಿಗಳಿಗೆ ಸೆಲ್ಯೂಟ್ ಮಾಡಿದ್ದು ಎಲ್ಲರ ಮನೆ ಗೆದ್ದಿದೆ.

ಇದೇ ಮೊದಲ ಬಾರಿಗೆ CRPF ಮಹಿಳಾ ಬೈಕ್ ಸವಾರರು ಗಣರಾಜ್ಯೋತ್ಸವ ಪರೇಡ್’ನಲ್ಲಿ ಸಾಹಸ ಪ್ರದರ್ಶಿಸಿದ್ದು, ಮಹಿಳಾ ಯೋಧರ ಸಾಹಸ ಕಂಡು ಸಭಿಕರು ಬೆರಗಾದರು.

ಬೈಕ್ ಸಾಹಸ ಪ್ರದರ್ಶನದ ತರಬೇತಿಗಾಗಿ ಈ ಎಲ್ಲಾ ಮಹಿಳಾ ಯೋಧರು ತಮ್ಮ ರಜೆಯನ್ನು ರದ್ದುಗೊಳಿಸಿ ತರಬೇತಿ ಪಡೆದಿದ್ದಾರೆ ಎಂಬುದು ವಿಶೇಷ.

ಮಹಿಳಾ ಬಲ: ಗಣರಾಜ್ಯೋತ್ಸವ ಪೆರೆಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ!

18 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350  ಬೈಕ್’ಗಳಲ್ಲಿ ಒಟ್ಟು 65 ಸಿಆರ್‌ಪಿಎಫ್ ಮಹಿಳೆಯರು 9 ಪ್ರಕಾರದ ಸಾಹಸಗಳನ್ನು ಪ್ರದರ್ಶಿಸಿದರು.