ನವದೆಹಲಿ(ಜ.26): ಈ ಬಾರಿಯ ಗಣರಾಜ್ಯೋತ್ಸವ ದೇಶದ ಮಹಿಳಾ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದು ವಿಶೇಷ. ಆಧುನಿಕ ಮಹಿಳೆ ಈ ದೇಶದ ಗಡಿ ಕಾಯುವಲ್ಲಿ ಸಶಕ್ತಳಾಗಿದ್ದಾಳೆ ಎಂಬ ಸಂದೇಶ ರಾಜ್‌ಪಥ್ ದಿಂದ ರವಾನೆಯಾಗಿದೆ.

ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ನವದೆಹಲಿಯಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌’ನ ತುಕಡಿಯನ್ನು ಮುನ್ನಡೆಸಿ ಇತಿಹಾಸ ನಿರ್ಮಿಸಿದ್ದಾರೆ.

ಹಿಮ ಪರ್ವತ ಗೆದ್ದ ಯೋಧರು: 17 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದರು!

ಕಾರ್ಪ್ಸ್ ಆಫ್ ಸಿಗ್ನಲ್ಸ್‌’ನ ತುಕಡಿ ರಾಷ್ಟ್ರಪತಿಗಳ ಸಮ್ಮುಖ ಬರುತ್ತಿದ್ದಂತೇ ಸಭಿಕರೆಲ್ಲಾ ಎದದು ನಿಂತು ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು. ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ಈ ತುಕಡಿಯ ಸಂಚಾಲಕರಾಗಿದ್ದರು.

ಉಗ್ರಾತಂಕ ನಡುವೆಯೇ 71ನೇ ಗಣರಾಜ್ಯೋತ್ಸವ!

ಈ ತಿಂಗಳ ಆರಂಭದಲ್ಲಿ ಆರ್ಮಿ ಡೇ ಪೆರೇಡ್‌ನಲ್ಲಿ ಅಡ್ಜುಟಂಟ್ ಆಗಿ ತಾನ್ಯಾ ಶೆರ್ಗಿಲ್ ಆಯ್ಕೆಯಾಗಿದ್ದರು. ಅಡ್ಜುಟಂಟ್ ಆಗಿ ಆಯ್ಕೆಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ಮುಡಿಗೇರಿಸಿಕೊಂಡಿದ್ದಾರೆ.