ಒಡಿಶಾ ರೈಲು ದುರಂತ: 3 ರೈಲ್ವೆ ಸಿಬ್ಬಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್; ಕೊಲೆ ಕೇಸ್ ದಾಖಲು
ಪ್ರಕರಣ ಸಂಬಂಧ ಹಿರಿಯ ವಿಭಾಗೀಯ ಎಂಜಿನಿಯರ್ (ಸಿಗ್ನಲ್ಸ್) ಅರುಣ್ ಕುಮಾರ್ ಮಹಾಂತ, ವಿಭಾಗೀಯ ಎಂಜಿನಿಯರ್ ಮೊಹಮ್ಮದ್ ಆಮೀರ್ ಖಾನ್ ಮತ್ತು ತಾಂತ್ರಿಕ ಸಿಬ್ಬಂದಿ ಪಪ್ಪು ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಮೂವರನ್ನೂ ಬಂಧಿಸಲಾಗಿತ್ತು. ಇದೀಗ ಮೂವರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
ನವದೆಹಲಿ (ಸೆಪ್ಟೆಂಬರ್ 3, 2023): 296 ಜನರ ಬಲಿ ಪಡೆದ ಬಾಲಸೋರ್ ರೈಲು ಅಪಘಾತ ಪ್ರಕರಣ ಸಂಬಂಧ ಮೂವರು ರೈಲ್ವೆ ಅಧಿಕಾರಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿದೆ. ಮೂವರ ವಿರುದ್ಧ ಉದ್ದೇಶಪೂರ್ವಕವಲ್ಲದ ಹತ್ಯೆ ಮತ್ತು ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿದೆ.
ಕಳೆದ ಜೂನ್ 2ರಂದು ಒಡಿಶಾದ ಬಾಲಾಸೋರ್ ನಡುವೆ ಎರಡು ರೈಲುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 296 ಜನರು ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಹಿರಿಯ ವಿಭಾಗೀಯ ಎಂಜಿನಿಯರ್ (ಸಿಗ್ನಲ್ಸ್) ಅರುಣ್ ಕುಮಾರ್ ಮಹಾಂತ, ವಿಭಾಗೀಯ ಎಂಜಿನಿಯರ್ ಮೊಹಮ್ಮದ್ ಆಮೀರ್ ಖಾನ್ ಮತ್ತು ತಾಂತ್ರಿಕ ಸಿಬ್ಬಂದಿ ಪಪ್ಪು ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಮೂವರನ್ನೂ ಬಂಧಿಸಲಾಗಿತ್ತು. ಇದೀಗ ಮೂವರ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
ಇದನ್ನು ಓದಿ: ಇನ್ಮುಂದೆ ನಾಲ್ಕೇ ಗಂಟೆಯಲ್ಲಿ ರೈಲಿನಲ್ಲಿ ಬೆಂಗಳೂರು - ಚೆನ್ನೈ ಆರಾಮವಾಗಿ ಪ್ರಯಾಣ ಮಾಡಿ!
ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗಾ ಬಜಾರ್ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿತ್ತು. ಈ ವೇಳೆ ರೈಲಿನ ಕೆಲ ಬೋಗಿಗಳು ಪಕ್ಕದ ಹಳಿಗಳ ಮೇಲೆ ಉರುಳಿದ ಪರಿಣಾಮ ಅದೇ ಹಳಿಯ ಮೇಲೆ ಬರುತ್ತಿದ್ದ ಬೆಂಗಳೂರು - ಹೌರಾ ರೈಲು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ಬಹನಾಗಾ ಬಜಾರ್ ನಿಲ್ದಾಣದ ಬಳಿಯ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 94 ರ ದುರಸ್ತಿ ಕಾರ್ಯವನ್ನು ಮಹಾಂತ ಅವರು ಎಲ್‌ಸಿ ಗೇಟ್ ನಂ. 79ರ ಸರ್ಕ್ಯೂಟ್ ರೇಖಾಚಿತ್ರವನ್ನು ಬಳಸಿಕೊಂಡು ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಅಸ್ತಿತ್ವದಲ್ಲಿರುವ ಸಿಗ್ನಲ್ ಮತ್ತು ಇಂಟರ್‌ಲಾಕಿಂಗ್ ಸ್ಥಾಪನೆಗಳಿಗೆ ಪರೀಕ್ಷೆ, ಕೂಲಂಕುಷ ಪರೀಕ್ಷೆ ಮತ್ತು ಬದಲಾವಣೆಗಳನ್ನು ಕೈಗೊಳ್ಳುವುದು ಅನುಮೋದಿತ ಯೋಜನೆ ಮತ್ತು ಸೂಚನೆಗಳಿಗೆ ಅನುಸಾರವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಆರೋಪಿಯ ಕರ್ತವ್ಯವಾಗಿತ್ತು ಎಂದು ತಿಳಿದುಬಂದಿದೆ. ಭಾರತೀಯ ರೈಲ್ವೇ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ಅಪಘಾತಗಳ ಪೈಕಿ ಒಡಿಶಾದ ಬಾಲಾಸೋರ್ ರೈಲು ದುರಂತ ಕೂಡ ಒಂದು.
ಇದನ್ನೂ ಓದಿ: ಮೆಟ್ರೋ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ, ಗಾಬರಿಯಾದ ಪ್ರಯಾಣಿಕರು!
ಇದನ್ನೂ ಓದಿ: ಟಿಕೆಟ್ ಇಲ್ದೆ ವಂದೇ ಭಾರತ್ ರೈಲು ಹತ್ತಿದ: ಟಾಯ್ಲೆಟ್ ಒಳಗೆ ಬೀಡಿ ಸೇದಿ ತಗ್ಲಾಕ್ಕೊಂಡ ಭೂಪ!