ಇನ್ಮುಂದೆ ನಾಲ್ಕೇ ಗಂಟೆಯಲ್ಲಿ ರೈಲಿನಲ್ಲಿ ಬೆಂಗಳೂರು - ಚೆನ್ನೈ ಆರಾಮವಾಗಿ ಪ್ರಯಾಣ ಮಾಡಿ!

ವಂದೇ ಭಾರತ್‌ ರೈಲಿನ ಒಟ್ಟು ಪ್ರಯಾಣದ ಸಮಯವು ನಾಲ್ಕು ಗಂಟೆ 25 ನಿಮಿಷಗಳಿಂದ ಸುಮಾರು ನಾಲ್ಕು ಗಂಟೆಗಳವರೆಗೆ ಕಡಿಮೆಯಾಗುವುದರಿಂದ ಬೆಂಗಳೂರಿಗೆ ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು ಗಮನಾರ್ಹವಾಗಿದೆ ಎಂದು ತಿಳಿದುಬಂದಿದೆ

soon chennai to bengaluru will take just 4 hours by train ash

ಬೆಂಗಳೂರು (ಆಗಸ್ಟ್‌ 18, 2023): ಇನ್ಮುಂದೆ ಬೆಂಗಳೂರು - ಚೆನ್ನೈ ರೈಲು ಪ್ರಯಾಣವನ್ನು ಕೇವಲ 4 ಗಂಟೆಗಳಲ್ಲಿ ಮಾಡ್ಬಹುದು. ಹೌದು, ಅರಕ್ಕೋಣಂ ಮತ್ತು ಜೋಲಾರ್‌ಪೇಟೆ (144 ಕಿಮೀ) ನಡುವಿನ ರೈಲುಗಳ ವೇಗವನ್ನು ಗಂಟೆಗೆ 110 ಕಿಲೋಮೀಟರ್‌ನಿಂದ 130 ಕಿಮೀವರೆಗೆ ಹೆಚ್ಚಿಸಲು ರೈಲ್ವೆ ಅನುಮತಿ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಚೆನ್ನೈನಿಂದ ಬೆಂಗಳೂರು ಮತ್ತು ಇತರ ಕೆಲವು ಸ್ಥಳಗಳಿಗೆ ಪ್ರಯಾಣದ ಸಮಯ ಕನಿಷ್ಠ 20 ನಿಮಿಷಗಳು ಕಡಿಮೆಯಾಗಬಹುದು. 

ಟ್ರ್ಯಾಕ್‌ಗಳು ಮತ್ತು ಸಿಗ್ನಲ್‌ಗಳನ್ನು ನವೀಕರಿಸಿದ ನಂತರ ಈ ಕ್ರಮ ಜಾರಿಗೆ ಬಂದಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ವೇಗಕ್ಕಾಗಿ ಚೆನ್ನೈ-ಅರಕ್ಕೋಣಂ ಮಾರ್ಗವನ್ನು ಈಗಾಗಲೇ ನವೀಕರಿಸಲಾಗಿದೆ. ವಂದೇ ಭಾರತ್‌ ರೈಲಿನ ಒಟ್ಟು ಪ್ರಯಾಣದ ಸಮಯವು ನಾಲ್ಕು ಗಂಟೆ 25 ನಿಮಿಷಗಳಿಂದ ಸುಮಾರು ನಾಲ್ಕು ಗಂಟೆಗಳವರೆಗೆ ಕಡಿಮೆಯಾಗುವುದರಿಂದ ಬೆಂಗಳೂರಿಗೆ ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು ಗಮನಾರ್ಹವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಶತಾಬ್ದಿ ಅಥವಾ ಬೃಂದಾವನ ಎಕ್ಸ್‌ಪ್ರೆಸ್‌ನಂತಹ ರೈಲುಗಳಿಗೆ ಸಹ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ.

ಇದನ್ನು ಓದಿ: ಮೆಟ್ರೋ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ, ಗಾಬರಿಯಾದ ಪ್ರಯಾಣಿಕರು!

ಬಹುತೇಕ ಕೆಲಸಗಳು ಪೂರ್ಣಗೊಂಡಿರುವುದರಿಂದ, ಮುಂದಿನ ವಾರದಿಂದ ಅರಕ್ಕೋಣಂ ಮತ್ತು ಜೋಲಾರ್‌ಪೇಟ್ಟೈ ನಡುವೆ 130 ಕಿಮೀ ವೇಗದಲ್ಲಿ ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿರುವ 124 ರೈಲುಗಳನ್ನು ಓಡಿಸಲು ಮಂಜೂರಾತಿ ನೀಡಲಾಗಿದೆ ಎಂದು ರೈಲ್ವೆ ಸುತ್ತೋಲೆ ಹೊರಡಿಸಿ ಕಾರ್ಯಾಚರಣೆ ಇಲಾಖೆ ಮತ್ತು ಲೋಕೋ ಪೈಲಟ್‌ಗಳಿಗೆ ಎಚ್ಚರಿಕೆ ನೀಡಿದೆ. LHB ಕೋಚ್‌ಗಳು 130kmph ವೇಗದಲ್ಲಿ ಚಲಿಸಬಲ್ಲವು, ಆದರೆ ICF ವಿನ್ಯಾಸದ ಕೋಚ್‌ಗಳು 110kmph ವೇಗದ ಮಿತಿಯನ್ನು ಹೊಂದಿರುತ್ತವೆ ಎಂದು ವರದಿಯಾಗಿದೆ.

ಇದರಿಂದ ಬೆಂಗಳೂರು, ಕೊಯಮತ್ತೂರು, ತಿರುವನಂತಪುರಂ, ಕೊಚ್ಚಿ, ಕೋಯಿಕ್ಕೋಡ್‌, ಮಂಗಳೂರು, ಮುಂಬೈ ಮತ್ತು ಇತರ ಕೆಲವು ಸ್ಥಳಗಳಿಗೆ ಪ್ರಯಾಣದ ಸಮಯವನ್ನು ಕಡಿತಗೊಳಿಸುತ್ತದೆ. ಏಕೆಂದರೆ ಅನೇಕ ರೈಲುಗಳು ಎಲ್‌ಎಚ್‌ಬಿ ಕೋಚ್‌ಗಳನ್ನು ಹೊಂದಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರತಿ ರೈಲುಗಳನ್ನು ಕ್ರಮೇಣ ಹೆಚ್ಚಿದ ವೇಗದಲ್ಲಿ ಓಡಿಸಲು ನಿರ್ಧರಿಸಲಾಗುವುದು ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಟಿಕೆಟ್‌ ಇಲ್ದೆ ವಂದೇ ಭಾರತ್ ರೈಲು ಹತ್ತಿದ: ಟಾಯ್ಲೆಟ್‌ ಒಳಗೆ ಬೀಡಿ ಸೇದಿ ತಗ್ಲಾಕ್ಕೊಂಡ ಭೂಪ!

ಪ್ರಯಾಣದ ಸಮಯವನ್ನು ಕಡಿತಗೊಳಿಸುವುದರಿಂದ ಬೆಂಗಳೂರು ಮಾರ್ಗದಲ್ಲಿ ಓಮ್ನಿ ಬಸ್‌ಗಳ ಸ್ಪರ್ಧೆಯನ್ನು ನಿಭಾಯಿಸಲು ರೈಲ್ವೆಗೆ ಸಹಾಯ ಮಾಡುತ್ತದೆ. ಚೆನ್ನೈ-ರೇಣಿಗುಂಟಾ ವಿಭಾಗ ಮತ್ತು ಚೆನ್ನೈ-ಗುಡೂರು ವಿಭಾಗವನ್ನು ಕಳೆದ ವರ್ಷ ಮೇಲ್ದರ್ಜೆಗೇರಿಸಲಾಗಿತ್ತು. 2,000 ರೂಟ್ ಕಿ.ಮೀ.ಗಿಂತ ವೇಗವನ್ನು ಹೆಚ್ಚಿಸಲಾಗಿದೆ ಮತ್ತು ಕಳೆದ ವರ್ಷ 44 ರೈಲುಗಳ ಗರಿಷ್ಠ ಅನುಮತಿ ವೇಗವನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ: Vande Bharat Express: ಕೇಸರಿ ಬಣ್ಣದ ಐಷಾರಾಮಿ ರೈಲಿನಲ್ಲಿ ಕಾಣಲಿದೆ ಈ 10 ಬದಲಾವಣೆಗಳು

Latest Videos
Follow Us:
Download App:
  • android
  • ios