Asianet Suvarna News Asianet Suvarna News

ಗಂಗೆಯಲ್ಲಿ 3 km ಈಜಿ ಮಾವುತನ ರಕ್ಷಿಸಿದ ಆನೆ: ವಿಡಿಯೋ ವೈರಲ್

ಆನೆಯೊಂದು ತುಂಬಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಮೂರು ಕಿ.ಲೋ ಮೀಟರ್ ಈಜುವ ಮೂಲಕ ತನ್ನ ಹಾಗೂ ತನ್ನ ಮಾವುತನ ಜೀವ ಉಳಿಸಿಕೊಂಡಿದೆ.

elephant swimmid 3 kilometer in river ganga saved mahout life akb
Author
Bangalore, First Published Jul 14, 2022, 12:06 PM IST

ಪಾಟ್ನಾ: ಆನೆಯೊಂದು ತುಂಬಿ ಹರಿಯುತ್ತಿರುವ ಗಂಗಾ ನದಿಯಲ್ಲಿ ಮೂರು ಕಿ.ಲೋ ಮೀಟರ್ ಈಜುವ ಮೂಲಕ ತನ್ನ ಹಾಗೂ ತನ್ನ ಮಾವುತನ ಜೀವ ಉಳಿಸಿಕೊಂಡಿದೆ. ಆನೆ ಸಂಪೂರ್ಣ ನದಿಯಲ್ಲಿ ಮುಳುಗೇಳುತ್ತಾ ಈಜುತ್ತಾ ಉಕ್ಕಿ ಹರಿಯುತ್ತಿರುವ ನದಿಯನ್ನು ಈಜುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೋಡುಗರು ಭಾವುಕರಾಗಿದ್ದಾರೆ.

ಬಿಹಾರದ ವೈಶಾಲಿಯಲ್ಲಿ ಈ ಘಟನೆ ನಡೆದಿದೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅನೇಕ ಪ್ರಾಣಿ ಪಕ್ಷಿಗಳು, ಮನುಷ್ಯರು ಜೀವ ಕಳೆದುಕೊಂಡಿದ್ದಾರೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯ ಬೆನ್ನ ಮೇಲೆ ಮಾವುತ ಕುಳಿತಿದ್ದು, ಆನೆಗೆ ಯಾವ ಕಡೆಗೆ ಹೋಗಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದಾನೆ. ಆನೆಯೂ ಬಹುತೇಕ ಮುಳುಗುತ್ತಿದ್ದರೂ ತನ್ನ ಹಾಗೂ ಮಾಲೀಕನ ಜೀವ ಉಳಿಸಿಕೊಳ್ಳಲು ಭಾರಿ ಪ್ರಯತ್ನ ನಡೆಸಿದೆ. 

ಹಲವು ಗಂಟೆಗಳ ಪ್ರಯತ್ನದ ಬಳಿಕ ಆನೆ ಪ್ರವಾಹ ಪೀಡಿತ ನದಿಯನ್ನು ದಾಟಿದ್ದು, ಆನೆ ಹಾಗೂ ಮಾವುತ ಇಬ್ಬರು ನದಿ ದಡವನ್ನು ತಲುಪಿ ಜೀವ ಉಳಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆನೆಯ ಧೈರ್ಯ ಹಾಗೂ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಭಾರಿ ಮಳೆಗೆ ಗುಜರಾತ್‌ನಲ್ಲಿ ಪ್ರವಾಹ, ಶಾಲಾ ಕಾಲೇಜಿಗೆ ರಜೆ, 7 ಸಾವು!

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ವಿಶಾಂತ್ ಶ್ರೀವಾಸ್ತವ್‌ ಎಂಬುವವರು ಪೋಸ್ಟ್‌ ಮಾಡಿದ್ದು, ಬಿಹಾರದ ವೈಶಾಲಿಯಲ್ಲಿ ಉಕ್ಕಿ ಹರಿಯುತ್ತಿರುವ ಗಂಗಾ ನದಿಯನ್ನು ಮಧ್ಯೆ ಒಮ್ಮೆಗೆ ನೀರು ಏರಿದ ಪರಿಣಾಮ ಆನೆ ಹಾಗೂ ಮಾವುತ ಬಾಕಿಯಾಗಿದ್ದರು. ಆದರೆ ಆನೆ ಹಾಗೂ ಮಾವುತ ಪರಸ್ಪರ ಅರ್ಥ ಮಾಡಿಕೊಂಡು ನದಿ ದಾಟಿ ಜೀವ ಉಳಿಸಿಕೊಂಡಿದ್ದಾರೆ. ಆನೆಯ ತಲೆ ಮೇಲೆ ಮಾವುತ ಕುಳಿತುಕೊಂಡಿದ್ದಾನೆ. ಆನೆ ತುಂಬಿ ಹರಿಯುವ ನದಿಯನ್ನು ಈಜುವ ಮೂಲಕ ತನ್ನ ಜೀವದ ಜೊತೆ ಮಾಲೀಕನ ಜೀವವನ್ನು ಕೂಡ ಉಳಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ. 

ದೇಶದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಹಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ್ದರು. ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೆಲ್ವಾಡ್‌ನ ನಂದಗೌಮುಖ ಎಂಬಲ್ಲಿ ಈ ದುರಂತ ಸಂಭವಿಸಿದೆ. ಉಕ್ಕಿ ಹರಿಯುತ್ತಿದ್ದ ಸಣ್ಣ ಹೊಳೆಯೊಂದನ್ನು ದಾಟುತ್ತಿದ್ದಾಗ ನೀರಿನ ರಭಸಕ್ಕೆ ಸಿಲುಕಿ ಕಾರು ಕೊಚ್ಚಿ ಹೋಗಿದ್ದು, ಮೂವರು ನಾಪತ್ತೆಯಾಗಿದ್ದು, ಮೂವರ ಶವ ಪತ್ತೆಯಾಗಿದೆ. ನಿನ್ನೆ(ಜುಲೈ 12) ಈ ಅನಾಹುತ ಸಂಭವಿಸಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. 

ಬಾಗಲಕೋಟೆ: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ, ಪ್ರವಾಹದ ಎಚ್ಚರಿಕೆ

ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದರೆ, ರಾಜ್ಯಗಳಲ್ಲಿ ನಿರಂತರ ಮಳೆಯ ನಡುವೆ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಮಳೆಯ ನಡುವೆ ಸಿಡಿಲು ಬಡಿದು ಮೂವರು ಮಕ್ಕಳು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗುಜರಾತ್‌ನ ಹೆಚ್ಚಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಜೂನ್ 1ರಿಂದ ಸಾವಿನ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.
 

Follow Us:
Download App:
  • android
  • ios