Asianet Suvarna News Asianet Suvarna News

ಆಯೋಧ್ಯೆಯಲ್ಲಿ ರಾಮಮಂದಿರವೇ ಇರಲಿಲ್ಲ, ಪ್ರಾಣಪ್ರತಿಷ್ಠೆ ಕೇವಲ ಜಾಹೀರಾತು; ಅನುರಾಗ್ ಕಶ್ಯಪ್!

ದೇಶದ ಪ್ರಜಾಪ್ರಭುತ್ವ ಹೈಜಾಕ್ ಆಗಿದೆ. ಇದೀಗ ಫ್ಯಾಸಿಸಂ ವಿರುದ್ಧ ನಮ್ಮ ಹೋರಾಟ ಎಂದು ಪ್ರಖರ ಮಾತುಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ರಾಮ ಮಂದಿರ ವಿಚಾರ ಕೆದರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
 

Ayodhya never a Ram Mandir Anurag Kashyap slams Prana pratishta was an advertisement ckm
Author
First Published Mar 8, 2024, 7:57 PM IST

ಕೋಲ್ಕತಾ(ಮಾ.08) ಬಾಲಿವುಡ್ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕಶ್ಯಪ್, ರಾಮ ಮಂದಿರ ವಿಚಾರದಲ್ಲಿ ಹೇಳಿಕೆ ನೀಡಿ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಜನವರಿ 22 ರಂದು ನಡೆದ ರಾಮ ಮಂದಿರ ಪ್ರಾಣಪ್ರತಿಷ್ಠೆ ಕೆಲವರು ಮಾಡಿದ ಜಾಹೀರಾತಾಗಿತ್ತು. ಸುದ್ದಿಗಳ ನಡುವೆ ಬರವು ಜಾಹೀರಾತು. ಆದರೆ ಈ ಜಾಹೀರಾತನ್ನು 24 ಗಂಟೆ ಹಾಕಲಾಗಿತ್ತು ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

ಕೋಲ್ಕತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನುರಾಗ್ ಕಶ್ಯಪ್, ರಾಮ ಮಂದಿರ ಪ್ರಾಣಪ್ರತಿಷ್ಠೆ ಒಂದು ಪೂಜಾ ಕಾರ್ಯಕ್ರಮ, ರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠಾನೆಯಾಗಿರಲಿಲ್ಲ , ಕೇವಲ ಪ್ರಚಾರಕ್ಕಾಗಿ ಮಾಡಿದ ಜಾಹೀರಾತಾಗಿತ್ತು ಎಂದಿದ್ದಾರೆ. ನಾನು ವಾರಣಾಸಿಯಲ್ಲಿ ಹುಟ್ಟಿ ಬೆಳೆದಿದ್ದೇನೆ. ಧರ್ಮ ಹಾಗೂ ವ್ಯವಹಾರವನ್ನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ನಾನು ನಾಸ್ತಿಕನಾಗಿ ಜೀವನದ ಖುಷಿ ಕಂಡುಕೊಂಡಿದ್ದೇನೆ ಎಂದಿದ್ದಾರೆ. 

ಎಷ್ಟು ಪ್ರಯತ್ನ ಪಟ್ಟರೂ ಚಿಯಾನ್ ವಿಕ್ರಮ್‌ ಸಿಕ್ಕಿಲ್ಲ: ತಮಿಳು ಸ್ಟಾರ್ ಮೇಲೆ ಅನುರಾಗ್ ಕಶ್ಯಪ್ ಬೇಸರ

ಎಲ್ಲರೂ ರಾಮ ಮಂದಿರ ಎಂದು ಜಪ ಮಾಡುತ್ತಿದ್ದಾರೆ. ಆಯೋಧ್ಯೆಯಲ್ಲಿ ರಾಮ ಮಂದಿರವೇ ಇರಲಿಲ್ಲ. ಅಲಿ ಇದ್ದದ್ದು, ರಾಮ ಲಲ್ಲಾ ಮಂದಿರ ಮಾತ್ರ.ಯಾರಿಗೂ ರಾಮ ಮಂದಿರ ಹಾಗೂ ರಾಮ ಲಲ್ಲಾ ಮಂದಿರದ ವ್ಯತ್ಯಾಸವೇ ಗೊತ್ತಿಲ್ಲ.  ನಿಮ್ಮ ಬಳಿ ಹೇಳಲು, ಚರ್ಚಿಸಲು, ಸಾಧನೆಯನ್ನು ವಿವರಿಸಲು ಏನೂ ಇಲ್ಲ ಎಂದಾಗ ಧರ್ಮ ಎಳೆದು ತರುತ್ತೀರಿ. ಧರ್ಮವೂ ಕಿಡಿಗೇಡಿಗೆ ಕೊನೆಯ ಅಸ್ತ್ರವಾಗಿದೆ ಎಂದು  ಅನುರಾಗ್ ಕಶ್ಯಪ್ ಹೇಳಿದ್ದಾರೆ.

ನಮ್ಮ ಹೋರಾಟ ನಿಲ್ಲುವುದಿಲ್ಲ. ನಾವು ಹೋರಾಡುತ್ತೇವೆ. ಇದೀಗ ಮಾಹಿತಿಗಳನ್ನು ಆಲ್ಗರಿದಮ್ ನಿಯಂತ್ರಿಸುತ್ತದೆ. ಇದನ್ನು ನಿಯಂತ್ರಿಸುವವರು ಇತರರಿಗಿಂತ ನಾಲ್ಕು ಹೆಜ್ಜೆ ಮುಂದಿದ್ದಾರೆ. ಫೋನ್ ಮೂಲಕ ಕೆಲವೇ ಕೆಲವು, ನಿರ್ದಿಷ್ಛ ಮಾಹಿತಿಗಳನ್ನು ಮಾತ್ರ ನೀಡಲಾಗುತ್ತದೆ. ಜನರು ಇದೇನ್ನ ಸತ್ಯ ಎಂದು ನಂಬುತ್ತಿದ್ದಾರೆ. ಜನರು ಯಾವಾಗ ಫೋನ್ ನಾಶಪಡಿಸುತ್ತಾರೆ, ಅಂದು ಕ್ರಾಂತಿಯಾಗಲಿದೆ ಎಂದು ಅನುರಾಗ್ ಕಶ್ಯಪ್ ಸೋಶಿಯಲ್ ಮಿಡಿಯಾ ಹಾಗೂ ಡಿಜಿಟಲ್ ಮಿಡಿಯಾ ಮೂಲಕ ಅಭಿಪ್ರಾಯ ಮೂಡಿಸುತ್ತಿರುವುದು ಅಪಾಯಾಕಾರಿ ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ.   

Watch: ಮಹಿಳೆಯರ ಹಸ್ತ ಮೈಥುನದ ಬಗ್ಗೆ ಮಾತನಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸುಮುಖಿ ಯಾರು?

ಸ್ವದೇಶಿ ಚಳುವಳಿ ವೇಳೆ ಜನರು ವಿದೇಶಿ ವಸ್ತ್ರಗಳನ್ನು ಸುಟ್ಟಿದ್ದರು. ಅದೇ ರೀತಿಯ ಕ್ರಾಂತಿ ಫೋನ್ ನಾಶಮಾಡುವ ಮೂಲಕವೂ ಆಗಬೇಕಿದೆ ಎಂದು ಡಿಜಿಟಲ್ ಕ್ಯಾಂಪೇನ್ ವಿರುದ್ದ ಹರಿಹಾಯ್ದಿದ್ದಾರೆ. ರಾಮ ಮಂದಿರ ವಿಚಾರ ಮುಂದಿಟ್ಟು ಪರೋಕ್ಷವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಅನರಾಗ್ ಕಶ್ಯಪ್ ಹರಿಹಾಯ್ದಿದ್ದಾರೆ.
 

Follow Us:
Download App:
  • android
  • ios