ಮುಂಬೈನ ಆಟೋ ಚಾಲಕನೋರ್ವ ಆಟೋವನ್ನು ಪಾದಾಚಾರಿ ಮೇಲ್ಸೇತುವೆ ಮೇಲೆ ಓಡಿಸಿದ ಕಾರಣಕ್ಕೆ ಸುದ್ದಿಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಹಾನಗರಗಳಲ್ಲಿ ಆಟೋ ರಿಕ್ಷಾ ಚಾಲಕರು ಕೆಲವೊಮ್ಮೆ ತಮ್ಮ ರಾಶ್‌ ಡ್ರೈವಿಂಗ್ ಹಾಗೂ ಕರೆದ ಸ್ಥಳಕ್ಕೆ ಬಾರದಿರುವ ಕಾರಣಕ್ಕೆ ಹಾಗೂ ಡಬ್ಬಲ್‌ ಚಾರ್ಜ್‌ ಮಾಡುವ ಕಾರಣಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇದರೊಂದಿಗೆ ಪ್ರಾಮಾಣಿಕತೆ ಮೆರೆದ ಕಾರಣಕ್ಕೂ ಹಲವು ಆಟೋಚಾಲಕರು ಸುದ್ದಿಯಾಗಿದ್ದಾರೆ. ಆದರೆ ಈಗ ಮುಂಬೈನ ಆಟೋ ಚಾಲಕನೋರ್ವ ಆಟೋವನ್ನು ಪಾದಾಚಾರಿ ಮೇಲ್ಸೇತುವೆ ಮೇಲೆ ಓಡಿಸಿದ ಕಾರಣಕ್ಕೆ ಸುದ್ದಿಯಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಂದಹಾಗೆ ಈ ಘಟನೆ ಮಹಾರಾಷ್ಟ್ರದ ಉತ್ತರ ಮುಂಬೈಯ ಪಲ್‌ಘಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48 ದೆಹಲಿ ಹಾಗೂ ಚೆನ್ನೈ ನಗರ ಹಾಗೂ ಮಹಾರಾಷ್ಟ್ರದಿಂದ ಒಟ್ಟು ಏಳು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದ.ವಿಡಿಯೋದಲ್ಲಿ ಕಾಣಿಸುವಂತೆ ಆಟೋ ಚಾಲಕ ಒಂದು ಬದಿಯಿಂದ ಪಾದಾಚಾರಿ ಮೇಲ್ಸೇತುವೆಯಿಂದ ಮೇಲೆ ಹತ್ತಿ ಮತ್ತೊಂದು ಬದಿ ಮೇಲ್ಸೇತುವೆಯಿಂದ ಇಳಿಜಾರಿನಲ್ಲಿ ಕೆಳಗೆ ಇಳಿಯುತ್ತಾನೆ. ಸಾಮಾನ್ಯವಾಗಿ ಒನ್‌ವೇ ರಸ್ತೆಗಳಲ್ಲಿ ಕೆಲವೆಡೆ ಕಿಲೋ ಮೀಟರ್ ದೂರದವರೆಗೆ ಯಾವುದೇ ಯೂಟರ್ನ್‌ ಗಳಿರುವುದಿಲ್ಲ. ಒಮ್ಮೆ ಆ ರಸ್ತೆಯಲ್ಲಿ ವಾಹನ ಚಲಾಯಿಸಲು ಶುರು ಮಾಡಿದ ಮೇಲೆ ತಿರುಗಿ ಬರಬೇಕಾದರೆ ತುಂಬಾ ದೂರದಲ್ಲಿರುವ ಯೂಟರ್ನ್‌ ಅನ್ನು ಪಾಸಾಗಿ ಮರಳಬೇಕು. ಇದೇ ಕಾರಣಕ್ಕೆ ಕೆಲವರು ರಸ್ತೆ ವಿಭಾಜಕಗಳನ್ನು ಸರಿಸಿ ಪಕ್ಕಕ್ಕೆ ಇರಿಸಿ ಅಥವಾ ವಿಭಾಜಕದ ಮೇಲೆ ಗಾಡಿ ಹತ್ತಿಸಿ ಅರ್ಧದಿಂದ ವಾಹನ ತಿರುಗಿಸಲು ಯತ್ನಿಸುವುದುಂಟು. 

Scroll to load tweet…

ಆದರೆ ಈ ಆಟೋ ಚಾಲಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪಾದಾಚಾರಿ ಮೇಲ್ಸೇತುವೆ ಮೇಲೆ ಗಾಡಿ ಹತ್ತಿಸಿದ್ದಾನೆ. ಎರಡು ಓನ್‌ವೇ ರಸ್ತೆಗಳ ಮಧ್ಯೆ ಪಾದಾಚಾರಿಗಳು ರಸ್ತೆ ದಾಟಲು ನಿರ್ಮಿಸಲಾದ ಈ ಪಾದಾಚಾರಿ ಮೇಲ್ಸೇತುವೆಯಲ್ಲಿಯೂ ರಿಕ್ಷಾ ಓಡುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಇದೊಂದು ನೋಡಲು ಬಾಕಿ ಇತ್ತು ನೋಡಿ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ರೋಡ್ಸ್ ಆಫ್‌ ಮುಂಬೈ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದನ್ನು ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ತನ್ನನ್ನು ಕಚ್ಚಿದ ಹಾವನ್ನು ಕೊಂದು ಸೇಡು ತೀರಿಸಿಕೊಂಡ ಟರ್ಕಿಯ 2 ವರ್ಷದ ಮಗು

ಇದೇ ಕಾರಣಕ್ಕೆ ಭಾರತದಲ್ಲಿ ಗಾಲಿಕುರ್ಚಿಯೂ ಸಾಗಬಲ್ಲಂತಹ ಪ್ಲೈಒವರ್‌ಗಳನ್ನು ನಿರ್ಮಿಸುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಗೂಗಲ್ ಮ್ಯಾಪ್‌ ಫಾಲೋ ಮಾಡಿದರೆ ಹೀಗೆ ಆಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾದ ಭಾರತದ ವರ್ಸನ್ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ವೈವಿಧ್ಯಮಯ ಭಾರತ ಎಂದು ಕಾಮೆಂಟ್ ಮಾಡಿದ್ದಾರೆ. ಪಾದಾಚಾರಿ ಮಾರ್ಗಗಳನ್ನು ಕೂಡ ಬಿಡದ ಆಟೋ ಚಾಲಕರು ಈಗ ಫ್ಲೈಒವರ್‌ಗಳನ್ನು ಬಿಡುತ್ತಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕೆಲದಿನಗಳ ಹಿಂದೆ ಕೇವಲ ಒಂದು ಆಟೋರಿಕ್ಷಾದಲ್ಲಿ 27 ಜನರು ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉತ್ತರಪ್ರದೇಶದ ಫತೇಪುರ್‌ನಲ್ಲಿ ಈ ಘಟನೆ ನಡೆದಿತ್ತು. ನಿಗದಿಗಿಂತ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಆಟೋವನ್ನು ಸಂಚಾರಿ ಪೊಲೀಸರು ನಿಲ್ಲಿಸಿದ್ದರು. ಆಟೋ ನಿಲ್ಲಿಸಿದ ನಂತರ ಆಟೋದಿಂದ ಇಳಿದ ಜನರನ್ನು ನೋಡಿ ಸ್ವತಃ ಪೊಲೀಸರೇ ಗಾಬರಿ ಬಿದ್ದಿದ್ದರು. ಒಟ್ಟು ಚಾಲಕ ಸೇರಿದಂತೆ ಸಾಮಾನ್ಯವಾಗಿ ನಾಲ್ಕು ಜನ ಸಂಚರಿಸುವ ಈ ಆಟೋದಲ್ಲಿ ಬರೋಬರಿ 27 ಜನ ಪ್ರಯಾಣಿಸಿದ್ದರು. ಇನ್ನು ಈ ಆಟೋದಲ್ಲಿ ಇದ್ದವರೆಲ್ಲಾ ಉದ್‌ ಉಲ್‌ ಪಿತರ್ ಹಬ್ಬದ ಭಾಗವಾಗಿ ಸಮೀಪದ ಮಸೀದಿಯಲ್ಲಿ ವಾಪಸಾಗುತ್ತಿದ್ದರು. 

ತುಮಕೂರಿನಲ್ಲಿ ಮಳೆ ಅವಾಂತರ: ಚರಂಡಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ