Asianet Suvarna News Asianet Suvarna News

ತುಮಕೂರಿನಲ್ಲಿ ಮಳೆ ಅವಾಂತರ: ಚರಂಡಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ

ಮಳೆಯಿಂದ ರೈಲ್ವೆ ಅಂಡರ್ ಪಾಸ್‌ನಲ್ಲಿ ನಿಂತಿದ್ದ ನೀರಿನಲ್ಲಿ ಬಿದ್ದು ಹೋದ ಮೊಬೈಲ್‌ ಹುಡುಕಲು ಹೋಗಿ ಆಟೊ ಚಾಲಕರೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಶನಿವಾರ ನಗರದ ಹೆಗಡೆ ಕಾಲೋನಿ ರೈಲ್ವೆ ಅಂಡರ್ ಪಾಸ್ ಸಮೀಪ ಸಂಭವಿಸಿದೆ.

tumakuru auto driver washed away by rain water gvd
Author
Bangalore, First Published Jul 17, 2022, 2:26 AM IST

ತುಮಕೂರು (ಜು.17): ಮಳೆಯಿಂದ ರೈಲ್ವೆ ಅಂಡರ್ ಪಾಸ್‌ನಲ್ಲಿ ನಿಂತಿದ್ದ ನೀರಿನಲ್ಲಿ ಬಿದ್ದು ಹೋದ ಮೊಬೈಲ್‌ ಹುಡುಕಲು ಹೋಗಿ ಆಟೊ ಚಾಲಕರೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಶನಿವಾರ ನಗರದ ಹೆಗಡೆ ಕಾಲೋನಿ ರೈಲ್ವೆ ಅಂಡರ್ ಪಾಸ್ ಸಮೀಪ ಸಂಭವಿಸಿದೆ. ತುಮಕೂರು ಸಿಟಿಯ ಶಾಂತಿನಗರದ ನಿವಾಸಿ ಆಟೋ ಚಾಲಕ ಅಮ್ಜದ್ ಖಾನ್ (44) ನೀರಿನಲ್ಲಿ ಕೊಚ್ಚಿಕೊಂಡು ಹೋದವರು. ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಸರಿಸುಮಾರು 3.30ರ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸತತ ಮೂರ್ನಾಲ್ಕು ಗಂಟೆಗಳ ಕಾಲ ಅಗ್ನಿಶಾಮಕದಳ ಸಿಬ್ಬಂದಿ ಶವಕ್ಕಾಗಿ ಶೋಧ ನಡೆಸಿದ್ದಾರೆ. 

ಘಟನೆ ನಡೆದಿದ್ದು ಹೇಗೆ?: ತುಮಕೂರು ನಗರದ  ಬೆಂಗಳೂರು-ಶಿವಮೊಗ್ಗ ಹೊರ ವರ್ತುಲ ರಸ್ತೆಯಲ್ಲಿ ಬರುವ ಬ್ರಿಡ್ಜ್‌ ಇದಾಗಿದ್ದು,ಅಮ್ಜಾದ್‌ ಖಾನ್‌  ಬ್ರಿಡ್‌ ಕೆಳಗೆ ಆಟೋ ಚಲಾಯಿಸಿಕೊಂಡು ಹೋಗಿದ್ದ ಈ ವೇಳೆ ಆಟೋ ಮೊಬೈಲ್‌ ನೀರಿನಲ್ಲಿ ಬಿದ್ದಿತ್ತು. ಬಳಿಕ ನೀರು ತುಂಬಿದ್ದ ಬ್ರಿಡ್ಜ್‌ ದಾಟಿದ ಬಳಿಕ ಮುಂದೆ ಆಟೋ ನಿಲ್ಲಿಸಿ ಮೊಬೈಲ್‌ ಹುಡುಕುವ ಸಲುವಾಗಿ ಅಮ್ಜಾದ್‌ ನಡೆದುಕೊಂಡು ವಾಪಸ್ ಬ್ರಿಡ್ಜ್‌ ಕೆಳಗೆ ನಡೆದುಕೊಂಡು ಬಂದಿದ್ದಾನೆ. ಇದೇ ವೇಳೆ ಅಮ್ಜಾದ್‌ ಎದುರಿಗೆ ಟಿಪ್ಪರ್‌ ಬಂದಿದೆ. ಟಿಪ್ಪರ್‌ ಲಾರಿ ನೀರಿನ ಅಲೆಯ ಹೊಡೆತಕ್ಕೆ ಅಮ್ಜಾದ್‌ ಆಯತಪ್ಪಿ ಕೆಳಗೆ ಬಿದಿದ್ದಾನೆ, ರಭಸವಾಗಿ ಹರಿಯುವ ನೀರಿ ಸೆಳೆತಕ್ಕೆ ಸಿಲುಕಿ ಚರಂಡಿಯಲ್ಲಿ ಮುಳುಗಿ ಹೋಗಿದ್ದಾನೆ. 

Tumakuru: ನಕಲಿ ದಾಖಲೆ ಸೃಷ್ಟಿಸಿ ಜಮೀನು ಹಕ್ಕು ಬದಲಾವಣೆ: ಎಫ್‌ಐಆರ್‌ ದಾಖಲು

ರಾತ್ರಿ ಹಿನ್ನೆಲೆ ಶವ ಶೋಧ ಮುಂದೂಡಿಕೆ: ಆಟೋ ಚಾಲಕ ಮೊರಿಯಲ್ಲಿ ಮುಳುಗಿದ ಜಾಗದಿಂದು ಸುಮಾರು ಎರಡು ಕಿಲೋ ಮೀಟರ್ ದೂರದ ಭೀಮಸಂದ್ರ ಗ್ರಾಮದಲ್ಲಿ ಇರುವ ಕೊಳಚೆ ನೀರು ಶುದ್ಧೀಕರಣ ಘಟಕದವರೆಗೂ ಅಗ್ನಿಶಾಮಕದಳ ಸಿಬ್ಬಂದಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ, ಆದರೆ ಶವ ಮಾತ್ರ ದೊರೆತ್ತಿಲ್ಲ, ಕತ್ತಲೆಯಾದ ಪರಿಣಾಮ ಶವ ಹುಡುಕಾಟದ ಕಾರ್ಯಾಚರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಶವ ಹುಡುಕಾಟ ಶುರುವಾಗಲಿದೆ.

ತುಂಗಾಭದ್ರ ನದಿಯಲ್ಲಿ ಕೊಚ್ಚಿಹೋದ ಯುವಕ: ಸ್ನಾನ ಮಾಡಲು ಹೋಗಿ ತುಂಗಾಭದ್ರ ನದಿಯಲ್ಲಿ ಯುವಕ ಕೊಚ್ಚಿ ಹೋಗಿದ್ದಾನೆ.  ದಾವಣಗೆರೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಬಳಿ ತುಂಗಾಭದ್ರ ನದಿ ತುಂಬಿ ಹರಿಯುತ್ತಿದೆ.  ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ತಾಂಡದ ಪರಮೇಶ್ ನಾಯ್ಕ್(35) ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ.  ಪರಮೇಶ್ ನಾಯ್ಕ್ ಕುಟುಂಬ ಸಮೇತರಾಗಿ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಬಂದಿದ್ದರು.  ನದಿ ಪಾತ್ರಕ್ಕೆ ಯಾರು ಹೋಗಬಾರದು ಎಂದು ಸೂಚನೆ ನೀಡಿದರೂ ಯುವಕ ದುಸ್ಸಾಹಸಕ್ಕೆ ಕೈ ಹಾಕಿದ್ದ.  
 
ಗುಬ್ಬಿಯಲ್ಲಿ ಅಕ್ರಮ: ಭ್ರಷ್ಟ ಅಧಿಕಾರಿಗಳನ್ನ ಜೈಲಿಗಟ್ಟಿಸಿದ ಶಾಸಕ ಶ್ರೀನಿವಾಸ್‌

ನದಿಯಲ್ಲಿ ಇಳಿದು ಸ್ನಾನ ಮಾಡುವಾಗ ನೀರಿನ ರಭಸಕ್ಕೆ  ಯುವಕ ಕೊಚ್ವಿಹೋಗಿದ್ದಾನೆ.  ಸ್ಥಳಕ್ಕೆ ಮಲೆಬೆನ್ನೂರು ಠಾಣೆ ಪೊಲೀಸರು, ಹರಿಹರ ತಾಹಶೀಲ್ದಾರ್ ಭೇಟಿ ನೀಡಿದ್ದಾರೆ.  ಮುಳುಗು ತಜ್ಞರ ತಂಡದಿಂದ ಪರಮೇಶ್ ನಾಯ್ಕ್‌ಗಾಗಿ ಹುಡುಕಾಟ ನಡೆಯುತ್ತಿದೆ. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios