Asianet Suvarna News

ಉಸಿರು ಉಳಿಸಿದ ವೈದ್ಯಕೀಯ ಕ್ಷೇತ್ರ ವೃಂದಕ್ಕೆ ಭಾರತ ರತ್ನ ನೀಡಿ; ಮೋದಿಗೆ ಕೇಜ್ರಿವಾಲ್ ಆಗ್ರಹ!

  • ಭಾರತದಲ್ಲಿ ಮತ್ತೆ ಸದ್ದು ಮಾಡಿದ ಭಾರತ ರತ್ನ
  • ಜೀವ ಉಳಿಸಿದ ವೈದ್ಯ ವೃಂದಕ್ಕೆ ಭಾರತ ರತ್ನ ಪ್ರಶಸ್ತಿ ನೀಡಿ
  • ಪ್ರಧಾನಿ ಮೋದಿಗೆ ಆಗ್ರಹಿಸಿದ ದೆಹೆಲಿ ಸಿಎಂ ಕೇಜ್ರಿವಾಲ್
     
Arvind Kejriwal demand PM Modi for Bharat ratna to Indian doctors and healthcare workers ckm
Author
Bengaluru, First Published Jul 4, 2021, 10:27 PM IST
  • Facebook
  • Twitter
  • Whatsapp

ನವದೆಹಲಿ(ಜು.04): ಭಾರತ ರತ್ನ ಪ್ರಶಸ್ತಿ ಮತ್ತೆ ಸದ್ದು ಮಾಡುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ವಿಶೇಷ ಅಗ್ರಹ ಮಾಡಿದ್ದಾರೆ. ಸಾಂಕ್ರಾಮಿಕ ಸಂಕಷ್ಟದಲ್ಲಿ ಭಾರತೀಯರ ಜೀವ ಉಳಿಸಲು ಸತತ ಹೋರಾಟ ಮಾಡುತ್ತಿರುವ ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಆಗ್ರಹ; ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ!.

ಇಡಿ ವೈದ್ಯಕೀಯ ಸಮುದಾಯ, ಎಲ್ಲಾ ವೈದ್ಯರು, ನರ್ಸ್, ಆರೋಗ್ಯ ಸಿಬ್ಬಂದಿಗಳು, ಮುಂಚೂಣಿ ಕಾರ್ಯಕರ್ತರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಈ ಮೂಲಕ ತಮ್ಮದ ಪ್ರಾಣದ ಹಂಗು ತೊರೆದು ಭಾರತೀಯರ ಜೀವ ಉಳಿಸುತ್ತಿರುವ ಆರೋಗ್ಯಕ್ಷೇತ್ರದ ಸಿಬ್ಬಂದಿಗಳು ಹಾಗೂ ಕೊರೋನಾದಿಂದ ಮೃತರಾದ ಆರೋಗ್ಯ ಸಿಬ್ಬಂದಿಗಳಿಗೆ ಗೌರವ ಸೂಚಿಸಲು ಇದು ಅತ್ಯುತ್ತಮ ಸಮಯ ಎಂದು ಅರವಿಂದ್ ಕೇಜ್ರಿವಾಲ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಭಾರತ ರತ್ನ ಪ್ರಶಸ್ತಿ ಅಭಿಯಾನ; ದೇಶದ ಜನತಗೆ ವಿಶೇಷ ಮನವಿ ಮಾಡಿದ ರತನ್ ಟಾಟಾ!

ಇದು ಒಬ್ಬ ವೈದ್ಯರಿಗೆ, ಅಥವಾ ಒಬ್ಬರಿಗೆ ನೀಡಬೇಕಾದ ಭಾರತ ರತ್ನ ಅಲ್ಲ, ಇದು ಆರೋಗ್ಯ ಸಮುದಾಯದ ಪ್ರತಿಯೊಬ್ಬರಿಗೆ ನೀಡಬೇಕಾದ ಪ್ರಶಸ್ತಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.  ಕೇಜ್ರಿವಾಲ್ ಭಾರತ ರತ್ನ ಪ್ರಶಸ್ತಿ ಆಗ್ರಹ ಮಾಡಿದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

Follow Us:
Download App:
  • android
  • ios