ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಆಗ್ರಹ; ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ!
- ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ನಿಧನಕ್ಕೆ ಮೋದಿ ಸೇರಿ ಗಣ್ಯರ ಸಂತಾಪ
- ದಿಗ್ಗಜ ಮಿಲ್ಕಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಒತ್ತಾಯ
- ಕ್ರೀಡಾಭಿಮಾನಿಗಳ ಆಗ್ರಹಕ್ಕೆ ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ
ನವದೆಹಲಿ(ಜೂ.19): ಮಿಂಚಿನ ಓಟಗಾರ, ಭಾರತದ ಕೀರ್ತಿಪತಾಕೆ ವಿಶ್ವಮಟ್ಟದಲ್ಲಿ ಹಾರಿಸಿದ ಕ್ರೀಡಾಪಟು, ಫ್ಲೆೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ನಿನ್ನೆ(ಜೂ18) ಕೊನೆಯುಸಿರೆಳೆದಿದ್ದಾರೆ. ಕೊರೋನಾದಿಂದ ಅಸ್ವಸ್ಥಗೊಂಡಿದ್ದ 91 ವರ್ಷದ ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತ ಅಭಿಮಾನಿಗಳು ಸಂತಾಪದ ಜೊತೆಗೆ ವಿಶೇಷ ಆಗ್ರಹವನ್ನು ಮಾಡಿದ್ದಾರೆ. ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯರ ಆಗ್ರಹಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸ್ಪಂದಿಸಿದ್ದಾರೆ.
'ಫ್ಲೈಯಿಂಗ್ ಸಿಖ್' ಖ್ಯಾತಿಯ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಇನ್ನಿಲ್ಲ
ಸ್ವತಂತ್ರ ಭಾರತದ ಕ್ರೀಡೆಯನ್ನು ಕಣ್ಣೆತ್ತಿ ನೋಡುವ ಸ್ಥಿತಿಯಲ್ಲಿಲ್ಲದ ಕಾಲದಲ್ಲಿ ಮಿಲ್ಕಾ ಸಿಂಗ್ 1958ರ ಕಾಮನ್‌ವೆಲ್, ಏಷ್ಯನ್ ಗೇಮ್ಸ್, 1960ರ ರೋಮ್ ಒಲಿಂಪಿಕ್ಸ್ ಸೇರಿದಂತೆ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಇದೀಗ ಭಾರತದ ಕೋಟ್ಯಾಂತರ ಕ್ರೀಡಾಪಟುಗಳಿಗೆ ಸ್ಪೂರ್ತಿಯ ಚಿಲುಮೆಯಾಗಿರುವ ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಬೇಕು ಎಂದು ಅಭಿಯಾನ ಆರಂಭಗೊಂಡಿದೆ. ಇದಕ್ಕೆ ಸ್ಪಂದಿಸಿದ ಕಿರಣ್ ರಿಜಿಜು, ನಿಮ್ಮ ಸಂದೇಶವನ್ನು ನರೇಂದ್ರ ಮೋದಿಗೆ ತಲುಪಿಸುತ್ತೇನೆ ಎಂದಿದ್ದಾರೆ.
ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು
1959ರಲ್ಲಿ ಮಿಲ್ಕಾ ಸಿಂಗ್‌ಗೆ ಭಾರತ ಸರ್ಕಾರ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು 2001ರಲ್ಲಿ ಅರ್ಜು ಪ್ರಶಸ್ತಿಗೂ ಭಾಜನರಾಗಿದ್ದಾರೆ. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ನ್ಯಾಶಲ್ ಗೇಮ್ಸ್ ಸೇರಿ 7 ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿರುವ ಮಿಲ್ಕಾ ಭಾರತ ರತ್ನ ಪ್ರಶಸ್ತಿಗೆ ಅರ್ಹರು. ಹಾಕಿ ದಿಗ್ಗಜ ಮೇಜರ್ ಧ್ಯಾನಚಂದ್ ಜೊತೆಗೆ ಮಿಲ್ಕಾ ಸಿಂಗ್‌ಗೂ ಭಾರತ ರತ್ನ ನೀಡಿ ಎಂದು ಆಗ್ರಹಿಸಿದ್ದಾರೆ.