ಸಾಮಾಜಿಕ ಜಾಲತಾಣದಲ್ಲಿ #BharatRatnaForRatanTata ಅಭಿಯಾನ ಆರಂಭಗೊಂಡಿದೆ. ದೇಶದ ಹೆಮ್ಮೆಯ ಉದ್ಯಮಿ, ಸದಾ ಭಾರತದ ಏಳಿಗೆಗಾಗಿ ದುಡಿಯುತ್ತಿರುವ ರತನ್ ಟಾಟಾಗೆ ಭಾರತ ರತ್ನ ನೀಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಇದರ ನಡುವೆ ಖುದ್ದು ರತನ್ ಟಾಟಾ ಭಾರತೀಯರಲ್ಲಿ ವಿಶೇಷ ಮನವಿ ಮಾಡಿದ್ದಾರೆ.

ನವದಹಲಿ(ಫೆ.06): ದೇಶದಲ್ಲಿ ಇದೀಗ ಭಾರತ ರತ್ನ ಪ್ರಶಸ್ತಿ ಅಭಿಯಾನ ನಡೆಯುತ್ತಿದೆ. ಭಾರತೀಯರ ಹೆಮ್ಮೆಯ, ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾಗೆ ಭಾರತ್ ರತ್ನ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ #BharatRatnaForRatanTata ಅಭಿಯಾನ ಜೋರಾಗಿ ನಡೆಯುತ್ತಿದೆ.

ರೋಲ್ ಮಾಡೆಲ್, ಉದ್ಯಮಿ, ಸಹೃದಯಿ ರತನ್ ಟಾಟಾ!...

ದೇಶಾದ್ಯಾಂತ ಭಾರತ ರತ್ನ ಅಭಿಯಾನ ಹೆಚ್ಚಾಗುತ್ತಿದ್ದಂತೆ ಖುದ್ದು ರತನ್ ಟಾಟಾ ಭಾರತೀಯರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಶಸ್ತಿ ವಿಚಾರ ಭಾರತೀಯರ ಭಾವನೆಯನ್ನು ಗೌರವಿಸುತ್ತೇನೆ. ಆದರೆ ಈ ಪ್ರಶಸ್ತಿ ಅಭಿಯಾನವನ್ನು ಇಲ್ಲಿಗೆ ನಿಲ್ಲಿಸುವಂತೆ ತಮ್ಮೆಲ್ಲರಲ್ಲಿ ಕಳಕಳಿಯ ಮನವಿ ಮಾಡುತ್ತಿದ್ದೇನೆ. ಭಾರತೀಯನಾಗಿರುವುದೇ ನನ್ನ ಅದೃಷ್ಠ ಎಂದು ನಾನು ಭಾವಿಸಿದ್ದೇನೆ. ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ರತನ್ ಟಾಟಾ ಟ್ವೀಟ್ ಮಾಡಿದ್ದಾರೆ.

Scroll to load tweet…

ಕೊರೋನಾ ಹೊಡೆತಕ್ಕೆ ನಲುಗಿದ ಉದ್ಯಮಿಗಳಿಗೆ ಸ್ಫೂರ್ತಿ ನೀಡಿತು ರತನ್ ಟಾಟಾ ಪತ್ರ!

#BharatRatnaForRatanTata ಹ್ಯಾಶ್‌ಟ್ಯಾಗ್ ಅಭಿಯಾನದಲ್ಲಿ ದೇಶದ ಪ್ರಮುಖ ಗಣ್ಯರು ಪಾಲ್ಗೊಂಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ರತನ್ ಟಾಟಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಒತ್ತಾಯಿಸಿದ್ದಾರೆ. 

Scroll to load tweet…
Scroll to load tweet…