'ಇಂಟೆಲಿಜೆನ್ಸ್ ಎಂದರೆ ಜೇಮ್ಸ್ ಬಾಂಡ್ ಮೂವಿ ಅಂತಲ್ಲ'| ನಿಯೋಜಿತ ಭೂಸೇನಾ ಮುಖ್ಯಸ್ಥ ಲೆ.ಜ. ಮನೋಜ್ ನಾರವಾನೆ| 'ಆರ್.ಎನ್. ಕಾವೋ: ಜಂಟಲ್‌ಮನ್ ಸ್ಪೈಮಾಸ್ಟರ್' ಪುಸ್ತಕ ಬಿಡುಗಡೆ| ನಿತಿನ್ ಗೋಖಲೆ ಬರೆದಿರುವ ಪುಸ್ತಕ ಬಿಡುಗಡೆ ಮಾಡಿದ ನಾರವಾನೆ| 'ಗುಪ್ತಚರ ಮಾಹಿತಿ ಹಾಗೂ ಸೇನಾ ಕಾರ್ಯಾಚರಣೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ'| 'ಕರಾರುವಕ್ಕಾದ ಮಾಹಿತಿ ಹೆಕ್ಕಿ ತೆಗೆಯಲು ಗುಪ್ತಚರ ಅಧಿಕಾರಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾನೆ'|
ಪುಣೆ(ಡಿ.22): ಗುಪ್ತಚರ ಕರ್ತವ್ಯ ಎಂದರೆ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ತೋರಿಸುವ ಬಂದೂಕು, ಆಕರ್ಷಕ ಮಹಿಳೆ ಹಾಗೂ ಗುಂಡು-ತುಂಡಿನ ಪಾರ್ಟಿಗಳಲ್ಲಂತಲ್ಲ ಎಂದು ನಿಯೋಜಿತ ಸೇನಾ ಮುಖ್ಯಸ್ಥ ಲೆ.ಜ. ಮನೋಜ್ ನಾರವಾನೆ ಹೇಳಿದ್ದಾರೆ.
ನಿತಿನ್ ಗೋಖಲೆ ಬರೆದಿರುವ 'ಆರ್.ಎನ್. ಕಾವೋ: ಜಂಟಲ್‌ಮನ್ ಸ್ಪೈಮಾಸ್ಟರ್' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಾರವಾನೆ, ಗುಪ್ತಚರ ಮಾಹಿತಿ ಹಾಗೂ ಸೇನಾ ಕಾರ್ಯಾಚರಣೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಹೇಳಿದರು.
ಸೇನಾಪಡೆಗಳಲ್ಲಿನ್ನು ಕೆಬಿ, ಚೋಟು, ಮನೋಜ್‌ರದ್ದೇ ಕಾರುಬಾರು!
ಮಿಲಿಟರಿ ಕಾರ್ಯಾಚರಣೆಗಳು ಶುರುವಾಗುವುದೇ 'ದುಶ್ಮನ್ ಕಾ ಖಬರ್'(ಶತ್ರುಗಳ ಕುರಿತು ಮಾಹಿತಿ)ನಿಂದ. ಮಿಲಿಟರಿ ಕಾರ್ಯಾಚರಣೆಗಳು ಯಶಸ್ವಿಯಾಗಬೇಕಾದರೆ ಬಾಹ್ಯ ಹಾಗೂ ಆಂತರಿಕ ಗುಪ್ತಚರ ಇಲಾಖೆ ಸದಾ ಜಾಗೂರಕತೆಯಿಂದ ಕೆಲಸ ಮಾಡಬೇಕು ಎಂದು ನಾರವಾನೆ ಹೇಳಿದರು.
ಇಂಟೆಲಿಜೆನ್ಸ್ ಎಂದರೆ ಎಲ್ಲರೂ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ತೋರಿಸುವ ಕಾಲ್ಪನಿಕ ಹೀರೋ ಎಂಬಂತೆ ಭಾವಿಸುತ್ತಾರೆ. ಅದರೆ ಕರಾರುವಕ್ಕಾದ ಮಾಹಿತಿ ಹೆಕ್ಕಿ ತೆಗೆಯಲು ಗುಪ್ತಚರ ಅಧಿಕಾರಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾನೆ ಎಂದು ಲೆ.ಜ ಅಭಿಪ್ರಾಯಪಟ್ಟರು.
ಆರ್.ಎನ್.ಕಾವೋ:
ಆರ್.ಎನ್. ಕಾವೋ ಭಾರತದ ಬಾಹ್ಯ ಗುಪ್ತಚರ ಇಲಾಖೆ ರಿಸರ್ಚ್ ಆಂಡ ಎನಾಲಿಸಿಸ್(ರಾ)ದ ಮೊದಲ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದರು. ಭಾರತದ ಗುಪ್ತಚರ ಇತಿಹಾಸದಲ್ಲಿ ಆರ್.ಎನ್. ಕಾವೋ ಸದಾ ಅಮರ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜಾಗಕ್ಕೆ ಅನುಭವಿ ಯೋಧ
ಬಾಂಗ್ಲಾದೇಶ ಸ್ವಾತಂತ್ರ್ಯ, ಸಿಕ್ಕಿಂ ಭಾರತಕ್ಕೆ ಸೇರ್ಪಡೆ ಹೀಗೆ ಅನೇಕ ಸೂಕ್ಮ ಭದ್ರತಾ ವಿಷಯಗಳಲ್ಲಿ ಆರ್.ಎನ್. ಕಾವೋ ಮಹತ್ವದ ಪಾತ್ರ ವಹಿಸಿದ್ದರು.
