Asianet Suvarna News Asianet Suvarna News

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಜಾಗಕ್ಕೆ ಅನುಭವಿ ಯೋಧ

ಸೇನಾ ಮುಖ್ಯಸ್ಥ ಸ್ಥಾನಕ್ಕೆ ಮನೋಜ್ ಮುಕುಂದ್ ನರವಾನೆ ನೇಮಕ ಸಾಧ್ಯತೆ/ ಬಿಪಿನ್ ರಾವತ್ ನಿವೃತ್ತಿಯಿಂದ ತೆರವಾಗುತ್ತಿರುವ ಸ್ಥಾನ/ ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಒಂದನ್ನು ಸ್ವೀಕಾರ ಮಾಡುವ ಸಾಧ್ಯತೆ

Lieutenant General Manoj Mukund to be the next Army chief
Author
Bengaluru, First Published Dec 17, 2019, 12:16 AM IST

ನವದೆಹಲಿ(ಡಿ. 16)  ಭಾರತ ಸೇನೆಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಡಿಸೆಂಬರ್ 31ಕ್ಕೆ ನಿವೃತ್ತರಾಗುತ್ತಿದ್ದು ಅವರ ಸ್ಥಾನಕ್ಕೆ ಮನೋಜ್ ಮುಕುಂದ್ ಅವರು ನೇಮಕವಾಗುವ ಸಾಧ್ಯತೆ ಇದೆ.

ಲೆಫ್ಟಿನಂಟ್ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಪ್ರಸ್ತುತ ಪೂರ್ವ ವಲಯದ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 4000 ಕಿ.ಮೀ ವ್ಯಾಪ್ತಿಯ ಭಾರತ-ಚೀನಾ ಗಡಿ ಪ್ರದೇಶದ ಸಂರಕ್ಷಣಾ  ಜವಾಬ್ದಾರಿಯನ್ನು ಇದು ನಿರ್ವಹಿಸಿಕೊಂಡು ಬಂದಿದೆ.

37 ವರ್ಷ ಸೇನೆಯಲ್ಲಿ ದುಡಿದಿರುವ ಮನೋಕ್ ಮುಕುಂದ್, ಸೇನೆಯ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಶಾಂತಿ, ಯುದ್ಧ ಎರಡೂ ಸಂದರ್ಭದಲ್ಲಿ ಅವರು ಸೇನೆಯನ್ನು ಶಕ್ತವಾಗಿ ಮುನ್ನಡೆಸಿದ್ದಾರೆ.

ಮೋದಿ ಕೈಯಲ್ಲಿ ಅಸ್ಸಾಲ್ಟ್ ರೈಫಲ್: ಸಿಕ್ಕ ಬಲಕ್ಕೆ ಸೈನಿಕರಿಗೆ ಖುಷಿಯಾಗಿದೆ ಫುಲ್!...

ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ ಬೆಟಾಲಿಯನ್,  ಜೊತೆಗೆ ಶ್ರೀಲಂಕಾದಲ್ಲಿ 'ಶಾಂತಿ ಸೇನೆ'ಯನ್ನೂ ಮುನ್ನಡೆಸಿರುವ ಅನುಭವ ಅವರಿಗಿದೆ. ಮಯನ್ಮಾರ್‌ ನಲ್ಲಿ ಭಾರತ ರಾಯಭಾರಿ ಕಚೇರಿಯ ಭಾಗವಾಗಿದ್ದ ಭದ್ರತಾ ಪಡೆಯ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

ಲೆಫ್ಟಿನೆಂಟ್ ಜನರಲ್ ನಾರವಾನೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು,  ಸುಮಾರು ನಾಲ್ಕು ದಶಕಗಳ ಮಿಲಿಟರಿ ವೃತ್ತಿಜೀವನದಲ್ಲಿ ಹಲವು ಪ್ರಮುಖ ಸವಾಲುಗಳನ್ನು ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Follow Us:
Download App:
  • android
  • ios