ಟನ್‌ಗಟ್ಟಲೇ ಚಿನ್ನದ ನಿಕ್ಷೇಪದ ಸುಳಿವು ನೀಡಿದ ಇರುವೆಗಳ ಸೈನ್ಯ

ಬಿಹಾರದ ಜಮುಯಿಯಲ್ಲಿ ದೇಶದ ಶೇ.44ರಷ್ಟು ಚಿನ್ನದ ನಿಕ್ಷೇಪ ಇರುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಇದು ಪತ್ತೆಯಾಗಿದ್ದು ಹೇಗೆ ಎಂಬುದಕ್ಕೆ ಒಂದು ಸ್ವಾರಸ್ಯವಾಗಿದೆ. 

Ants give whereabouts of 230 million tons gold mine in Jamui akb

ಬಿಹಾರ: ಮಾವೋವಾದಿಗಳ ಪ್ರಾಬಲ್ಯವಿರುವ ಬಿಹಾರದ ಜಮುಯಿಯ ಕೆಂಪು ಮಣ್ಣಿನಡಿಯಲ್ಲಿ ಇಷ್ಟು ದೊಡ್ಡ ಚಿನ್ನದ ನಿಕ್ಷೇಪ ಅಡಗಿದೆ ಎಂಬುದನ್ನು ಯಾರೂ ಅರಿತಿರಲಿಲ್ಲ. ಇಲ್ಲಿರುವ ಚಿನ್ನದ ನಿಕ್ಷೇಪ ಪತ್ತೆ ಮಾಡಲು ಸುಮಾರು 40 ವರ್ಷಗಳೇ ಬೇಕಾಗಿತ್ತು. ಜೊತೆಗೆ ಇದರ ಪತ್ತೆ ಕೇವಲ ಇರುವೆಗಳಿಂದ ಸಾಧ್ಯವಾಗಿದೆ ಎಂದರೆ ನೀವು ನಂಬಲೇಬೇಕು. ಐತಿಹ್ಯಗಳ ಪ್ರಕಾರ ನಲವತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬೃಹತ್ ಆಲದ ಮರವಿತ್ತು. ಸೂರ್ಯನ ಶಾಖ ಮತ್ತು ಶಾಖದಿಂದ ತಪ್ಪಿಸಿಕೊಳ್ಳಲು ಇಲ್ಲಿ ಇರುವೆಗಳು ಆಲದ ಮರದ ಕೆಳಗೆ ಗೂಡು ಕಟ್ಟಲು ಪ್ರಾರಂಭಿಸುತ್ತವೆ. ಗೂಡು ಕಟ್ಟುವ ಸಲುವಾಗಿ ಇರುವೆಗಳು ಭೂಮಿಯ ಕೆಳಭಾಗದಿಂದ ಮಣ್ಣನ್ನು ಹೊರ ತರಲು ಪ್ರಾರಂಭಿಸಿದವು. 

ಸ್ಥಳೀಯರು ಈ ಇರುವೆಗಳು ಭೂಮಿಯ ಆಳದಿಂದ ತಂದ ಮಣ್ಣಿನಲ್ಲಿ ಹಳದಿ ಬಣ್ಣದ ಮಿಶ್ರಣವಿರುವುದನ್ನು ಪತ್ತೆ ಮಾಡಿದರು. ಅಲ್ಲದೇ ಈ ಸುದ್ದಿ ಶರವೇಗದಲ್ಲಿ ಆ ಪ್ರದೇಶದ ಸುತ್ತಮುತ್ತಲ ಹಳ್ಳಿಗಳಲ್ಲಿ ಹರಡಿತು. ಅಲ್ಲದೇ ಚಿನ್ನದ ನಿಕ್ಷೇಪದ ಹುಡುಕಾಟಕ್ಕೆ ಕಾರಣವಾಯಿತು. ಭಾರತದಲ್ಲಿ ಅತಿ ಹೆಚ್ಚು ಚಿನ್ನದ ನೀಕ್ಷೇಪೂ  ಕರ್ನಾಟಕ ರಾಜ್ಯದಲ್ಲಿ ಕಂಡುಬರುತ್ತದೆ. ರಾಜ್ಯದ ಕೋಲಾರ ಚಿನ್ನದ ಗಣಿ ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ಚಿನ್ನದ ಗಣಿಗಳಲ್ಲಿ ಒಂದಾಗಿದೆ. ಆದಾಗ್ಯೂ, 2001 ರಲ್ಲಿ ಅದನ್ನು ಮುಚ್ಚಲಾಯಿತು.

Gold Mining: ಬಿಹಾರದಲ್ಲಿ ಪತ್ತೆಯಾಯ್ತು ದೇಶದ ಅತೀ ದೊಡ್ಡ ಚಿನ್ನದ ನಿಕ್ಷೇಪ

ಬಿಹಾರದ ಜಮುಯಿ ಜಿಲ್ಲೆಯ ಕರ್ಮಾತಿಯಾ, ಝಾಝಾ ಮತ್ತು ಸೋನೋ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಳೆದ ವರ್ಷ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಬಿಹಾರದ ಗಣಿಗಳಲ್ಲಿ ದೇಶದ ಒಟ್ಟು ಚಿನ್ನದ ಶೇಕಡಾ  44ರಷ್ಟು ಸಿಗುತ್ತದೆ ಎಂದು ಲೋಕಸಭೆಗೆ ತಿಳಿಸಿದ್ದಾರೆ. ಈ ಚಿನ್ನದ ಒಟ್ಟು ಪ್ರಮಾಣ ಸುಮಾರು 230 ಮಿಲಿಯನ್ ಟನ್ ಆಗಿರಬಹುದು.

ಕೆಜಿಎಫ್‌ ಚಿನ್ನದ ಗಣಿಯಲ್ಲಿ ಖನಿಜಗಳ ಶೋಧ
ಈ ಚಿನ್ನದ ನಿಕ್ಷೇಪ ಪತ್ತೆಯಾದ ಹಿನ್ನೆಲೆಯಲ್ಲಿ ಚಿನ್ನದ ಗಣಿ ಗಣಿಗಾರಿಕೆಗೆ ಅನುಮತಿ ನೀಡಲು ಬಿಹಾರ ಸರ್ಕಾರ (Bihar government) ನಿರ್ಧರಿಸಿದೆ ಎಂಬುದಾಗಿ ರಾಜ್ಯದ ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (GSI) ಬಿಹಾರದ ಜಮುಯಿ ಜಿಲ್ಲೆಯಲ್ಲಿ ಸುಮಾರು 230 ಮಿಲಿಯನ್ ಟನ್ ಚಿನ್ನದ ಸಮೀಕ್ಷೆಯನ್ನು ಹೊಂದಿದೆ. ಚಿನ್ನದ ಜೊತೆಗೆ ಸುಮಾರು 37.6 ಟನ್ ಖನಿಜ ಅದಿರು ಕೂಡ ಇದೆ ಎಂದು ವರದಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲೆಯ ಆ ಪ್ರದೇಶದಲ್ಲಿ ಚಿನ್ನದ ಹುಡುಕಾಟ ನಡೆಸಲು ನಿತೀಶ್ ಕುಮಾರ್ ಸರ್ಕಾರ ಇತ್ತೀಚೆಗೆ ನಿರ್ಧರಿಸಿದೆ. ಈ ಕುರಿತು ಕೇಂದ್ರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಗಣಿಗಾರಿಕೆ ಕುರಿತು ಬಿಹಾರ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯೊಂದಿಗೆ ಕೇಂದ್ರ ಸಂಸ್ಥೆ ಚರ್ಚೆ ನಡೆಸಿದೆ ಎಂದು ಬಿಹಾರ ಮುಖ್ಯ ಕಾರ್ಯದರ್ಶಿ ಹರ್ಜೋತ್ ಕೌರ್ (Harjot Kaur) ಪಿಟಿಐಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳನ್ನು ಸಹ ಸಂಪರ್ಕಿಸಲಾಗಿದೆ.  ನಿತೀಶ್ ಕುಮಾರ್ ಸರ್ಕಾರದ ಮೂಲಗಳ ಪ್ರಕಾರ ಈ ಬೃಹತ್ ಚಿನ್ನದ ಗಣಿ ಅನ್ವೇಷಣೆಗೆ ಮುಂದಾಗುವ ಮುನ್ನ ಬಿಹಾರ ಸರ್ಕಾರ ಮುಂದಿನ ಒಂದು ತಿಂಗಳಲ್ಲಿ ಕೇಂದ್ರ ಏಜೆನ್ಸಿಯೊಂದಿಗೆ ಎಂಒಯುಗೆ (memorandum of understanding)ಸಹಿ ಹಾಕುವ ಸಾಧ್ಯತೆ ಇದೆ. ಈ ಮೂಲಕ ಬಿಹಾರ ಸರ್ಕಾರವು ಚಿನ್ನದ ಅನ್ವೇಷಣೆಗಾಗಿ ಆರಂಭಿಕ ಹಂತದಲ್ಲಿ ಅಥವಾ ಜಿ-3 ಮಟ್ಟದಲ್ಲಿ ಕೇಂದ್ರೀಯ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಎಂದು ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios