Asianet Suvarna News Asianet Suvarna News

Gold Mining: ಬಿಹಾರದಲ್ಲಿ ಪತ್ತೆಯಾಯ್ತು ದೇಶದ ಅತೀ ದೊಡ್ಡ ಚಿನ್ನದ ನಿಕ್ಷೇಪ

Intro
ಭಾರತದ ಅತೀ ದೊಡ್ಡ ಚಿನ್ನದ ನಿಕ್ಷೇಪವಿದು
ದೇಶದ ಶೇ. 44ರಷ್ಟು ಚಿನ್ನ ಹೊಂದಿರುವ ಬಿಹಾರದ ಜಮುಯಿ ಪ್ರದೇಶ
ಸಂಸತ್‌ಗೆ ಮಾಹಿತಿ ನೀಡಿದ ಗಣಿ, ಕಲ್ಲಿದ್ದಲು ಸಚಿವ ಪ್ರಹ್ಲಾದ್‌ ಜೋಷಿ
 

More than 40 percent gold reserve of India is in jamui Bihar akb
Author
Bangalore, First Published Dec 3, 2021, 7:04 PM IST
  • Facebook
  • Twitter
  • Whatsapp

ಜಮುಯಿ(ಡಿ.3): ಒಂದೊಮ್ಮೆ ಭಾರತ ಹೊರಗಿನವರಿಂದ ಚಿನ್ನದ ಹಕ್ಕಿ ಎಂದು ಕರೆಯಲ್ಪಟ್ಟಿತ್ತು. ಹೊರಗಿನಿಂದ ಬಂದ ಮೊಘಲರಿಂದ ಹಿಡಿದು ಬ್ರಿಟಿಷರ ವರೆಗೆ ಇಲ್ಲಿನ ಕಲ್ಲುಗಳನ್ನು ಬಿಡದೇ ಲೂಟಿ ಮಾಡಿದ್ದಾರೆ. ಆದರೆ ಶತಶತಮಾನಗಳ ಲೂಟಿಯ ನಂತರವೂ ದೇಶದ ಈ ಒಂದು ಸ್ಥಳವೂ ಅವರ ಕಣ್ಣಿಗೆ ಬೀಳದೇ ಉಳಿದಿದೆ. ಅದೇ ಬಿಹಾರದ ಜಮುಯಿ. ಅನೇಕ ಶತಮಾನಗಳಿಂದ ದೇಶದ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಮರೆಮಾಚಿದ ಸ್ಥಳವಿದು. ಎಲ್ಲರ ಕಣ್ಣುಗಳಿಂದ ತುಂಬಾ ದೂರ... ನೆಲದೊಳಗೂ ಬಹಳ ಆಳ, ತಲುಪಲು ಕೂಡ ತುಂಬಾ ಕಷ್ಟವೆನಿಸಿದ ಪ್ರದೇಶವಿದು.

ಬಿಹಾರದ ಜಮುಯಿ(Jamui) ಜಿಲ್ಲೆಯ ಸೋನೋ ಎಂಬ ಪ್ರದೇಶದಲ್ಲಿ ದೇಶದ ಬೇರೆಲ್ಲೂ ಇರದಷ್ಟು ಚಿನ್ನದ ನಿಕ್ಷೇಪವಿದೆ. ಪ್ರಸ್ತುತ ನಡೆಯುತ್ತಿರುವ ಈ ಚಳಿಗಾಲದ ಅಧಿವೇಶನದಲ್ಲಿ ಬಿಹಾರ ಬಿಜೆಪಿ ಅಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಸಂಜಯ್ ಜೈಸ್ವಾಲ್(Sanjay Jaiswal) ಅವರು ಕೇಂದ್ರ ಸರ್ಕಾರದಿಂದ ಈ ಬಗ್ಗೆ ಮಾಹಿತಿ ಕೇಳಿದ್ದರು. ಬಿಹಾರ ನಿಜವಾಗಿಯೂ ದೇಶದಲ್ಲೇ ಅತಿ ಹೆಚ್ಚು ಚಿನ್ನದ ನಿಕ್ಷೇಪವನ್ನು ಹೊಂದಿದೆಯೇ ಎಂಬ ಪ್ರಶ್ನೆಯನ್ನು ಅವರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ(Prahlad Joshi), ಚಿನ್ನ ಇರುವ ವಿಚಾರವನ್ನು ಖಚಿತಪಡಿಸಿದ್ದಾರೆ.

 

ಪತ್ರದ ಮೂಲಕ ಸಂಜಯ್‌ ಜೈಸ್ವಾಲ್‌ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ದೇಶವು ಒಟ್ಟು 501.83 ಟನ್‌ಗಳಷ್ಟು ಪ್ರಾಥಮಿಕ ಚಿನ್ನದ ಅದಿರು ನಿಕ್ಷೇಪವನ್ನು ಹೊಂದಿದೆ, ಅದರಲ್ಲಿ 654.74 ಟನ್ ಚಿನ್ನವಿದೆ. ಇದರಲ್ಲಿ ಶೇಕಡಾ 44 ರಷ್ಟು ಚಿನ್ನ ಬಿಹಾರದಲ್ಲಿ ಮಾತ್ರ ಪತ್ತೆಯಾಗಿದೆ. ರಾಜ್ಯದ ಜಮುಯಿ ಜಿಲ್ಲೆಯ ಸೋನೊದಲ್ಲಿ 37.6 ಟನ್ ಲೋಹದ ಅದಿರು ಸೇರಿದಂತೆ 222.885 ಮಿಲಿಯನ್ ಟನ್ ಚಿನ್ನದ ಲೋಹದ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

ಆದರೆ ಈ ವಿಚಾರವನ್ನು ಕೇಳಿದ ಬಳಿಕ ಜಮುಯಿಯ ಸೋನಾ ಕರ್ಮಾಟಿಯಾ(Sona Karmatia)ಪ್ರದೇಶದ ಜನ ದಿಗ್ಭ್ರಮೆಗೊಂಡಿದ್ದಾರೆ. ಇದೇ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಛುರ್ಹೆಟ್ ಗ್ರಾಮದ ನಿವಾಸಿಗಳ ಪ್ರಕಾರ, ಅವರು ಬಾಲ್ಯದಿಂದಲೂ 8 ಕಿ.ಮೀ. ವ್ಯಾಪ್ತಿಯಲ್ಲಿ  ಮಣ್ಣಿನಲ್ಲಿ ಹೊಳೆಯುವ ಲೋಹವನ್ನು ನೋಡುತ್ತಿದ್ದರಂತೆ, ಇದು ಚಿನ್ನದ ಹೊರತಾಗಿ ಬೇರೇನೂ ಅಲ್ಲ ಎಂಬುದು ಅವರ ನಂಬಿಕೆ ಅದಾಗ್ಯೂ ಮಹೇಶ್ವರಿ(Maheshwari) ಗ್ರಾಮದ ನಿವಾಸಿ ಹೇಳುವ ಪ್ರಕಾರ 15 ವರ್ಷದ ಹಿಂದೆ ಕೋಲ್ಕತ್ತಾ(Kolkata)ದಿಂದ ತಂಡವೊಂದು ಇಲ್ಲಿಗೆ ಸಮೀಕ್ಷೆಗಾಗಿ ಆಗಮಿಸಿತ್ತು. ಆಗಲೂ ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳ ಬಗ್ಗೆ ಬಹುತೇಕ ದೃಢೀಕರಣವಾಗಿತ್ತು ಎಂದು ಹೇಳುತ್ತಾರೆ. 


ಜಮುಯಿ ಜಿಲ್ಲೆಯ ಸೋನೊ ಬ್ಲಾಕ್‌ನ ಚುರ್ಹೆತ್(Churhet) ಪಂಚಾಯತ್‌ನ ಕರ್ಮಾತಿಯಾ ಗ್ರಾಮ(Karmatia village)ವು ಅಪಾರವಾದ ಚಿನ್ನ ಹೊಂದಿದೆ ಎಂಬ ಕಾರಣಕ್ಕೆ ಹಲವು ವರ್ಷಗಳಿಂದ ಸುದ್ದಿಯಲ್ಲಿದೆ. ಇಲ್ಲಿನ ನಿವಾಸಿಗಳ ಪ್ರಕಾರ, ಬಹಳ ಹಿಂದೆಯೇ ಇಲ್ಲಿನ ಮಣ್ಣಿನಲ್ಲಿ ಅತ್ಯಂತ ಸೂಕ್ಷ್ಮವಾದ ಚಿನ್ನದ ತುಣುಕುಗಳು ಕಂಡುಬಂದಿವೆ. ಆ ಕಾಲದಲ್ಲಿ ಕರ್ಮಾತಿಯ ಜನರು ನದಿಯ ನೀರಿನಲ್ಲಿನ ಮಣ್ಣನ್ನು ಶುಚಿಗೊಳಿಸಿ ಫಿಲ್ಟರ್ ಮಾಡಿ ಚಿನ್ನವನ್ನು ಹೊರತೆಗೆಯುತ್ತಿದ್ದರು. ಹೀಗಾಗಿ ಕೇಂದ್ರದ ತಂಡವೊಂದು ಸಮೀಕ್ಷೆಗೆ ಬಂದಿದ್ದು, ಹಲವು ತಿಂಗಳಿನಿಂದ ಸರ್ವೆ ಕಾರ್ಯ ನಡೆದಿದೆ. ಅದೇ ಸಮೀಕ್ಷೆಯಲ್ಲಿ ಬಿಹಾರದಲ್ಲಿ ದೇಶದ ಶೇಕಡ 44 ರಷ್ಟು ಚಿನ್ನದ ಸಂಗ್ರಹವಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದಲ್ಲಿಯೂ ಈ ಹಿಂದೆ  ಚಿನ್ನದ ನಿಕ್ಷೇಪ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ಸುಮಾರು 113 ಅಡಿ ಆಳದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ಅಧ್ಯಯನ ನಡೆಸಿತ್ತು. ಹಟ್ಟಿ ಚಿನ್ನದ ಗಣಿಯಿಂದ ನಾರಿನಾಳ ಗ್ರಾಮ 70 ಕಿ.ಮೀ. ದೂರದಲ್ಲಿದೆ. 

Follow Us:
Download App:
  • android
  • ios