ಕೆಜಿಎಫ್ ಚಿನ್ನದ ಗಣಿಯಲ್ಲಿ ಖನಿಜಗಳ ಶೋಧ
ಕೋಲಾರದ ಕೆಜಿಎಫ್‌ನಲ್ಲಿ ಚಿನ್ನದ ನಿಕ್ಷೇಪಗಳ ಗಣಿಗಾರಿಕೆ ಆರಂಭವಾಗಿದೆ. ಈ ಬಗ್ಗೆ ಸಚಿವ ಜೋಶಿ ಮಾಹಿತಿ ನೀಡಿದ್ದಾರೆ
ಬೆಂಗಳೂರು (ಸೆ.29): ಕೋಲಾರದ ಕೆಜಿಎಫ್‌ನ ಭಾರತ್ ಗೋಲ್ಡ್ ಮೈನ್ ಕಂಪನಿಯ ಜಮೀನಿನಲ್ಲಿ ಖನಿಜ ಸಂಪತ್ತುಗಳ ಪರಿಶೋಧನೆ ನಡೆಸಲು ನೀಡಿರುವ ನಿರ್ದೇಶನದ ಮೇರೆಗೆ ಕೊರೆಯುವಿಕೆ ಆರಂಭಿಸಲಾಗಿದೆ.
ಈ ಕುರಿತು ಕೇಂದ್ರ ಗಣಿಗಾರಿಕೆ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗಸ್ಟ್‌ನಲ್ಲಿ ಭೇಟಿಯಾಗಿ ಸಭೆ ನಡೆಸಲಾಗಿತ್ತು. ಅದರಂತೆ ಖನಿಜ ಸಂಪತ್ತುಗಳ ಪರಿಶೋಧನೆ ಮಾಡಲು ನಿರ್ದೇಶಿಸಲಾಗಿದೆ.
ಸೋಮವಾರ ಕೋಲಾರದ ಚಿನ್ನದ ಗಣಿಯ ಭೂಮಿಯಲ್ಲಿ ಕೊರೆಯುವಿಕೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಮತ್ತೆ ಇಳಿದ ಚಿನ್ನದ ಬೆಲೆ, 10 ಗ್ರಾಂಗೆ 46,900 ರೂ: ಇಲ್ಲಿದೆ ಬೆಳ್ಳಿ ಮೌಲ್ಯ! .
ನೈಸರ್ಗಿಕ ಖನಿಜ ಸಂಪತ್ತುಗಳಾದ ಚಿನ್ನ ಅಥವಾ ಬೇರೆ ಲೋಹದ ಅದಿರು ಇರುವ ಸಾಧ್ಯತೆಯ ಪರಿಶೋಧನೆ ನಡೆಯಲಿದೆ. ಅಲ್ಲಿ ಯಾವುದೇ ಖನಿಜ ಇದ್ದರೆ ರಾಜ್ಯಕ್ಕೆ ಲಾಭವಾಗಲಿವೆ. ಒಂದು ವೇಳೆ ಆ ಪ್ರದೇಶ ಗಣಿಗಾರಿಕೆಗೆ ಯೋಗ್ಯವಲ್ಲ ಎಂಬ ವರದಿ ಬಂದರೆ ಕೈಗಾರಿಕಾ ಪಾರ್ಕ್ಗೆ ಭೂಮಿ ಹಸ್ತಾಂತರಿಸಲಾಗುತ್ತದೆ.