ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು: ತಿಂಗಳಲ್ಲೇ ಎರಡನೇ ಚೀತಾ ಸಾವಿನ ಕಹಿಸುದ್ದಿ

ದೇಶದಲ್ಲಿ ದೊಡ್ಡ ಬೆಕ್ಕುಗಳ ಜಾತಿಯ ಚೀತಾಗಳನ್ನು ಮರುಪರಿಚಯಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯಲ್ಲಿ ಭಾರತಕ್ಕೆ ತರಲಾದ 20 ಚಿರತೆಗಳಲ್ಲಿ 18 ಚೀತಾಗಳು ಈಗ ಉಳಿದಿವೆ.

another cheetah dies at madhya pradesh national park 2nd in a month ash

ಭೋಪಾಲ್‌ (ಏಪ್ರಿಲ್ 24, 2023): ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ಬಿಡಲಾಗಿದ್ದ ಉದಯ್‌ ಎಂಬ 6 ವರ್ಷದ ಗಂಡು ಚೀತಾವೊಂದು ಭಾನುವಾರ ಸಾವನ್ನಪ್ಪಿದೆ. ಕಳೆದೊಂದು ತಿಂಗಳಲ್ಲಿ ಅರಣ್ಯದಲ್ಲಿ ಚೀತಾ ಸಾವಿನ ಎರಡನೇ ಪ್ರಕರಣ ಇದಾಗಿದೆ. ಹೀಗಾಗಿ ಭಾರತದ ವಾತಾವರಣಕ್ಕೆ ಆಫ್ರಿಕಾ ಚೀತಾಗಳು ಹೊಂದಿಕೊಳ್ಳುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

ಬೆಳಗ್ಗಿನ ಪರಿಶೀಲನೆ ವೇಳೆ ಉದಯ್‌ ಎಂಬ ಹೆಸರಿನ ಚೀತಾ ತಲೆಯನ್ನು ಕೆಳಗೆ ಮಾಡಿಕೊಂಡು ಸೊರಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಜ್ಞರ ವೈದ್ಯರ ತಂಡವನ್ನು ಸ್ಥಳಕ್ಕೆ ಕರೆಸಿ ಚೀತಾವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ದುರದೃಷ್ಟವಶಾತ್‌ ಸಂಜೆ 4 ಗಂಟೆ ವೇಳೆಗೆ ಚೀತಾ ಅನಾರೋಗ್ಯದಿಂದ ಮೃತಪಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್‌ 27ರಂದು ಸಾಶಾ ಎಂಬ ಚೀತಾ ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿತ್ತು. ಇದನ್ನು ನಮೀಬಿಯಾದಿಂದ ಕರೆತರಲಾಗಿತ್ತು.

ಇದನ್ನು ಓದಿ: ಕಾಡು ಬಿಟ್ಟು ನಾಡಿಗೆ ನುಗ್ಗಿದ ನಮೀಬಿಯಾ ಚೀತಾ: ಕುನೋ ಅಭಯಾರಣ್ಯಕ್ಕೆ ಕಳಿಸಲು ಕಾರ್ಯಾಚರಣೆ

ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ. ದೇಶದಲ್ಲಿ ದೊಡ್ಡ ಬೆಕ್ಕುಗಳ ಜಾತಿಯ ಚೀತಾಗಳನ್ನು ಮರುಪರಿಚಯಿಸುವ ಗುರಿಯನ್ನು ಹೊಂದಿರುವ ವಿಶ್ವದ ಮೊದಲ ಖಂಡಾಂತರ ಸ್ಥಳಾಂತರ ಯೋಜನೆಯಲ್ಲಿ ಭಾರತಕ್ಕೆ ತರಲಾದ 20 ಚಿರತೆಗಳಲ್ಲಿ 18 ಚೀತಾಗಳು ಈಗ ಉಳಿದಿವೆ. ಇದುವರೆಗೆ ಎರಡು ಹಂತದಲ್ಲಿ ಒಟ್ಟು 20 ಚೀತಾಗಳನ್ನು ಭಾರತಕ್ಕೆ ತಂದು ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ ಬಿಡಲಾಗಿದೆ. ಈ ಪೈಕಿ ಎರಡು ಇದೀಗ ಮೃತಪಟ್ಟಿದೆ. ಈ ಪೈಕಿ ಒಂದು 4 ಮರಿಗಳನ್ನು ಹೆತ್ತಿತ್ತು. ಇದೀಗ ಎರಡು ಸಾವಿನ ಬಳಿಕ ಚೀತಾಗಳ ಸಂಖ್ಯೆ 22ಕ್ಕೆ ಸೀಮಿತವಾಗಿದೆ. 

ಸಾಶಾ ಎಂಬ 5 ವರ್ಷ ವಯಸ್ಸಿನ ನಮೀಬಿಯಾ ಮೂಲದ ಚೀತಾ ಕಳೆದ ತಿಂಗಳು ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು. ಸಾಶಾ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹಾರಿದ ಚಿರತೆಗಳ ಮೊದಲ ಬ್ಯಾಚ್‌ನ ಭಾಗವಾಗಿದ್ದಳು ಮತ್ತು ಕಳೆದ ವರ್ಷ ನಮೀಬಿಯಾದಿಂದ ಬಂದಿದ್ದ ಐದು ಹೆಣ್ಣು ಚೀತಾಗಳಲ್ಲಿ ಒಂದಾಗಿತ್ತು. ಕಳೆದ ವರ್ಷ ನಮೀಬಿಯಾದಿಂದ ತರಲಾದ ಎಂಟು ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದರು. ದಕ್ಷಿಣ ಆಫ್ರಿಕಾದಿಂದ ಬಂದ ಚೀತಾಗಳ 2ನೇ ಬ್ಯಾಚ್ ಏಳು ಗಂಡು ಮತ್ತು ಐದು ಹೆಣ್ಣುಗಳನ್ನು ಹೊಂದಿತ್ತು.

ಇದನ್ನೂ ಓದಿ: ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!

1952 ರಲ್ಲಿ ಚೀತಾವನ್ನು ದೇಶದಲ್ಲಿ ಅಳಿವಿನಂಚಿನಲ್ಲಿದೆ ಎಂದು ಘೋಷಿಸಲಾಯಿತು. ಪ್ರಾಣಿಗಳನ್ನು ಮರುಪರಿಚಯಿಸುವ ಪ್ರಯತ್ನಗಳು 2020 ರಲ್ಲಿ  ವೇಗ ಪಡೆದುಕೊಳ್ತು. ಆ ವೇಳೆ ಆಫ್ರಿಕಾ ಚೀತಾಗಳು, ವಿಭಿನ್ನ ಉಪಜಾತಿಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಸ್ಥಳದಿಂದ ದೇಶಕ್ಕೆ ತರಬಹುದು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು.
ಇದನ್ನೂ ಓದಿ: ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ... ಮರಿಗಳ ವೀಡಿಯೋ ವೈರಲ್

Latest Videos
Follow Us:
Download App:
  • android
  • ios