ಕಾಡು ಬಿಟ್ಟು ನಾಡಿಗೆ ನುಗ್ಗಿದ ನಮೀಬಿಯಾ ಚೀತಾ: ಕುನೋ ಅಭಯಾರಣ್ಯಕ್ಕೆ ಕಳಿಸಲು ಕಾರ್ಯಾಚರಣೆ
ಚೀತಾ ಹೊಲವೊಂದರಲ್ಲಿ ಸುತ್ತಾಡುತ್ತಿದ್ದು, ಅದರನ್ನು ಮರಳಿ ಅರಣ್ಯಕ್ಕೆ ಕಳುಹಿಸಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ಚೀತಾ ಇರುವ ಪ್ರದೇಶಕ್ಕೆ ಗ್ರಾಮಸ್ಥರು ತೆರಳದಂತೆ ಪೊಲೀಸರು ಕಾವಲು ಕುಳಿತಿದ್ದಾರೆ.
ಶೋಪುರ (ಏಪ್ರಿಲ್ 3, 2023): ಇತ್ತೀಚೆಗಷ್ಟೇ ಅಭಯಾರಣ್ಯಕ್ಕೆ ಬಿಡಲಾಗಿದ್ದ ನಮೀಬಿಯಾ ಚೀತಾಗಳ ಪೈಕಿ ಒಂದು ಚೀತಾ ಭಾನುವಾರ ಮುಂಜಾನೆ ದಾರಿ ತಪ್ಪಿ ಕಾಡಿನಿಂದ ನಾಡು ಪ್ರವೇಶಿಸಿದೆ. ಒಬಾನ್ ಎಂಬ ಚಿರತೆ ಶನಿವಾರ ರಾತ್ರಿ ಬಳಿಕ ಕುನೋ ರಾಷ್ಟ್ರೀಯ ಅಭಯಾರಣ್ಯದಿಂದ 20 ಕಿ.ಮೀ ದೂರದಲ್ಲಿರುವ ಬರೋಡಾ ಗ್ರಾಮದತ್ತ ಸಾಗಿರುವುದು ಅದಕ್ಕೆ ಅಳವಡಿಸಿರುವ ರೇಡಿಯೋ ಕಾಲರ್‌ನಿಂದ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀತಾ ಹೊಲವೊಂದರಲ್ಲಿ ಸುತ್ತಾಡುತ್ತಿದ್ದು, ಅದರನ್ನು ಮರಳಿ ಅರಣ್ಯಕ್ಕೆ ಕಳುಹಿಸಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಜೊತೆಗೆ ಚೀತಾ ಇರುವ ಪ್ರದೇಶಕ್ಕೆ ಗ್ರಾಮಸ್ಥರು ತೆರಳದಂತೆ ಪೊಲೀಸರು ಕಾವಲು ಕುಳಿತಿದ್ದಾರೆ.
ಇದನ್ನು ಓದಿ: ಮತ್ತೆ ಭಾರತಕ್ಕೆ ಬಂದ 12 ಚೀತಾಗಳು: ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಅತಿಥಿಗಳು..!
ಭಾರತಕ್ಕೆ ಚೀತಾ ಸಂತತಿಯನ್ನು ಮತ್ತೇ ಪರಿಚಯಿಸುವ ಉದ್ದೇಶದಿಂದ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಕರೆತರಲಾಗಿತ್ತು. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಕ್ವಾರೆಂಟೈನ್‌ನಲ್ಲಿದ್ದ 8 ಚೀತಾಗಳಲ್ಲಿ 4 ಬೇಟೆಯಾಡುವ ಚೀತಾಗಳನ್ನು ಕಳೆದ ತಿಂಗಳು ಉದ್ಯಾನವನದ ಕಾಡಿನೊಳಗೆ ಸ್ವತಂತ್ರವಾಗಿ ಬಿಡಲಾಗಿತ್ತು. ಜೊತೆಗೆ ಇತ್ತೀಚೆಗೆ ಇನ್ನೂ 12 ಚೀತಾಗಳು ನಮೀಬಿಯಾದಿಂದ ಭಾರತಕ್ಕೆ ಆಗಮಿಸಿವೆ.
ಇದನ್ನೂ ಓದಿ: ಭಾರತದಲ್ಲಿ ನಮೀಬಿಯಾ ಚೀತಾಗಳಿಂದ ಮೊದಲ ಬೇಟೆ