Asianet Suvarna News Asianet Suvarna News

Uttarakhand Receptionist Murder: ನನ್ನ ಮಗ ತಪ್ಪು ಮಾಡಿಲ್ಲ, ಆತ ಸೀದಾ ಸಾದ ವ್ಯಕ್ತಿ ಎಂದ ಬಿಜೆಪಿ ಮುಖಂಡ

ನನ್ನ ಮಗ ಸೀದಾ ಸದಾ ವ್ಯಕ್ತಿ, ಆತ ನಿರಪರಾಧಿ, ಆತ ಇಂತಹ ಕೆಲಸ ಮಾಡಿಲ್ಲ. ನನ್ನ ಮಗ ಹಾಗೂ ಹತ್ಯೆಯಾದ ಯುವತಿ ಅಂಕಿತಾ ಭಂಡಾರಿ ಇಬ್ಬರಿಗೂ ನ್ಯಾಯ ಸಿಗಬೇಕು ಎಂದು ಆರೋಪಿಯ ತಂದೆ ಬಿಜೆಪಿ ಮಾಜಿ ಸಚಿವ ವಿನೋದ್ ಆರ್ಯಾ ಹೇಳಿದ್ದಾರೆ.

Ankita Bhandari murder case, My son is a simple boy  I want justice for both my son and Ankita says Bjp leader vinod arya akb
Author
First Published Sep 25, 2022, 5:43 PM IST

ಡೆಹ್ರಾಡೂನ್: ನನ್ನ ಮಗ ಸೀದಾ ಸದಾ ವ್ಯಕ್ತಿ, ಆತ ನಿರಪರಾಧಿ, ಆತ ಇಂತಹ ಕೆಲಸ ಮಾಡಿಲ್ಲ. ನನ್ನ ಮಗ ಹಾಗೂ ಹತ್ಯೆಯಾದ ಯುವತಿ ಅಂಕಿತಾ ಭಂಡಾರಿ ಇಬ್ಬರಿಗೂ ನ್ಯಾಯ ಸಿಗಬೇಕು ಎಂದು ಆರೋಪಿಯ ತಂದೆ ಬಿಜೆಪಿ ಮಾಜಿ ಸಚಿವ ವಿನೋದ್ ಆರ್ಯಾ ಹೇಳಿದ್ದಾರೆ. ಉತ್ತರಾಖಂಡ್‌ನಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ರೆಸಾರ್ಟ್‌ ರಿಸೆಪ್ಷನಿಸ್ಟ್ ಅಂಕಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಪಿ ಪುಲ್ಕಿತ್ ಆರ್ಯಾ ತಂದೆ ವಿನೋದ್ ಆರ್ಯಾ ತನ್ನ ಮಗ ನಿರಪರಾಧಿ ಆತ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವಂತಹವನಲ್ಲ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಪುತ್ರನ ಮೇಲಿನ ಕೊಲೆ ಆರೋಪವನ್ನು ಅವರು ನಿರಾಕರಿಸಿದ್ದಾರೆ. 

ಆತ ಸೀದಾ ಸದಾ ವ್ಯಕ್ತಿ, ಆತ ತನ್ನ ಕೆಲಸವಾಯಿತು ತಾನಾಯಿತು ಎಂಬಂತೆ ಇರುವವನು. ಈ ಪ್ರಕರಣದಲ್ಲಿ ನನ್ನ ಮಗನಿಗೂ ಕೊಲೆಯಾದ ಅಂಕಿತಾ ಭಂಡಾರಿಗೂ (Ankita Bhandari) ನ್ಯಾಯ ಸಿಗಬೇಕು ಎಂದು ಅವರು ಹೇಳಿದರು. ತನ್ನ ಪುತ್ರ ತನ್ನಿಂದ ಹಲವು ವರ್ಷಗಳಿಂದ ನಮ್ಮಿಂದ ದೂರಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಎಂದು ವಿನೋದ್ ಆರ್ಯಾ ಹೇಳಿದ್ದಾರೆ. ಅಂಕಿತಾ ಹತ್ಯೆ ಬಳಿಕ ನಿನ್ನೆ ರಾಜ್ಯಾದ್ಯಂತ ಬಿಜೆಪಿ ಮುಖಂಡ ವಿನೋದ್ ಆರ್ಯಾ (Vinod arya) ವಿರುದ್ಧ ಆಕ್ರೋಶ ಭುಗಿಲೆದ್ದ ಬಳಿಕ ಬಿಜೆಪಿ ವಿನೋದ್ ಆರ್ಯಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತ್ತು. ಆದಾಗ್ಯೂ ಪಾರದರ್ಶಕ ತನಿಖೆಯ ಸಲುವಾಗಿ ತಾನು ಪಕ್ಷ ಹುದ್ದೆಗೆ ರಾಜೀನಾಮೆ  ನೀಡಿದ್ದಾಗಿ ವಿನೋದ್ ಆರ್ಯಾ ಹೇಳಿದ್ದಾರೆ. 

Ankita Bhandari Murder: ವಾಟ್ಸಾಪ್‌ ಚಾಟ್‌ ತನಿಖೆ ನಡೆಸಲಿದೆ ಎಸ್‌ಐಟಿ; ಅಂತ್ಯಕ್ರಿಯೆಗೆ ಕುಟುಂಬ ನಿರಾಕರಣೆ

ಪುಲ್ಕಿತ್ (Pulkit Arya) ನಿರಪರಾಧಿ, ಹೀಗಿದ್ದೂ ನಾನು ರಾಜೀನಾಮೆ ನೀಡಿದ್ದೇನೆ. ನನ್ನ ಪುತ್ರ ಅಂಕಿತ್ ಕೂಡ ರಾಜೀನಾಮೆ ನೀಡಿದ್ದಾನೆ. ಪುಲ್ಕಿತ್ ರಿಷಿಕೇಶದಲ್ಲಿ (Rishikesh) ರೆಸಾರ್ಟ್‌ನ್ನು ಹೊಂದಿದ್ದ. 19 ವರ್ಷದ ಯುವತಿ ಅಲ್ಲಿ ರಿಸೆಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಇದಾದ ಬಳಿಕ ಶುಕ್ರವಾರ ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ (Sourabh Bhaskar) ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಅಂಕಿತ್ ಗುಪ್ತ (Ankith Gupta) ಅವರನ್ನು ಪೊಲೀಸರು ಬಂಧಿಸಿದ್ದರು. ಮೂವರು ಸೇರಿ ಯುವತಿಯನ್ನು ಹೊಡೆದು ಬಡಿದು ಕಾಲುವೆಗೆ ಎಸೆದಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಇತ್ತ ಮೃತ ಅಂಕಿತಾ ಭಂಡಾರಿ ತನ್ನ ಕಷ್ಟದ ಬಗ್ಗೆ ತನ್ನ ಜಮ್ಮುವಿನಲ್ಲಿರುವ ಗೆಳೆಯನ ಬಳಿ ಹೇಳಿಕೊಂಡಿದ್ದರು. ಇದನ್ನೇ ಪ್ರಮುಖ ಸಾಕ್ಷಿಯಾಗಿ ಪೊಲೀಸರು ಪರಿಗಣಿಸಿದ್ದಾರೆ.

ಶನಿವಾರ ಅಂಕಿತಾ ಶವವನ್ನು ಪೊಲೀಸರು ಕಾಲುವೆಯೊಂದರಿಂದ ಹೊರ ತೆಗೆದಿದ್ದರು. ಉತ್ತರಾಖಂಡ್‌ನ ಲಕ್ಷ್ಮಣ್ ಝುಲಾ ಪ್ರದೇಶದಲ್ಲಿರುವ ರೆಸಾರ್ಟ್‌ನಿಂದ ಆರು ದಿನಗಳ ಹಿಂದೆ ಅಂಕಿತಾ ನಾಪತ್ತೆಯಾಗಿದ್ದಳು. ಇದಾದ ಬಳಿಕ ಶುಕ್ರವಾರ ಪೊಲೀಸರು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯನನ್ನು(Pulkit arya) ಪೊಲೀಸರು ಬಂಧಿಸಿದ್ದರು. ಈತ ಬಿಜೆಪಿ ಮುಖಂಡ ರಾಜ್ಯದ ಮಾಜಿ ಸಚಿವ ವಿನೋದ್ ಆರ್ಯ ಪುತ್ರ, ವಾಗ್ವಾದದ ನಂತರ ಅಂಕಿತಾಳನ್ನು ಕಾಲುವೆಗೆ ತಳ್ಳಿದ್ದಾಗಿ ಆತ ಹೇಳಿಕೊಂಡಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

ಮೊದಲ ಸ್ಯಾಲರಿ ಪಡೆಯುವ ಮುನ್ನವೇ ಆಕೆಯನ್ನು ಕೊಂದು ಬಿಟ್ಟರು: ಕಣ್ಣೀರಿಟ್ಟ ಅಂಕಿತಾ ಸಂಬಂಧಿ

ಈ ಬಗ್ಗೆ ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ (DGP Ashok Kumar), ಪ್ರತಿಕ್ರಿಯಿಸಿದ್ದು, ಆರೋಪಿಗಳು ರೆಸಾರ್ಟ್‌ನಲ್ಲಿ ಅತಿಥಿಗಳಿಗೆ 'ವಿಶೇಷ ಅತಿಥ್ಯ' ನೀಡುವಂತೆ ಒತ್ತಡ ಹೇರಿದ್ದರು. ಆದರೆ ಇದಕ್ಕೆ ಅಂಕಿತಾ ಒಪ್ಪದೇ ಹೋದಾಗ ಆಕೆಯನ್ನು ಕೊಂದರು ಎಂಬುದಕ್ಕೆ ಪೊಲೀಸರು ಸಾಕ್ಷಿ ಕಲೆ ಹಾಕಿದ್ದಾರೆ ಎಂದು ಹೇಳಿದರು. 

ಅಂಕಿತಾ ಕುಟುಂಬಸ್ಥರ ಪ್ರಕಾರ, ಅಂಕಿತಾ  ದೋಬ್ ಶ್ರೀಕೋಟ್ (Dobh Srikot) ಗ್ರಾಮವನ್ನು ತೊರೆದು 130 ಕಿಲೋ ಮೀಟರ್ ದೂರದಲ್ಲಿರುವ ರೆಸಾರ್ಟ್‌ನಲ್ಲಿ ಕಳೆದ ಆಗಸ್ಟ್ 28 ರಂದು ಕೆಲಸಕ್ಕೆ ಸೇರಿದ್ದಳು. ಮನೆಯಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಪಿಯುಸಿಗೆ ತನ್ನ ಶಿಕ್ಷಣವನ್ನು ಮೊಟುಕುಗೊಳಿಸಿದ ಆಕೆ, ರೆಸಾರ್ಟ್‌ಗೆ ಸೇರಿ ಕೆಲಸ ಮಾಡಲು ಶುರು ಮಾಡಿದ್ದಳು. ಅಂಕಿತಾ ತಂದೆ ವಿರೇಂದ್ರ ಭಂಡಾರಿ (Virendra Bhandari) ಚೌರಾಸ್ ಡ್ಯಾಮ್‌ನಲ್ಲಿ (Chauras dam) ಖಾಸಗಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದವರು ಇತ್ತೀಚೆಗೆ ಕೆಲಸ ತೊರೆದಿದ್ದರು. ಹೀಗಾಗಿ ಅಂಕಿತಾ ತಾಯಿ ಒಬ್ಬರೇ ಮನೆಯಲ್ಲಿ ದುಡಿಯುವ ಕೈ ಆಗಿದ್ದರು. ಅಂಕಿತಾಳ ಸಹೋದರ ದೆಹಲಿಯಲ್ಲಿ ಓದುತ್ತಿದ್ದಾನೆ ಎಂದು ಅಂಕಿತಾಳ ದೊಡ್ಡಮ್ಮ ಲೀಲಾವತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಆಕೆ ಗ್ರಾಮ ತೊರೆದು ಕೆಲಸಕ್ಕಾಗಿ ರೆಸಾರ್ಟ್ ಸೇರಿದ್ದಳು. ಅವಳು ಈ ಕೆಲಸವನ್ನು ಹೇಗೆ ಪಡೆದಳು ಎಂಬುದು ನಮಗೆ ಗೊತ್ತಿಲ್ಲ. ಆಕೆಗೆ ರೆಸಾರ್ಟ್‌ನಲ್ಲೇ ವಸತಿ ವ್ಯವಸ್ಥೆ ನೀಡಲಾಗಿತ್ತು. ಜೊತೆಗೆ ತಿಂಗಳಿಗೆ 10 ಸಾವಿರ ಸಂಬಳದ ಭರವಸೆ ನೀಡಲಾಗಿತ್ತು. ಆದರೆ ಆಕೆ ತನ್ನ ಮೊದಲ ಸಂಬಳ ಪಡೆಯುವ ಮೊದಲೇ ಆಕೆಯನ್ನು ಅವರು ಕೊಂದಿದ್ದಾರೆ ಎಂದು ಅಂಕಿತಾ ದೊಡ್ಡಮ್ಮ ಕಣ್ಣೀರಿಟ್ಟಿದ್ದಾರೆ. 

Follow Us:
Download App:
  • android
  • ios