Asianet Suvarna News Asianet Suvarna News

ಮೊದಲ ಸ್ಯಾಲರಿ ಪಡೆಯುವ ಮುನ್ನವೇ ಆಕೆಯನ್ನು ಕೊಂದು ಬಿಟ್ಟರು: ಕಣ್ಣೀರಿಟ್ಟ ಅಂಕಿತಾ ಸಂಬಂಧಿ

ಉತ್ತರಾಖಂಡ್‌ನ ರಿಸೆಪ್ಷನಿಷ್ಟ್‌  ಅಂಕಿತಾ ಕೊಲೆ ಪ್ರಕರಣ ದಿನಕ್ಕೊಂದು ತಿರುವ ಪಡೆಯುತ್ತಿದೆ. ಕೆಲಸಕ್ಕೆ ಸೇರಿ ಒಂದು ತಿಂಗಳ ಸಂಬಳ ಪಡೆಯುವ ಮೊದಲೇ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಅಂಕಿತಾ ಬಲಿಯಾಗಿದ್ದಾಳೆ ಎಂದು ಆಕೆಯ ಕುಟುಂಬ ಹಾಗೂ ಬಂಧುಗಳು ಕಣ್ಣೀರಿಡುತ್ತಿದ್ದಾರೆ. ಆಕೆಯ ತಂದೆ ಇತ್ತೀಚೆಗಷ್ಟೇ ಕೆಲಸ ತೊರೆದಿದ್ದರು.

they killed her before she will get her first salary uttrakhand receptionist late ankita bhandari aunt told media akb
Author
First Published Sep 25, 2022, 1:42 PM IST

ಡೆಹ್ರಾಡೂನ್: ಉತ್ತರಾಖಂಡ್‌ನ ರಿಸೆಪ್ಷನಿಷ್ಟ್‌  ಅಂಕಿತಾ ಕೊಲೆ ಪ್ರಕರಣ ದಿನಕ್ಕೊಂದು ತಿರುವ ಪಡೆಯುತ್ತಿದೆ. ಮಾಜಿ ಸೆಕ್ಯೂರಿಟಿ ಗಾರ್ಡ್‌ ಹಾಗೂ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಮಗಳಾಗಿದ್ದ ಅಂಕಿತಾ, ಪಿಯುಸಿಗೆ ತನ್ನ ಶಿಕ್ಷಣವನ್ನು ಮೊಟುಕುಗೊಳಿಸಿ ಕುಟುಂಬಕ್ಕೆ ನೆರವಾಗುವ ಸಲುವಾಗಿ ಸಲುವಾಗಿ ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯನ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ ಕೆಲಸಕ್ಕೆ ಸೇರಿ ಒಂದು ತಿಂಗಳ ಸಂಬಳ ಪಡೆಯುವ ಮೊದಲೇ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಅಂಕಿತಾ ಬಲಿಯಾಗಿದ್ದಾಳೆ ಎಂದು ಆಕೆಯ ಕುಟುಂಬ ಹಾಗೂ ಬಂಧುಗಳು ಕಣ್ಣೀರಿಡುತ್ತಿದ್ದಾರೆ. ಆಕೆಯ ತಂದೆ ಇತ್ತೀಚೆಗಷ್ಟೇ ಕೆಲಸ ತೊರೆದಿದ್ದರು.

ಶನಿವಾರ ಅಂಕಿತಾ ಶವವನ್ನು ಪೊಲೀಸರು ಕಾಲುವೆಯೊಂದರಿಂದ ಹೊರ ತೆಗೆದಿದ್ದರು. ಉತ್ತರಾಖಂಡ್‌ನ ಲಕ್ಷ್ಮಣ್ ಝುಲಾ ಪ್ರದೇಶದಲ್ಲಿರುವ ರೆಸಾರ್ಟ್‌ನಿಂದ ಆರು ದಿನಗಳ ಹಿಂದೆ ಅಂಕಿತಾ ನಾಪತ್ತೆಯಾಗಿದ್ದಳು. ಇದಾದ ಬಳಿಕ ಶುಕ್ರವಾರ ಪೊಲೀಸರು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯನನ್ನು(Pulkit arya) ಪೊಲೀಸರು ಬಂಧಿಸಿದ್ದರು. ಈತ ಬಿಜೆಪಿ ಮುಖಂಡ ರಾಜ್ಯದ ಮಾಜಿ ಸಚಿವ ವಿನೋದ್ ಆರ್ಯ ಪುತ್ರ, ವಾಗ್ವಾದದ ನಂತರ ಅಂಕಿತಾಳನ್ನು ಕಾಲುವೆಗೆ ತಳ್ಳಿದ್ದಾಗಿ ಆತ ಹೇಳಿಕೊಂಡಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

Ankita Bhandari Murder: ವಾಟ್ಸಾಪ್‌ ಚಾಟ್‌ ತನಿಖೆ ನಡೆಸಲಿದೆ ಎಸ್‌ಐಟಿ; ಅಂತ್ಯಕ್ರಿಯೆಗೆ ಕುಟುಂಬ ನಿರಾಕರಣೆ

ಈ ಬಗ್ಗೆ ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ (DGP Ashok Kumar), ಪ್ರತಿಕ್ರಿಯಿಸಿದ್ದು, ಆರೋಪಿಗಳು ರೆಸಾರ್ಟ್‌ನಲ್ಲಿ ಅತಿಥಿಗಳಿಗೆ 'ವಿಶೇಷ ಅತಿಥ್ಯ' ನೀಡುವಂತೆ ಒತ್ತಡ ಹೇರಿದ್ದರು. ಆದರೆ ಇದಕ್ಕೆ ಅಂಕಿತಾ ಒಪ್ಪದೇ ಹೋದಾಗ ಆಕೆಯನ್ನು ಕೊಂದರು ಎಂಬುದಕ್ಕೆ ಪೊಲೀಸರು ಸಾಕ್ಷಿ ಕಲೆ ಹಾಕಿದ್ದಾರೆ ಎಂದು ಹೇಳಿದರು. 

ಅಂಕಿತಾ ಕುಟುಂಬಸ್ಥರ ಪ್ರಕಾರ, ಅಂಕಿತಾ  ದೋಬ್ ಶ್ರೀಕೋಟ್ (Dobh Srikot) ಗ್ರಾಮವನ್ನು ತೊರೆದು 130 ಕಿಲೋ ಮೀಟರ್ ದೂರದಲ್ಲಿರುವ ರೆಸಾರ್ಟ್‌ನಲ್ಲಿ ಕಳೆದ ಆಗಸ್ಟ್ 28 ರಂದು ಕೆಲಸಕ್ಕೆ ಸೇರಿದ್ದಳು. ಮನೆಯಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಪಿಯುಸಿಗೆ ತನ್ನ ಶಿಕ್ಷಣವನ್ನು ಮೊಟುಕುಗೊಳಿಸಿದ ಆಕೆ, ರೆಸಾರ್ಟ್‌ಗೆ ಸೇರಿ ಕೆಲಸ ಮಾಡಲು ಶುರು ಮಾಡಿದ್ದಳು. ಅಂಕಿತಾ ತಂದೆ ವಿರೇಂದ್ರ ಭಂಡಾರಿ (Virendra Bhandari) ಚೌರಾಸ್ ಡ್ಯಾಮ್‌ನಲ್ಲಿ (Chauras dam) ಖಾಸಗಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದವರು ಇತ್ತೀಚೆಗೆ ಕೆಲಸ ತೊರೆದಿದ್ದರು. ಹೀಗಾಗಿ ಅಂಕಿತಾ ತಾಯಿ ಒಬ್ಬರೇ ಮನೆಯಲ್ಲಿ ದುಡಿಯುವ ಕೈ ಆಗಿದ್ದರು. ಅಂಕಿತಾಳ ಸಹೋದರ ದೆಹಲಿಯಲ್ಲಿ ಓದುತ್ತಿದ್ದಾನೆ ಎಂದು ಅಂಕಿತಾಳ ದೊಡ್ಡಮ್ಮ ಲೀಲಾವತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Ankita Bhandari Murder: ಉತ್ತರಾಖಂಡ ಸಿಎಂ ಆದೇಶದ ಮೇರೆಗೆ ಆರೋಪಿ ಬಿಜೆಪಿ ಮುಖಂಡ ಪುತ್ರನ ರೆಸಾರ್ಟ್ ಧ್ವಂಸ

ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಆಕೆ ಗ್ರಾಮ ತೊರೆದು ಕೆಲಸಕ್ಕಾಗಿ ರೆಸಾರ್ಟ್ ಸೇರಿದ್ದಳು. ಅವಳು ಈ ಕೆಲಸವನ್ನು ಹೇಗೆ ಪಡೆದಳು ಎಂಬುದು ನಮಗೆ ಗೊತ್ತಿಲ್ಲ. ಆಕೆಗೆ ರೆಸಾರ್ಟ್‌ನಲ್ಲೇ ವಸತಿ ವ್ಯವಸ್ಥೆ ನೀಡಲಾಗಿತ್ತು. ಜೊತೆಗೆ ತಿಂಗಳಿಗೆ 10 ಸಾವಿರ ಸಂಬಳದ ಭರವಸೆ ನೀಡಲಾಗಿತ್ತು. ಆದರೆ ಆಕೆ ತನ್ನ ಮೊದಲ ಸಂಬಳ ಪಡೆಯುವ ಮೊದಲೇ ಆಕೆಯನ್ನು ಅವರು ಕೊಂದಿದ್ದಾರೆ ಎಂದು ಅಂಕಿತಾ ದೊಡ್ಡಮ್ಮ ಕಣ್ಣೀರಿಟ್ಟಿದ್ದಾರೆ. 

ಶಿಕ್ಷಣ (education) ಮುಂದುವರಿಸಲು ಆಸ್ಕತಿ ಹೊಂದಿದ್ದ ಆಕೆ ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ಹೊರಟಾಗ ನಾವು ಬೇಸರ ಗೊಂಡಿದ್ದೆವು. ಆದರೆ ಆಕೆ ಮಾಡುತ್ತಿರುವ ಕೆಲಸದಲ್ಲಿ ಮುಂದೆ ಆಕೆಗೆ ಭವಿಷ್ಯ ಇರಬಹುದು ಎಂದು ನಾವು ಭಾವಿಸಿದೆವು. ಆದರೆ ಆಕೆ ಹೊರಟು ಹೋದ ಕೆಲ ವಾರಗಳ ನಂತರ ಅಂಕಿತಾ ತಾಯಿ, ಆಂಕಿತಾ ಯಾಕೋ ಮೊದಲಿನಂತಿಲ್ಲ ಆಕೆಗೆ ಏನೋ ಆಗಿದೆ ಎಂದು ಹೇಳಿದ್ದರು. ಆದರೆ ಆ ಸಮಯದಲ್ಲಿ ನಾವು ಆ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳಲಿಲ್ಲ. ನಾವು ಆಗ ಯೋಚಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಲೀಲಾವಿ ಹೇಳಿದ್ದಾರೆ. 


ಅಂಕಿತಾ ತನ್ನ ಸ್ನೇಹಿತರ ಜೊತೆ ಮಾಡಿದ್ದ ವಾಟ್ಸಾಪ್ ಚಾಟ್‌ನ್ನು ಪೊಲೀಸರು ವಶಕ್ಕೆ ಪಡೆಯಲಾಗಿದ್ದು, ಆ ಸಂದೇಶಗಳಲ್ಲಿ ಆಕೆ ತನ್ನ ಸ್ನೇಹಿತರ ಜೊತೆ ರೆಸಾರ್ಟ್ ಕಿರುಕುಳದ ಬಗ್ಗೆ ಹೇಳಿದ್ದಾಳೆ. ಆರೋಪಿಗಳು ಆಕೆಗೆ, ರೆಸಾರ್ಟ್‌ಗೆ ಬರುವ ಅತಿಥಿಗಳಿಗೆ ವಿಶೇಷ ಸೇವೆ ನೀಡುವಂತೆ ಕಿರುಕುಳ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆ ಸಂದೇಶಗಳೇ ಈ ಪ್ರಕರಣದ ಪ್ರಮುಖ ಸಾಕ್ಷಿಗಳಾಗಿವೆ ಎಂದು ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ. ಅಲ್ಲದೇ ತನಗೆ ಈ ರೆಸಾರ್ಟ್‌ನಲ್ಲಿ ಭಯ ಅಭದ್ರತೆ ಉಂಟಾಗುತ್ತಿದೆ. ಅತಿಥಿಗಳಿಗೆ ವಿಶೇಷ ಅತಿಥ್ಯ (special services) ನೀಡಿದರೆ ಅದಕ್ಕೆ ಪ್ರತಿಯಾಗಿ 10 ಸಾವಿರ ಹಣ ನೀಡುವುದಾಗಿ ಅವರು ಹೇಳಿದ್ದರು ಎಂಬುದನ್ನು ಅಂಕಿತಾ ತನ್ನ ಸ್ನೇಹಿತರಿಗೆ ಹೇಳಿದ್ದಾರೆ. 
 

Follow Us:
Download App:
  • android
  • ios