ಮರಣ ಹೊಂದಿದ ಭಿಕ್ಷುಕನ ಮನೆಯಲ್ಲಿತ್ತು 10 ಲಕ್ಷ ರೂ ನಗದು, ಅಧಿಕಾರಿಗಳಿಗೆ ತಲೆನೋವು!

  • ಅನಾರೋಗ್ಯದಿಂದ ಮರಣಹೊಂದಿದ ಭಿಕ್ಷುಕ
  • ಭಿಕ್ಷಕನ ಮನೆಯಿಂದ ಸಿಕ್ಕಿತು 10 ಲಕ್ಷ ರೂಪಾಯಿ ನಗದು
  • ಮನೆ ಶೋಧಿಸುವ ವೇಳೆ ಪತ್ತೆಯಾದ ಹಣ, ಅಧಿಕಾರಿಗಳಿಗೆ ತಲೆನೋವು
Andhra Pradesh Rs 10 lakh cash found in deceased beggar home Tirumala ckm

ತಿರುಮಲ(ಮೇ.18):  ಅನಾರೋಗ್ಯ ಕಾರಣದಿಂದ ದೇವಾಲಯ ಪಟ್ಟಣವಾದ ತಿರುಮಲ ಸಮೀಪದಲ್ಲಿ ವಾಸವಿದ್ದ ಭಿಕ್ಷುಕನೋರ್ವ ಮೃತಪಟ್ಟಿದ್ದಾನೆ. ಬಳಿಕ ಭಿಕ್ಷುಕ ವಾಸವಿದ್ದ ಮನೆ ಶೋಧಿಸಿದಾಗ 10 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ಕಂತೆ ಕಂತೆ ಹಣ ಶೋಧಿಸಿ ಹೊರತೆಗೆದ ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ.

ಭಿಕ್ಷೆ ಬೇಡುವುದು ಈತನ ಕೆಲಸ, ಕೈಯಲ್ಲಿದ್ದ ಹಣ‌ ಮಾತ್ರ ಊಹಿಸೋಕೂ ಆಗಲ್ಲ..!

ಮೃತ ಭಿಕ್ಷುಕ ಶ್ರೀನಿವಾಸಾಚಾರಿಗೆ ತಿರುಮಲ ತಿರುಪತಿ ದೇವಸ್ತಾನಂ(ಟಿಟಿಡಿ) ಟ್ರಸ್ಟ್ ಅಡಿ ಸಣ್ಣ ಉದ್ಯಮ ಮಾಡುತ್ತಿದ್ದರು. ಜೊತೆಗೆ ಭಿಕ್ಷೆ ಬೇಡುತ್ತಾ ಜೀವನಸಾಗಿಸುತ್ತಿದ್ದರು. ಶ್ರೀನಿವಾಸಾಚಾರಿ ಕುಟುಂಬಸ್ಥರು ಟಿಟಿಡಿಯಲ್ಲೇ ಕೆಲಸ ನಿರ್ವಹಿಸಿದ್ದರು. ಹೀಗಾಗಿ ಟಿಟಿಡಿ ಶ್ರೀನಿವಾಸಾಚಾರಿಗೆ 2007ರಲ್ಲಿ ಮನೆ ನೀಡಲಾಗಿತ್ತು. ಇತ್ತ ಶ್ರೀನಿವಾಸಾಚಾರಿ ಕುಟುಂಬಸ್ಥರೆಲ್ಲಾ ದಶಕಗಳ ಹಿಂದೆ ಕಾಲವಾಗಿದ್ದಾರೆ.  ಇತ್ತ ಅನಾರೋಗ್ಯಕ್ಕೆ ತುತ್ತಾದ ಶ್ರೀನಿವಾಸಾಚಾರಿ ಕಳೆದ ವರ್ಷ ಮರಣ ಹೊಂದಿದ್ದಾರೆ.

ಕುಟುಂಬ ಸದಸ್ಯರು ಯಾರು ಇಲ್ಲದ ಕಾರಣ ಈ ವರ್ಷ ಟಿಟಿಡಿ ಕಂದಾಯ ಅಧಿಕಾರಿಗಳು ಮನೆಯನ್ನು ಮರು ವಶಕ್ಕೆ ಪಡೆದು ನವೀಕರಣ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಅಧಿಕಾರಿಗಳ ತಂಡ ಶ್ರೀನಿವಾಸಾಚಾರಿ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಿರುಪತಿ ದೇವಸ್ಥಾನದ ಕಾರ್ಯ ಹಾಗೂ ಭಿಕ್ಷೆಯಿಂದ ಬಂದ ಹಣವನ್ನು ಶ್ರೀನಿವಾಸಾಚಾರಿ ಮನೆಯಲ್ಲಿ ಅಡಗಿಸಿಟ್ಟಿದ್ದರು.

ಕೊರೋನಾ ಪರಿಹಾರ ನಿಧಿಗೆ 90 ಸಾವಿರ ರೂ ದೇಣಿಗೆ ನೀಡಿದ ಭಿಕ್ಷುಕ!

ಮನೆಯೊಳಗಿದ್ದ ಪೆಟ್ಟಿಗೆಯಲ್ಲಿ ಶ್ರೀನಿವಾಸಾಚಾರಿ ಬರೋಬ್ಬರಿ 10 ಲಕ್ಷ ರೂಪಾಯಿ ಕೂಡಿಟ್ಟಿದ್ದರು. ಈ ಹಣ ಹೊರತೆಗೆದು ಎಣಿಸಲು ಮುಂದಾದಾಗ ಅಧಿಕಾರಿಗಳಿಗೆ ತಲೆನೋವು ಹೆಚ್ಚಾಗತೊಡಗಿದೆ. ಕಾರಣ 10 ಲಕ್ಷ ರೂಪಾಯಿ ಅಲ್ಲಿದ್ದ ಬಹುತೇಕ ನೋಟುಗಳು ಹಳೆ ಅಮಾನ್ಯಗೊಂಡ ನೋಟುಗಳಾಗಿವೆ. ಪ್ರಧಾನಿ ಮೋದಿ ಡಿಮಾನಿಟೈಸೇಶನ್ ಘೋಷಣೆ ಮೊದಲು ಇದ್ದ 1,000, 500 ರೂಪಾಯಿ ನೋಟುಗಳಾಗಿದೆ.

10 ಲಕ್ಷ ರೂಪಾಯಿಯನ್ನು ಎಣಿಸಿದ ಅಧಿಕಾರಿಗಳಿಗೆ ಈ ಹಣವನ್ನು ಏನು ಮಾಡಬೇಕು ಅನ್ನೋದೇ ತೋಚಲಿಲ್ಲ. ಕಾರಣ ಅಮಾನ್ಯಗೊಂಡಿರುವ ನೋಟುಗಳನ್ನು ಸದ್ಯಕ್ಕೆ ಹೊಸ ನೋಟುಗಳಾಗಿ ಪರಿವರ್ತಿಸುವುದು ಅಸಾಧ್ಯ. ಇತ್ತ ಲಕ್ಷ ಲಕ್ಷ ರೂಪಾಯಿ ಹಳೆ ನೋಟುಗಳನ್ನು ಮನೆಯಲ್ಲಿಟ್ಟಿರುವುದು ಅಪರಾಧ. ಹೀಗಾಗಿ ಅಧಿಕಾರಿಗಳಿಗೆ ತಲೆನೋವು ಶುರುವಾಗಿತ್ತು. ಬಳಿಕ ಈ ಹಣವನ್ನು ಟಿಟಿಡಿ ಟ್ರಸ್ಟ್ ಡಿಪಾಸಿಟ್ ಮಾಡಿದ್ದಾರೆ. ಆದರೆ ಹಳೇ ನೋಟುಗಳನ್ನು ಮಾಡಿದ್ದಾರೋ, ಅಥವಾ ಮಾನ್ಯವಿರುವ ಹಣವನ್ನೂ ಮಾತ್ರ ಮಾಡಿದ್ದಾರೋ ಅನ್ನೋ ಮಾಹಿತಿ ಲಭ್ಯವಾಗಿಲ್ಲ

Latest Videos
Follow Us:
Download App:
  • android
  • ios