Asianet Suvarna News Asianet Suvarna News

ಚಲಿಸುವ ಬೈಕ್ ಮೇಲೆ ರೊಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಯ ಬಂಧನ

ಚಲಿಸುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯೊಬ್ಬಳನ್ನು ಕೂರಿಸಿಕೊಂಡು ರೊಮ್ಯಾನ್ಸ್  ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

Andhra Pradesh couple Arrested after their video which have romancing on a moving bike went viral on social Media akb
Author
First Published Dec 30, 2022, 8:14 PM IST

ಆಂಧ್ರಪ್ರದೇಶ: ಚಲಿಸುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯೊಬ್ಬಳನ್ನು ಕೂರಿಸಿಕೊಂಡು ರೊಮ್ಯಾನ್ಸ್  ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಘಟನೆ ನಡೆದಿತ್ತು. ಯುವ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೇ ಜೀವವನ್ನು ಅಪಾಯಕ್ಕಿಟ್ಟು ಸಾರ್ವಜನಿಕ ರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿದ ಈ ಜೋಡಿಯ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಹೀಗೆ ನಡುರಸ್ತೆಯಲ್ಲಿ ರೊಮ್ಯಾನ್ಸ್ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಜೋಡಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. 

ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿರುವ (Visakhapatnam ) ಸ್ಟೀಲ್ ಪ್ಲಾಂಟ್ (steel plant) ರಸ್ತೆಯಲ್ಲಿ ಈ ವಿಡಿಯೋ ಸೆರೆ ಆಗಿತ್ತು. ಈ ಬೈಕ್‌ ಹಿಂದೆ ಕಾರಿನಲ್ಲಿದ್ದವರು ಈ ಯುವಜೋಡಿಯ ಪಬ್ಲಿಕ್ ರೊಮ್ಯಾನ್ಸ್ ಅನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ವಿಡಿಯೋದಲ್ಲಿ ಹುಡುಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರೆ ಯುವಕ ಆಕೆಯನ್ನೇ ತಬ್ಬಿಕೊಂಡೆ ಬೈಕ್ ಚಾಲನೆ ಮಾಡುತ್ತಿದ್ದ.  ಹೀಗೆ ಸ್ವಲ್ಪವೂ ಅಂಜಿಕೆ ಇಲ್ಲದೇ ಸಾವಿನ ಭಯವೂ ಇಲ್ಲದೇ ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ (Romance) ಮಾಡಿದ ಈ ಜೋಡಿಯನ್ನು 19 ವರ್ಷ ಪ್ರಾಯದ ಶೈಲಜಾ (Shilaja) ಹಾಗೂ 22 ವರ್ಷ ಪ್ರಾಯದ ಅಜಯ್ ಕುಮಾರ್ (Ajay kumar) ಎಂದು ಗುರುತಿಸಲಾಗಿದೆ. ಇವರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆದ ನಡುರಸ್ತೆಯಲ್ಲಿ ಇವರ ಸರಸದ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ತಡಮಾಡದೇ ಈ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೊಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

ಪೊಲೀಸರ ಪ್ರಕಾರ ಈ ಜೋಡಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಾಹನ ಕಾಯ್ದೆಯಡಿ (Motor Vehicle Act) ಪ್ರಕರಣ ದಾಖಲಿಸಲಾಗಿದೆ. ಬೈಕ್‌ನ್ನು ಸ್ಟೀಲ್ ಪ್ಲಾಂಟ್ (steel plant road) ಠಾಣೆಯ ಪೊಲೀಸರು ಸೀಜ್ ಮಾಡಿದ್ದು, ಮೋಟಾರ್ ಕಾಯ್ದೆಯ ಸೆಕ್ಷನ್‌ 336, 279, 132 ಹಾಗೂ 129ರಡಿ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರ ಪೋಷಕರಿಗೆ ನೋಟಿಸ್ ನೀಡಲಾಗಿದ್ದು, ಇಬ್ಬರ ಪೋಷಕರನ್ನು ಠಾಣೆಗೆ ಕರೆಸಿ ಅವರಿಗೆ ಮನವರಿಕೆ ಮಾಡಲಾಗಿದೆ. ಟ್ರಾಫಿಕ್ ನಿಯಮವನ್ನು ಪಾಲಿಸುವುದು ದೇಶದ ಪ್ರತಿಯೊಬ್ಬ ನಾಗರಿಕ ಕರ್ತವ್ಯ. ಯಾರೂ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ವಾಹನವನ್ನು ಸೀಜ್ ಮಾಡಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಸಿ ಹೆಚ್ ಶ್ರೀಕಾಂತ್ (CH Srikanth) ಹೇಳಿದ್ದಾರೆ.

ಪಾಕಿಸ್ತಾನಿ ನಟನೊಂದಿಗೆ ಅಮೀಷಾ ಪಟೇಲ್ ರೊಮ್ಯಾನ್ಸ್, ವಿಡಿಯೋ ವೈರಲ್!

Follow Us:
Download App:
  • android
  • ios