ಪಾಕಿಸ್ತಾನಿ ನಟನೊಂದಿಗೆ ಅಮೀಷಾ ಪಟೇಲ್ ರೋಮ್ಯಾನ್ಸ್, ವಿಡಿಯೋ ವೈರಲ್!
ಹಾಟ್ ಹಾಟ್ ಫೋಟೋ ಮೂಲಕ ಸಾಮಾಜಿಕ ಜಾಲಾತಾಣದಲ್ಲಿ ಬಿಸಿ ಏರಿಸುತ್ತಿದ್ದ ಬಾಲಿವುಡ್ ನಟಿ ಅಮೀಷಾ ಪಟೇಲ್ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಈ ಬಾರಿ ಅಮೀಷಾ ಪಟೇಲ್ ಪಾಕಿಸ್ತಾನ ನಟ ಇಮ್ರಾನ್ ಅಬ್ಬಾಸ್ ಜೊತೆಗಿನ ರೋಮ್ಯಾನ್ಸ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
ಮುಂಬೈ(ಸೆ.21): ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬಾಲಿವುಡ್ ನಟಿ ಅಮೀಷಾ ಪಟೇಲ್ ಇದೀಗ ಭಾರತ ಹಾಗೂ ಪಾಕಿಸ್ತಾನದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಬಿಕಿನಿ ಫೋಟೋ, ಬೀಚ್ ಫೋಟೋ ಹಾಗು ವಿಡಿಯೋಗಳಿಂದ ಸದಾ ಬಿರುಗಾಳಿ ಎಬ್ಬಿಸುತ್ತಿದ್ದ ಅಮೀಷಾ ಪಟೇಲ್ ಇದೀಗ ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜೊತೆ ರೋಮ್ಸಾನ್ ವಿಡಿಯೋ ಸದ್ದು ಮಾಡುತ್ತಿದೆ. ಕ್ರಾಂತಿ ಚಿತ್ರದ ಹಾಡೊಂದಕ್ಕೆ ಈ ಜೋಡಿ ರೋಮ್ಯಾಂಟಿಕ್ ಡ್ಯಾನ್ಸ್ ಮಾಡಿ ಅಭಿಮಾನಿಗಳ ಗಮನಸೆಳೆದಿದ್ದಾರೆ. ಖುದ್ದು ಅಮೀಷಾ ಪಟೇಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಮೀಷಾ ಪಟೇಲ್ ಹಾಗೂ ಇಮ್ರಾನ್ ಅಬ್ಬಾಸ್ ರೋಮ್ಯಾಂಟಿಕ್ ಸಾಂಗ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಭಾರತ ಪಾಕಿಸ್ತಾನ ನಡುವಿನ ಪ್ರೀತಿಯ ಸಂಕೇತ ಎಂದು ಹಲವರು ಬಣ್ಣಿಸಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧವೂ ಹೀಗೇ ಇರಲಿ ಎಂದು ಹಲವರು ಆಶಿಸಿದ್ದಾರೆ.
ಕಳೆದ ವಾರ ಅಮೀಷಾ ಪಟೇಲ್(Bollywood Actress) ಹಾಗೂ ಇಮ್ರಾನ್ ಅಬ್ಬಾಸ್(Pakistan Actor) ಬಹ್ರೇನ್‌ನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಈ ರೋಮ್ಯಾಂಟಿಕ್ ಹಾಡನ್ನು(Romantic Song) ಶೂಟ್ ಮಾಡಿದ್ದಾರೆ. ಬಾಬಿ ಡಿಯೋಲ್ ಹಾಗೂ ಅಮೀಷಾ ಪಟೇಲ್ ಅಭಿನಯದ ಕ್ರಾಂತಿ(Kranti Movie) ಚಿತ್ರದ ದಿಲ್ ಮೇ ದರ್ದ್ ಸಾ ಜಗಾ ಹೈ ಹಾಡಿಗೆ ಇಬ್ಬರು ಸ್ಟಾರ್ಸ್ ಹೆಜ್ಜೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಮೀಷಾ ಸಂತಸ ಹಂಚಿಕೊಂಡಿದ್ದಾರೆ. ಕಳೆದವಾರ ಬಹ್ರೇನ್‌ನಲ್ಲಿ ಸೂಪರ್ ಸ್ಟಾರ್ ಇಮ್ರಾನ್ ಅಬ್ಬಾಸ ಜೊತೆ ಖುಷಿಯ ದಿನಗಳನ್ನು ಆನಂದಿಸಿದೆ. ಇದು ನನ್ನ ಕ್ರಾಂತಿ ಸಿನಿಮಾದ ಹಾಡು. ಇಷ್ಟೇ ಅಲ್ಲ ಇಮ್ರಾನ್ ಅಬ್ಬಾಸ್ ನೆಚ್ಚಿನ ಗೀತೆಯಾಗಿದೆ ಎಂದು ಅಮೀಷ್ ಪಟೇಲ್ ಹೇಳಿದ್ದಾರೆ.
ಪೂಲ್‌ಸೈಡ್ ಬಿಕಿನಿಯಲ್ಲಿ ಪೋಸ್ ನೀಡಿದ Ameesha Patel, ನಟಿಯ ಹಾಟ್ ಫೋಟೋ ವೈರಲ್!
ಅಮೀಷಾ ಪಟೇಲ್(Ameesha Patel) ಪೋಸ್ಟ್‌ಗೆ ಇಮ್ರಾನ್ ಅಬ್ಬಾಸ್(Imran Abbas) ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ರೆಕಾರ್ಡ್ ತುಂಬಾ ಇಷ್ಟುಪಟ್ಟು ಪ್ರೀತಿಯಿಂದ ಮಾಡಿದ್ದೇನೆ. ಅದಕ್ಕೂ ಮಿಗಿಲಾಗಿ ನನ್ನ ನೆಚ್ಚಿನ ಗೀತೆಯೊಂದಿಗೆ ರೆಕಾರ್ಡ್ ಮಾಡಿರುವುದು ಮತ್ತಷ್ಟು ಖುಷಿ ತಂದಿದೆ. ನಿಮ್ಮನ್ನು ಮತ್ತೊಮ್ಮೆ ಭೇಟಿಾಯಾಗಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಇಮ್ರಾನ್ ಅಬ್ಬಾಸ್ ಪ್ರತಿಕ್ರಿಯಿಸಿದ್ದಾರೆ.
ಈ ವೀಡಿಯೊವನ್ನು ರೆಕಾರ್ಡ್ ಮಾಡಲು ಇಷ್ಟಪಟ್ಟರು ಮತ್ತು ನಟಿಯನ್ನು ಮತ್ತೆ ಭೇಟಿಯಾಗಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. "ನಿಸ್ಸಂಶಯವಾಗಿ ನಿಮ್ಮ ಮೇಲೆ ಚಿತ್ರಿಸಿದ ನನ್ನ ಅತ್ಯಂತ ಮೆಚ್ಚಿನ ಹಾಡುಗಳಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡುವುದು ತುಂಬಾ ಖುಷಿಯಾಗಿದೆ. ಶೀಘ್ರದಲ್ಲೇ ನಿಮ್ಮನ್ನು ಮತ್ತೆ ನೋಡಲು ಎದುರು ನೋಡುತ್ತಿದ್ದೇನೆ" ಎಂದು ಅವರು ಕಾಮೆಂಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ - ಅಮೀಷಾ ಪಟೇಲ್: ಮದುವೆಯಾಗದ ಬಾಲಿವುಡ್ ಸೆಲೆಬ್ರೆಟಿಗಳು!
ಸದ್ಯ ಅಮೀಷಾ ಪಟೇಲ್ 2001ರಲ್ಲಿ ಬಿಡುಗಡೆಯಾದ ಗದಾರ್ ಚಿತ್ರದ ಸೀಕ್ವೆಲ್ 2 ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಬಿಪಾಷಾ ಬಸು ಜೊತೆಗಿನ ಚಿತ್ರದ ಮೂಲಕ ಪಾಕ್ ನಟ ಇಮ್ರಾನ್ ಅಬ್ಬಾಸ್ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಬಳಿಕ ಕರಣ್ ಜೋಹರ್ ನಿರ್ದೇಶನ ಎ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.