ಪ್ರತಿಭಟನೆಯಲ್ಲಿ ತೊಡಗಿದ್ದ ರೈತನಿಗೆ ಹೃದಯಾಘಾತ: CPR ಮಾಡಿ ಜೀವ ಉಳಿಸಿದ ಪೊಲೀಸ್

ಪ್ರತಿಭಟನೆಯಲ್ಲಿ ತೊಡಗಿದ್ದ ರೈತರೊಬ್ಬರಿಗೆ ರಸ್ತೆಯಲ್ಲಿದ್ದಾಗಲೇ ದಿಢೀರ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಕೂಡಲೇ ಸಮಯಪ್ರಜ್ಞೆ ತೋರಿ ರೈತನಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ.

Andhra Pradesh Circle Inspector Timeliness saved farmer life, did CPR to him, who collapsed after sudden cardiac arrest akb

ಹೈದರಾಬಾದ್‌: ಪ್ರತಿಭಟನೆಯಲ್ಲಿ ತೊಡಗಿದ್ದ ರೈತರೊಬ್ಬರಿಗೆ ರಸ್ತೆಯಲ್ಲಿದ್ದಾಗಲೇ ದಿಢೀರ್ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಕೂಡಲೇ ಸಮಯಪ್ರಜ್ಞೆ ತೋರಿ ರೈತನಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ. 

ಅಮರಾವತಿ (Amaravati) ಹಾಗೂ ಅರಸವಲ್ಲಿಯ ರೈತರು ನಡೆಸುತ್ತಿದ್ದ ಮಹಾ ಪಾದಯಾತ್ರೆ(Maha Padayatra) ವೇಳೆ ಈ ಘಟನೆ ನಡೆದಿದೆ. ಅರಸರವಳ್ಳಿ(Arasavalli) ಮಾರ್ಗದಲ್ಲಿ ರೈತರು ಸಾಗುತ್ತಿದ್ದ ವೇಳೆ ಇವರ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದಾರೆ. ಕೂಡಲೇ ಓರ್ವ ರೈತ ಗ್ರಮ್ಮೊನ್ ಬ್ರಿಡ್ಜ್ (Gammon bridge) ಬಳಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಕೆಳಗೆ ಬಿದ್ದ ರೈತನಿಗೆ ಕೂಡಲೇ ಸಿಪಿಆರ್(CPR) ಮಾಡಿದ್ದು, ಇದರಿಂದ ರೈತನಿಗೆ ಮರಳಿ ಪ್ರಜ್ಞೆ ಬಂದಿದೆ. ಕಾರ್ಡಿಯೋಪಲ್ಮನರಿ ಪುನರುಜ್ಜೀವನ, ಅಥವಾ CPR ಇದರ ಪ್ರಯೋಗದಿಂದ ಹೃದಯಘಾತಕ್ಕೀಡಾದ (cardiac arrest) ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಹೃದಯಾಘಾತವಾದವರಿಗೆ ಇದೊಂದು ಪ್ರಥಮ ಚಿಕಿತ್ಸಾ ವಿಧಾನವಾಗಿದೆ. ಇದು ಹೃದಯದ ಹಾಗೂ ಉಸಿರಾಟದ ಚಟುವಟಿಕೆಯನ್ನು ಪುನರುಜೀವನಗೊಳಿಸುತ್ತದೆ. ತುರ್ತು ಅಗತ್ಯದ ಸಮಯದಲ್ಲಿ ಇದನ್ನು ಪ್ರಯೋಗ ಮಾಡಲಾಗುತ್ತದೆ. 

What is CPR: ಹಾರ್ಟ್ ಅಟ್ಯಾಕ್ ಆದಾಗ ಪ್ರಾಣ ಉಳಿಸುತ್ತಾ ಸಿಪಿಆರ್? ಹೃದ್ರೋಗ ತಜ್ಞರು ಹೇಳೋದೇನು?

ಕೆಳಗೆ ಬಿದ್ದ ರೈತನಿಗೆ ಸಿಪಿಆರ್ ಮಾಡಿದ ಪೊಲೀಸ್ ಅಧಿಕಾರಿ ನಂತರ ಆಂಬುಲೆನ್ಸ್‌ಗೆ ಕರೆ ಮಾಡಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ (Dipanshu Kabra) ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 'ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರೊಬ್ಬರಿಗೆ ದಿಢೀರ್ ಹೃದಯಾಘಾತವಾಗಿದ್ದು, ಈ ಸಂದರ್ಭದಲ್ಲಿ ಅಲ್ಲೇ ಇದ್ದ ಸರ್ಕಲ್ ಇನ್ಸ್‌ಪೆಕ್ಟರ್‌  ರಹಮೇಂದ್ರ ವರ್ಮಾ ಅವರು ರೈತನಿಗೆ ಸಿಪಿಆರ್ ಮಾಡಿ ಆತನ ಜೀವ ಉಳಿಸಿದರು ಎಂದು ದೀಪಾಂಶು ಕಬ್ರಾ ಬರೆದುಕೊಂಡಿದ್ದಾರೆ. ಅವರ ಈ ಸಮಯಪ್ರಜ್ಞೆ ಕರ್ತವ್ಯಪರತೆಗೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೆಯೇ ಎಂದು ದೀಪಾಂಶು ಬರೆದುಕೊಂಡಿದ್ದಾರೆ.

CPR saves lives ಹೃದಯಾಘಾತದಿಂದ ಕುಸಿದ ವ್ಯಕ್ತಿಗೆ ಸಿಪಿಆರ್ ಮಾಡಿ ಪ್ರಾಣ ಉಳಿಸಿದ ಡಾಕ್ಟರ್!

ವಿಡಿಯೋದಲ್ಲಿ ಕಾಣಿಸುವಂತೆ ಕೆಳಗೆ ಬಿದ್ದ ರೈತನಿಗೆ ರಹಮೇಂದ್ರ ವರ್ಮಾ(Rahamhendravarm) ಅವರು ಸಿಪಿಆರ್ ಮಾಡಿ ಅವರ ಉಸಿರಾಟ (breathing) ಹಾಗೂ ಹೃದಯದ ಬಡಿತವನ್ನು ಯಥಾಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದರೆ ಅವರ ಸುತ್ತ ನಿಂತಿರುವ ಇತರ ರೈತರು ಗಾಳಿ ಹಾಕುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಕೆಳಗೆ ಬಿದ್ದ ರೈತ ಕೈ ಕಾಲು ಆಡಿಸಲು ಶುರು ಮಾಡಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವಿಡಿಯೋ ನೋಡಿದ ಅನೇಕರು ಜೀವ ಉಳಿಸಿದ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಪ್ರಶಂಸೆಯ ಸುರಿಮಳೆಗೈಯ್ಯುತ್ತಿದ್ದಾರೆ. ಮುಂದುವರಿದ ರಾಷ್ಟ್ರಗಳಂತೆ ಜೀವ ಉಳಿಸುವ ಈ ವಿಧಾನವನ್ನು ಪ್ರತಿಯೊಬ್ಬರು ಅರಿತಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪೊಲೀಸ್ ಅಧಿಕಾರಿಗೆ ಸೆಲ್ಯೂಟ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios