Asianet Suvarna News Asianet Suvarna News

ಟ್ಯಾಂಕರ್‌ ಸ್ವಚ್ಛಗೊಳಿಸಲು ಒಳಗಿಳಿದ 7 ಕಾರ್ಮಿಕರು ಉಸಿರುಗಟ್ಟಿ ಸಾವು

ಯಿಲ್ ಟ್ಯಾಂಕರ್‌ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಕಟ್ಟಿ 7 ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ನಡೆದಿದೆ.

Andhra Pradesh 7 labourers from oil factory died by suffocation while they entered oil tanker for cleaning it akb
Author
First Published Feb 9, 2023, 4:08 PM IST

ಕಾಕಿನಾಡು:  ಆಯಿಲ್ ಟ್ಯಾಂಕರ್‌ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಕಟ್ಟಿ 7 ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ನಡೆದಿದೆ. ಕಾಕಿನಾಡ್‌ನ ಪೆದ್ದಪುರಂ ಮಂಡಲದ (Peddapuram mandal) ಜಿ ರಾಮಪೇಟ (G Ragampeta) ಎಂಬಲ್ಲಿ ಇರುವ ಅಂಬಟಿ ಸುಬ್ಬಣ್ಣ ಆಯಿಲ್ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ.  ಒಬ್ಬರಾದ ಮೇಲೆ ಒಬ್ಬರಂತೆ ಟ್ಯಾಂಕರ್ ಒಳಗೆ ಹೋದ ಕಾರ್ಮಿಕರು ಅಲ್ಲೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. 

ದುರಂತದಲ್ಲಿ ಮೃತರಾದ ಕಾರ್ಮಿಕರನ್ನು ವೆಚಂಗಿ ಕೃಷ್ಣ (Vechangi Krishna), ವೆಚಂಗಿ ನರಸಿಂಹಮ್(Vechangi Narasimham), ವೆಚಂಗಿ ಸಾಗರ್ (Vechangi Sagar), ಕೊರತಾಡು ಬಂಜಿ ಬಾಬು (Korathadu Banji Babu), ಕರಿ ರಾಮ ರಾವ್ (Karri Rama Rao), ಕಟ್ಟಮುರಿ ಜಗದೀಶ್‌ (Kattamuri Jagadeesh) ಹಾಗೂ ಪ್ರಸಾದ್ (Prasad ಎಂದು ಗುರತಿಸಲಾಗಿದೆ.  ಮೃತರಲ್ಲಿ ಐವರು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪಡೆರು ಎಂಬಲ್ಲಿಯ ನಿವಾಸಿಗಳಾಗಿದ್ದು, ಉಳಿದ ಇಬ್ಬರು ಮಂಡಲದ ಪುಲಿಮೇರು (Pulimeru) ಗ್ರಾಮದವರಾಗಿದ್ದಾರೆ.  ವಿಚಿತ್ರ ಎಂದರೆ ಇವರೆಲ್ಲರೂ 10 ದಿನಗಳ ಹಿಂದಷ್ಟೇ ಈ ಆಯಿಲ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು. 

ಹುಮನಾಬಾದ್‌: ಆ್ಯಸಿಡ್‌ ವಾಸನೆಗೆ ಜಾರ್ಖಾಂಡ್‌ ಮೂಲದ ವ್ಯಕ್ತಿ ಸಾವು

ಕೆಲ ಮೂಲಗಳ ಪ್ರಕಾರ ಈ ಆಯಿಲ್ ಫ್ಯಾಕ್ಟರಿಯೂ ಕಾರ್ಖಾನೆ ಕಾಯ್ದೆಯಡಿ ನೋಂದಣಿಗೊಂಡಿಲ್ಲ ಎಂದು ತಿಳಿದು ಬಂದಿದೆ.  ಆಯಿಲ್ ಟ್ಯಾಂಕರ್ ಒಳಗಿದ್ದ ವಿಷಕಾರಿ ಅನಿಲದಿಂದ ಈ ಸಾವು ಸಂಭವಿಸಿರಬಹುದು ಎಂದು ಊಹೆ ಮಾಡಲಾಗಿದೆ.  ಘಟನೆ ಬಗ್ಗೆ ಪೆದ್ದಪುರಂ ಸರ್ಕಲ್ ಇನ್ಸ್‌ಪೆಕ್ಟರ್, ಪ್ರತಿಕ್ರಿಯಿಸಿದ್ದು,  ಮೊದಲಿಗೆ ಒಬ್ಬ ವ್ಯಕ್ತಿ  ಅಡುಗೆ ಎಣ್ಣೆಯ ಟ್ಯಾಂಕರ್ ಒಳಗೆ ಹೋಗಿದ್ದಾನೆ. ಆದರೆ ಅಲ್ಲಿ ಆತನಿಗೆ ಉಸಿರಾಡಲಾಗದೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದಾದ ನಂತರ ಏಣಿ ಇಟ್ಟು ಉಳಿದ ಏಳು ಜನ ಟ್ಯಾಂಕರ್ ಒಳಗೆ ಇಳಿದಿದ್ದಾರೆ. ಆದರೆ ಎಲ್ಲರಿಗೂ ಅಲ್ಲಿ ಉಸಿರಾಟದ ಸಮಸ್ಯೆಯಾಗಿದೆ. ಆದರೆ ನಂತರ ಏಣಿ ಇಟ್ಟು ಇಳಿದ 7 ಜನರಲ್ಲಿ ಓರ್ವ ಬದುಕಿದ್ದು, ಆತ ಟ್ಯಾಂಕರ್ ಒಳಗೆ ಇಳಿದ ನಂತರ ಉಸಿರಾಡಿಲ್ಲ ಎಂದು ಹೇಳಿಕೊಂಡಿದ್ದಾನೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ. 

ಕಾಶ್ಮೀರ ಕಣಿವೆಯಲ್ಲಿ ಉರುಳಿದ ಗ್ಯಾಸ್ ಟ್ಯಾಂಕರ್ : ಭಯಾನಕ ವಿಡಿಯೋ ವೈರಲ್‌

Follow Us:
Download App:
  • android
  • ios