Asianet Suvarna News Asianet Suvarna News

ಕಾಶ್ಮೀರ ಕಣಿವೆಯಲ್ಲಿ ಉರುಳಿದ ಗ್ಯಾಸ್ ಟ್ಯಾಂಕರ್ : ಭಯಾನಕ ವಿಡಿಯೋ ವೈರಲ್‌

ಅಡುಗೆ ಅನಿಲವನ್ನು ಸಾಗಿಸುತ್ತಿದ್ದ ಗ್ಯಾಸ್ ಟ್ಯಾಂಕರೊಂದು ಕಣಿವೆಯಲ್ಲಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರತಾಪಕ್ಕೆ ಉರುಳಿದ ಘಟನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Truck Carrying Cooking Gas falls down in POK valley watch terrible video akb
Author
Bangalore, First Published Aug 10, 2022, 5:17 PM IST

ಅಡುಗೆ ಅನಿಲವನ್ನು ಸಾಗಿಸುತ್ತಿದ್ದ ಗ್ಯಾಸ್ ಟ್ಯಾಂಕರೊಂದು ಕಣಿವೆಯಲ್ಲಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪ್ರತಾಪಕ್ಕೆ ಉರುಳಿದ ಘಟನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಘಾತಕಾರಿಯಾಗಿದೆ. ಟ್ರಕ್ ಮೇಲಿನ ದೊಡ್ಡದಾದ ಟ್ಯಾಂಕರ್ ಪೂರ್ತಿ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್(LPG) ಇದ್ದು, ಕಣಿವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರತಾಪಕ್ಕೆ ಉರುಳುತ್ತದೆ. ಸಾಮಾಜಿಕ ಜಾಲತಾಣ ರೆಡಿಟ್‌ನಲ್ಲಿ ಅಬ್ದುಲ್ ಅರಿಫ್ ಎಂಬ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಣಿವೆ ನಾಡಿನಲ್ಲಿ ತಿರುವುಗಳಿರುವ ಸಣ್ಣದಾದ ಮಣ್ಣಿನ ರಸ್ತೆಯಲ್ಲಿ ಟ್ರಕ್‌ ಸಾಗುತ್ತಿದ್ದು, ಸ್ವಲ್ಪದರಲ್ಲೇ ಟ್ರಕ್‌ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ನಲ್ಲಿ ಈ ಘಟನೆ ನಡೆದಿದೆ. 

30 ಸೆಕೆಂಡುಗಳ ವಿಡಿಯೋದಲ್ಲಿ, ಚಾಲಕ ಕಡಿದಾದ ಕಣಿವೆಯಲ್ಲಿ ಟ್ರಕ್‌ ಅನ್ನು ಚಲಾಯಿಸುತ್ತಾ ಮುಂದೆ ಸಾಗುತ್ತಿದ್ದಂತೆ, ಜನರು ಕರುಣೆ ತೋರು ದೇವರೇ ಎಂದು ಬೊಬ್ಬೆ ಹೊಡೆಯುವುದನ್ನು ಕೇಳಬಹುದು. ಆದರೆ ಸ್ವಲ್ಪ ದೂರ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ ಪ್ರಪಾತಕ್ಕೆ ಉರುಳುತ್ತದೆ. ಈ ವಿಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದು, ಡ್ರೈವರ್ ಕತೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಇನ್ನು ಘಟನೆ ಆಗುವ ವೇಳೆ ಟ್ರಕ್ ಚಾಲಕ ಟ್ರಕ್‌ನಿಂದ ಹೊರಗೆ ಹಾರಿ ಪಾರಾಗಿದ್ದಾನೆ ಎಂದು ಘಟನೆ ಬಗ್ಗೆ ಒಬ್ಬರು ಪ್ರತಿಕ್ರಿಯಿಸಿದ್ದಾರೆ.

 

ರಾ. ಹೆದ್ದಾರಿ 75ರ ಸೂರಿಕುಮೇರು ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಸಂಚಾರ ಅಸ್ತವ್ಯಸ್ತ!

 

ಒಂದು ವೇಳೆ ಈ ಟ್ರಕ್ ಸ್ಫೋಟಗೊಂಡಿದ್ದರೆ, ಈ ವಿಡಿಯೋ ಮಾಡಿದವರು ತಮ್ಮ ಬದುಕಿನ ಬಗ್ಗೆ ಮರು ಯೋಚನೆ ಮಾಡಬೇಕಾಗಿರುತ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಪ್ರಕಾರ ಅಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ. ಟ್ವಿಟ್ಟರ್ ಬಳಕೆದಾರ ಹುಸೈನ್ ಮುಖ್ತಾರ್ ಖುರೇಷಿ ಎಂಬುವವರು ಟ್ವಿಟ್ಟರ್‌ನಲ್ಲಿ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಈ ಟ್ಯಾಂಕರ್ ದುರಂತದ ಭಯಾನಕ ದೃಶ್ಯ ಸೆರೆ ಆಗಿದೆ. 

ಟ್ಯಾಂಕರ್ ಪಲ್ಟಿಯಾಗಿ ಸೋರಿದ್ದ ರಾಸಾಯನಿಕ; ಜಲಚರಗಳು ಸಾವು!

 

Follow Us:
Download App:
  • android
  • ios