100ಕ್ಕೂ ಹೆಚ್ಚು ಆಫ್ರಿಕನ್ ಪ್ರಜೆಗಳಿಂದ ಪೊಲೀಸರ ಮೇಲೆ ದಾಳಿಗೆ ಯತ್ನ

ವೀಸಾ ಪಾಸ್‌ಪೋರ್ಟ್ ಅವಧಿ ಮುಗಿದ ನಂತರವೂ ದೇಶದಲ್ಲಿ ತಂಗಿದ್ದ ಮೂವರು ನೈಜೀರಿಯನ್ ಪ್ರಜೆಗಳ ಬಂಧಿಸಿದ್ದಕ್ಕೆ  100ಕ್ಕೂ ಹೆಚ್ಚು ಆಫ್ರಿಕಾ ಮೂಲದ ಜನ ಪೊಲೀಸರನ್ನು ಸುತ್ತುವರೆದು ಹಲ್ಲೆಗೆ ಮುಂದಾದ ಆಘಾತಕಾರಿ ಘಟನೆ ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ನಡೆದಿದೆ.  

An attempt was made to attack the police by more than 100 African nationals In delhi akb

ನವದೆಹಲಿ: ವೀಸಾ ಪಾಸ್‌ಪೋರ್ಟ್ ಅವಧಿ ಮುಗಿದ ನಂತರವೂದ ದೇಶದಲ್ಲಿ ತಂಗಿದ್ದ ಮೂವರು ನೈಜೀರಿಯನ್ ಪ್ರಜೆಗಳ ಬಂಧಿಸಿದ್ದಕ್ಕೆ  100ಕ್ಕೂ ಹೆಚ್ಚು ಆಫ್ರಿಕಾ ಮೂಲದ ಜನ ಪೊಲೀಸರನ್ನು ಸುತ್ತುವರೆದು ಹಲ್ಲೆಗೆ ಮುಂದಾದ ಆಘಾತಕಾರಿ ಘಟನೆ ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ನಡೆದಿದೆ.  ದೆಹಲಿಯ ಮಾದಕದ್ರವ್ಯ ನಿಯಂತ್ರಣ ಪಡೆ  ನಿನ್ನೆ ಮಧ್ಯಾಹ್ನ 2:30 ರ ಸುಮಾರಿಗೆ  ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದ ರಾಜುಪಾರ್ಕ್‌ ಬಳಿ ಅವಧಿ ಮೀರಿ ವಾಸವಿದ್ದ ಆಫ್ರಿಕನ್ ಪ್ರಜೆಗಳ ಗಡೀಪಾರು ಪ್ರಕ್ರಿಯೆ ನಡೆಸಲು ತೆರಳಿತ್ತು.  ಅಲ್ಲಿ ವೀಸಾ ಅವಧಿ ಮುಗಿದರು ನೆಲೆಸಿದ್ದ ಮೂವರನ್ನು ಬಂಧಿಸಿತ್ತು.

ಈ ವೇಳೆ ರೊಚ್ಚಿಗೆದ್ದ 100ಕ್ಕೂ ಹೆಚ್ಚು ಆಫ್ರಿಕನ್ ಪ್ರಜೆಗಳು ಪೊಲೀಸರನ್ನು ಸುತ್ತುವರೆದು ಅವರೊಂದಿಗೆ ಕಿತ್ತಾಟ ನಡೆಸಿ ಪೊಲೀಸರು ಬಂಧಿಸಲ್ಪಟ್ಟಿದ್ದ ಮೂವರು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುವಂತೆ ಮಾಡಿದ್ದಾರೆ. ಆದರೆ ಪೊಲೀಸರ ಅವರಲ್ಲಿ ಒಬ್ಬರಾದ 22 ವರ್ಷದ ಫಿಲಿಪ್ ( Philip) ಎಂಬಾತನನ್ನು ಮತ್ತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ, ನೆಬ್ ಸರೈ ಪೊಲೀಸ್ ಠಾಣೆಯ (Neb Sarai Police Station) ಜಂಟಿ ತಂಡ ಮತ್ತು ನಾರ್ಕೋಟಿಕ್ಸ್ ಸ್ಕ್ವಾಡ್ (Narcotics Squad) ಸಂಜೆ 6:30 ಕ್ಕೆ ಮತ್ತೆ ರಾಜು ಪಾರ್ಕ್‌ಗೆ ಭೇಟಿ ನೀಡಿ, ಒಬ್ಬ ಮಹಿಳೆ ಸೇರಿದಂತೆ ನಾಲ್ವರು ನೈಜೀರಿಯನ್ನರನ್ನು (Nigeria) ಬಂಧಿಸಿದ್ದಾರೆ.

ಬೆಂಗಳೂರು: ಸೀಕ್ರೆಟ್‌ ಕೋಡ್‌ ಬಳಸಿ ಡ್ರಗ್ಸ್‌ ಪೂರೈಕೆ, 12 ಮಂದಿ ಅರೆಸ್ಟ್‌ 

ಈ ವೇಳೆಯೂ ತಮ್ಮವರನ್ನು ಬಂಧಿಸಿದ್ದಕ್ಕೆ ಪ್ರತೀಕಾರವಾಗಿ 150 ರಿಂದ 200 ಜನರಿದ್ದ ಆಫ್ರಿಕನ್ ಪ್ರಜೆಗಳ ಗುಂಪು ಪೊಲೀಸ್ ತಂಡವನ್ನು ಸುತ್ತುವರೆದು, ಬಂಧಿತರಾದವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರಿ ತಿಳಿಸಿದ್ದಾರೆ. ಈ ವೇಳೆ ಪೊಲೀಸರು ಹೇಗಾದರೂ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಅಪರಾಧಿಗಳನ್ನು ನೆಬ್ ಸರೈ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.  ಅಲ್ಲಿ ಆರೋಪಿಗಳ  ಗಡೀಪಾರು ಪ್ರಕ್ರಿಯೆಗಳು ನಡೆಯುತ್ತಿವೆ.

ಅಮೆರಿಕಾ ಹುಡುಗಿ, ನೈಜೀರಿಯಾ ಹುಡುಗ: ಹಣಕ್ಕಾಗಿ ಅಪಹರಣ ನಾಟಕ ಮಾಡಿ ಬಂಧನ

 

Latest Videos
Follow Us:
Download App:
  • android
  • ios