Asianet Suvarna News Asianet Suvarna News

ತೆಲಂಗಾಣ ಸಿಎಂ ಪುತ್ರಿ ಕವಿತಾ ಇಡಿ ವಿಚಾರಣೆಗೆ ವಿರೋಧ: ಮೋದಿ ‘ರಾವಣ’ ಪೋಸ್ಟರ್ ಅಂಟಿಸಿ ಪ್ರತಿಭಟನೆ

ಗೋಡೆಗಳ ಮೇಲೆ ‘ನರೇಂದ್ರ ಮೋದಿ ಪ್ರಜಾಪ್ರಭುತ್ವದ ಧ್ವಂಸಕ, ಬೂಟಾಟಿಕೆಯ ಪಿತಾಮಹ’ ಎಂಬ ಪೋಸ್ಟರ್‌ ಅಂಟಿಸಿ ವಿರೋಧಿಸಿದರು. ಇದರೊಂದಿಗೆ ಮೋದಿ ಸರ್ಕಾರ ಅವರ ವಿರೋಧಿಗಳ ವಿರುದ್ಧ ಇಂತಹ ಕೇಂದ್ರ ಸಂಘಟನೆಯನ್ನು ಶಸ್ತ್ರವಾಗಿ ಬಳಸುತ್ತಿದೆ ಎಂದು ಆಪಾದಿಸಿದರು.

amid kavithas quizzing by ed pm modi portrayed as ravana posters surface in hyderabad ash
Author
First Published Mar 12, 2023, 10:34 AM IST

ಹೈದರಾಬಾದ್‌ (ಮಾರ್ಚ್‌ 12, 2023): ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪುತ್ರಿ ಕೆ.ಕವಿತಾ ಅವರನ್ನು ಶನಿವಾರ ಇ.ಡಿ. ವಿಚಾರಣೆಗೆ ಒಳಪಡಿಸಿದ್ದು, ಇದರ ಬೆನ್ನಲ್ಲೇ ನಗರದಲ್ಲಿ ಬಿಆರ್‌ಎಸ್‌ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿ ಪ್ರತಿಭಟನೆ ಮಾಡಿದರು. ಇಲ್ಲಿನ ಗೋಡೆಗಳ ಮೇಲೆ ‘ನರೇಂದ್ರ ಮೋದಿ ಪ್ರಜಾಪ್ರಭುತ್ವದ ಧ್ವಂಸಕ, ಬೂಟಾಟಿಕೆಯ ಪಿತಾಮಹ’ ಎಂಬ ಪೋಸ್ಟರ್‌ ಅಂಟಿಸಿ ವಿರೋಧಿಸಿದರು. ಇದರೊಂದಿಗೆ ಮೋದಿ ಸರ್ಕಾರ ಅವರ ವಿರೋಧಿಗಳ ವಿರುದ್ಧ ಇಂತಹ ಕೇಂದ್ರ ಸಂಘಟನೆಯನ್ನು ಶಸ್ತ್ರವಾಗಿ ಬಳಸುತ್ತಿದೆ ಎಂದು ಆಪಾದಿಸಿದರು.

ದಿಲ್ಲಿ ಮದ್ಯ ಹಗರಣ: 9 ತಾಸು ಕವಿತಾ ವಿಚಾರಣೆ; ಮಾರ್ಚ್‌ 16ಕ್ಕೆ ಮತ್ತೆ ವಿಚಾರಣೆಗೆ ಬರಲು ಇ.ಡಿ. ಸೂಚನೆ
ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (K Chandrasekhar Rao) ಅವರ ಪುತ್ರಿ, ಬಿಆರ್‌ಎಸ್‌ ಪಕ್ಷದ ನಾಯಕಿ ಕೆ.ಕವಿತಾ (K Kavitha) ಅವರನ್ನು ಜಾರಿ ನಿರ್ದೇಶನಾಲಯ (Enforceent Directorate) ಶನಿವಾರ 9 ತಾಸುಗಳ ಕಾಲ ವಿಚಾರಣೆ ನಡೆಸಿದೆ. ಅಲ್ಲದೇ ಹೆಚ್ಚಿನ ವಿಚಾರಣೆಗಾಗಿ ಮಾ.16ರಂದು ಮತ್ತೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

ಇದನ್ನು ಓದಿ: ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕವಿತಾಗೆ ಇಡಿ ಶಾಕ್‌; ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ

ದೆಹಲಿ ಹಗರಣದಲ್ಲಿ ಸೌತ್‌ ಗ್ರೂಪ್‌ ಕಂಪನಿಯ ಹೆಸರೂ ಕೇಳಿಬಂದಿದ್ದು, ಕೆ.ಕವಿತಾ ಅವರು ಈ ಕಂಪನಿಯ ಮುಖ್ಯಸ್ಥರಲ್ಲಿ ಒಬ್ಬರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಕವಿತಾ ಅವರನ್ನು ವಿಚಾರಣೆ ನಡೆಸುತ್ತಿದೆ.

ಕಳೆದ ಬುಧವಾರವಷ್ಟೇ ಕವಿತಾ ಆಪ್ತ, ಮದ್ಯ ಉದ್ಯಮಿ ಅರುಣ್‌ ಪಿಳ್ಳೈ ಅವರನ್ನು ಇ.ಡಿ. ಬಂಧಿಸಿತ್ತು. ಪಿಳ್ಳೈ ಅವರು ಕವಿತಾಗೆ ಸಂಬಂಧಿಸಿದ ಕಂಪನಿಯಲ್ಲಿ ಲಾಬಿಗಾರನಂತೆ ಕೆಲಸ ಮಾಡುತ್ತಿದ್ದರು. ವಿಚಾರಣೆ ವೇಳೆ ಪಿಳ್ಳೈ, ‘ಕವಿತಾ ಮತ್ತು ಆಮ… ಆದ್ಮಿ ಪಾರ್ಟಿ (ಎಎಪಿ) ನಡುವೆ ಒಪ್ಪಂದವಿತ್ತು. ಆಪ್‌ಗೆ 100 ಕೋಟಿ ರು. ಕಿಕ್‌ಬ್ಯಾಕ್‌ಗೆ ಸಂದಾಯ ಆಗಿತ್ತು. ಇದಕ್ಕೆ ಪ್ರತಿಯಾಗಿ ಕವಿತಾ ಅವರಿಗೆ ದಿಲ್ಲಿ ಮದ್ಯ ಉದ್ಯಮದಲ್ಲಿ ಪ್ರವೇಶ ಲಭಿಸಿತ್ತು. ಇಂಡೋ ಸ್ಪಿರಿಟ್‌ ಕಂಪನಿಯಲ್ಲಿ ಕವಿತಾ ಪಾಲು ಖರೀದಿಸಿದ್ದರು’ ಎಂದು ಮಾಹಿತಿ ನೀಡಿದ್ದ. ಅದರ ಬೆನ್ನಲ್ಲೇ ಕವಿತಾಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಲಾಗಿತ್ತು.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್‌ ಪುತ್ರಿ ಕವಿತಾ ವಿಚಾರಣೆ

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಪ್ರಸ್ತುತ ಅವರನ್ನು ಜಾರಿ ನಿರ್ದೇನಾಲಯ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದೆ.

ತಾಯಿ ಸ್ಮರಣೆಗಾಗಿ ಮೋದಿ ವೆಬ್‌ಸೈಟ್‌ನಲ್ಲಿ ‘ಮಾ’ ಮೈಕ್ರೋಸೈಟ್‌ ಪ್ರಾರಂಭ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ತಾಯಿ ಹೀರಾಬಾ (Heeraben Modi) ಸ್ಮರಣೆಗಾಗಿ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ‘ಮಾ’ (Maa) ಹೆಸರಿನಲ್ಲಿ ಮೈಕ್ರೋಸೈಟ್‌ ಅನ್ನು ಪ್ರಾರಂಭಿಸಿದ್ದಾರೆ. ಕಳೆದ ಡಿಸೆಂಬರ್ 30ರಂದು ಹೀರಾಬಾ ನಿಧನರಾಗಿದ್ದರು. ಮಾತೃತ್ವದ ಅಚಲ ಮನೋಭಾವವನ್ನು ಆಚರಿಸಲು ಹಾಗೂ ತಾಯಿ ಸ್ಮರಣೆಯಲ್ಲಿ ಮೈಕ್ರೋಸೈಟ್‌ ಪ್ರಾರಂಭಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮೋದಿ ಅವರಿಗೆ ಹೀರಾಬಾ ಹೇಳುತ್ತಿದ್ದ ಮಾತುಗಳನ್ನು ಗಾದೆ ರೂಪದಲ್ಲಿ ಹಾಗೂ ಮೋದಿ ಅವರ ತಾಯಿಯೊಂದಿಗೆ ಕಳೆದ ಅಪೂರ್ವ ಕ್ಷಣಗಳ ಫೋಟೊ, ವಿಡಿಯೋ, ಆಡಿಯೋಗಳನ್ನು ಮೈಕ್ರೋಸೈಟ್‌ ಒಳಗೊಂಡಿದೆ. ಅಲ್ಲದೇ ಹೀರಾಬಾ ಅವರ 100ನೇ ಜನ್ಮದಿನದಂದು ಮೋದಿ ಅವರು ಬರೆದ ಪತ್ರವನ್ನು ಮೈಕ್ರೋಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. 

ಇದನ್ನೂ ಓದಿ: ಬೆಲೆ ಹೆಚ್ಚಿರುವ LPG Cylinder, ಎಣ್ಣೆ, ಬೇಳೆ ಪ್ಯಾಕೆಟ್‌ ಮೇಲೆ ಮೋದಿ ಫೋಟೋ ಹಾಕುತ್ತೇವೆ: ತೆಲಂಗಾಣ ಸಿಎಂ ಪುತ್ರಿ

Follow Us:
Download App:
  • android
  • ios