ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಶಕ್ತಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಲಖನೌ: ವಿಚ್ಛೇದಿತ ಮಹಿಳೆಯು ದುಡಿಯುವ ಸಾಮರ್ಥ್ಯ ಹೊಂದಿದ್ದು, ಜೀವನ ನಡೆಸಲು ಶಕ್ತಳಾಗಿದ್ದರೆ ಪತಿಯಿಂದ ಜೀವನಾಂಶ ಪಡೆಯುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಂಕಿತ್ ಸಾಹಾ ಎಂಬ ವ್ಯಕ್ತಿ ಪತ್ನಿಗೆ ವಿಚ್ಛೇದನ ನೀಡಿದ್ದರು. ಆಕೆ ಸ್ನಾತಕೋತ್ತರ ಪದವೀಧರಳಾಗಿದ್ದು, 36,000 ರು. ಸಂಬಳ ಪಡೆಯುತ್ತಿದ್ದಳು. ಆದರೂ ಜೀವನಾಂಶಕ್ಕೆ ಬೇಡಿಕೆಯಿ ಇಟ್ಟಿದ್ದಳು. ಇದರ ವಿಚಾರಣೆ ನಡೆಸಿದ ಕೌಟುಂಬಿಕ ಕೋರ್ಟ್, ಪತಿ ಜೀವನಾಂಶ ಕೊಡಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಪ್ರಕರಣದ ತೀರ್ಪು ಪ್ರಕಟಿಸಿದ ಹೈಕೋರ್ಟ್, ಮಹಿಳೆ ತಿಂಗಳಿಗೆ 36,000 ರು. ಗಳಿಸುತ್ತಿದ್ದಾಳೆ. ಆಕೆಗೆ ಬೇರೆ ಯಾವುದೇ ಹೊಣೆಗಾರಿಕೆ ಇಲ್ಲ. ಆದರೆ ಪುರುಷ ತನ್ನ ವಯಸ್ಸಾದ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾನೆ. ಹಾಗಾಗಿ ಆತ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದಿದೆ. ಜತೆಗೆ, ಕೆಳ ಕೋರ್ಟ್‌ನ ತೀರ್ಪನ್ನು ಹೈಕೋರ್ಟ್ ಕಟುವಾಗಿ ಟೀಕಿಸಿದೆ.
ಇದನ್ನೂ ಓದಿ: ಧುರಂಧರ್ ಸಿನಿಮಾ ನೋಡಿ ಪಾಕಿಸ್ತಾನಕ್ಕೆ ಸಾಲ ನಿರಾಕರಿಸಿತ್ತಾ ವಿಶ್ವಬ್ಯಾಂಕ್: ಏನಿದು ಅಸಲಿ ಕತೆ?


