ಪಾಕಿಸ್ತಾನ ವಿರುದ್ದದ ಪ್ರತೀಕಾರದ ಭಾಗವಾಗಿ ಅಲ್ಲಿನ ಪ್ರಜೆಗಳಿಗೆ ನೀಡಲಾಗಿದ್ದ ಎಲ್ಲಾ ವೀಸಾ ಸೇವೆಗಳನ್ನು ಭಾರತ ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದು ಮಾಡಿದೆ.
ನವದೆಹಲಿ (ಏ.25): ಪಾಕಿಸ್ತಾನ ವಿರುದ್ದದ ಪ್ರತೀಕಾರದ ಭಾಗವಾಗಿ ಅಲ್ಲಿನ ಪ್ರಜೆಗಳಿಗೆ ನೀಡಲಾಗಿದ್ದ ಎಲ್ಲಾ ವೀಸಾ ಸೇವೆಗಳನ್ನು ಭಾರತ ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದು ಮಾಡಿದೆ. ಇದರನ್ವಯ, ಪಾಕಿಗಳಿಗೆ ಭಾರತ ನೀಡಿರುವ ಎಲ್ಲಾ ಮಾನ್ಯ ವೀಸಾಗಳು ಏ.27ರಿಂದ ಅಮಾನ್ಯಗೊಳ್ಳಲಿವೆ. ವೈದ್ಯಕೀಯ ವೀಸಾಗಳು ಏ.29ರ ತನಕವಷ್ಟೇ ಮಾನ್ಯವಾಗಿರುತ್ತವೆ. ಗುರುವಾರವಷ್ಟೇ ಭಾರತವು ಪಾಕಿಸ್ತಾನಿಗಳಿಗೆ ನೀಡಲಾಗಿದ್ದ ಸಾರ್ಕ್ ವೀಸಾವನ್ನು ರದ್ದುಗೊಳಿಸಿತ್ತು.
ದೇಶದಲ್ಲಿರುವ ಎಲ್ಲಾ ಪಾಕ್ ಪ್ರಜೆಗಳಿಗೆ ಭಾರತ ತೊರೆಯಲು 48 ತಾಸುಗಳ ಗಡುವು ನೀಡಿತ್ತು. ಅದರ ಬೆನ್ನಲ್ಲೇ ಈಗ ಎಲ್ಲಾ ಮಾದರಿಯ ವೀಸಾಗಳನ್ನು ರದ್ದುಗೊಳಿಸಲಾಗಿದೆ. ಅಂತೆಯೇ, ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಭಾರತೀಯರಿಗೆ ಸೂಚಿಸಿರುವ ವಿದೇಶಾಂಗ ಸಚಿವಾಲಯ, ಭದ್ರತಾ ದೃಷ್ಟಿಯಿಂದ, ನೆರೆದೇಶಗಳಲ್ಲಿರುವವರು ಕೂಡಲೇ ತಾಯ್ತಾಡಿಗೆ ಮರಳುವಂತೆ ನಿರ್ದೇಶಿಸಿದೆ.
ಕಾಶ್ಮೀರ ದಾಳಿಕೋರರು ಎಲ್ಲೇ ಇದ್ದರೂ ಬಿಡೋದಿಲ್ಲ: ಪ್ರಧಾನಿ ಮೋದಿ
ಎಕ್ಸ್‌ಖಾತೆಗೆ ನಿರ್ಬಂಧ: ಪಹಲ್ಗಾಂ ಘಟನೆ ಹಿನ್ನೆಲೆ ಪಾಕ್ ಸರ್ಕಾರದ ಅಧಿಕೃತ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಭಾರತ ಸರ್ಕಾರದ ಮನವಿ ಮೇರೆಗೆ ಎಕ್' ಪಾಕ್ ಸರ್ಕಾರ ಖಾತೆ ಅಮಾನತು ಮಾಡಿದೆ. ಹೀಗಾಗಿ ಭಾರತದಲ್ಲಿ ಇನ್ಮುಂದೆ ಪಾಕಿಸ್ತಾನದ ಎಕ್ಸ್ ಖಾತೆಯನ್ನು ಬಳಕೆದಾರರಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ರಿಟ್ರೇಟ್ ಕಡಿತ: ಇನ್ನೊಂದೆಡೆ ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಅಟ್ಟಾರಿ, ಹುಸೇನಿವಾಲಾ ಮತ್ತು ಸದಿಯಲ್ಲಿ ನಡೆಯುತ್ತಿದ್ದರಿಟ್ರೇಟ್ ಕಾರ್ಯಕ್ರಮದ ಅವಧಿ ಕಡಿತ ಮಾಡಲಾಗಿದೆ. ಜೊತೆಗೆ ಭಾರತೀಯ ಗಾರ್ಡ್ ಕಮಾಂಡರ್‌ಮತ್ತು ಪಾಕಿಸ್ತಾನದ ಗಾರ್ಡ್ ಕಮಾಂಡರ್ ನಡುವಿನ ಹಸ್ತಲಾಘವವನ್ನು ನಿಲ್ಲಿಸಲಾಗಿದೆ. ಗಡಿಯಲ್ಲಿನ ಎಲ್ಲಾ ದ್ವಾರಗಳನ್ನು ಮುಚ್ಚಲಾಗಿದೆ.
ಭಾರತ - ಪಾಕ್ ರಾಜತಾಂತ್ರಿಕ ಯುದ್ಧ: ಪಹಲ್ಗಾಂ ದಾಳಿ ಬಳಿಕ ಎರಡೂ ದೇಶಗಳ ಸಂಘರ್ಷ, ಪ್ರತೀಕಾರ
ಅಟ್ಟಾರಿ ಗಡಿ ಬಂದಿಂದ 3890 ಕೋಟಿ ವ್ಯಾಪಾರ ಬಂದ್: ಪಾಕಿಸ್ತಾನದ ವಿರುದ್ಧದ ಪ್ರತೀಕಾರದ ಭಾಗವಾಗಿ ಉಭಯ ದೇಶಗಳ ನಡುವಿನ ಅಟ್ಟಾರಿ ಗಡಿಯನ್ನು ಮುಚ್ಚುವ ನಿರ್ಧಾರವನ್ನು ಭಾರತ ಕೈಗೊಂಡಿದೆ. ಇದು, ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಇರುವ ಏಕೈಕ ಭೂ ವ್ಯಾಪಾರ ಮಾರ್ಗವಾಗಿದೆ. 2023-24ರ ಅವಧಿಯಲ್ಲಿ ಅಟ್ಟಾರಿ ಮಾರ್ಗವಾಗಿ 3,890 ಕೋಟಿ ರು. ಮೌಲ್ಯದ ವ್ಯಾಪಾರ ನಡೆದಿತ್ತು. ಇದರ ಬಹುತೇಕ ಲಾಭ ಪಾಕಿಸ್ತಾನಕ್ಕೆ ಆಗುತ್ತಿತ್ತು. ಈಗ ಇದನ್ನು ಮುಚ್ಚುವುದರಿಂದ ಪಾಕ್ ಪಾಲಿನ ಲಾಭಕ್ಕೆ ಕತ್ತರಿ ಬೀಳಲಿದ್ದು, ಕೆಲ ಅಗತ್ಯ ವಸ್ತುಗಳ ಕೊರತೆಯೂ ಕಾಡಲಿದೆ.
