Asianet Suvarna News Asianet Suvarna News

ವಿಷ ಬೆರೆಸಿದ್ರೆ ಏನ್‌ ಮಾಡೋದು ಎಂದು ಪೊಲೀಸರು ಕೊಟ್ಟ ಟೀ ಕುಡಿಯಲ್ಲ ಎಂದ ಮಾಜಿ ಸಿಎಂ ಅಖಿಲೇಶ್ ಯಾದವ್..!

ನಾನು ಇಲ್ಲಿ ಚಹಾ ಕುಡಿಯುವುದಿಲ್ಲ, ನಾನು ನನ್ನದೇ ಆದ ಟೀ ತರುತ್ತೇನೆ, ಆದರೆ ನಿಮ್ಮ ಕಪ್ ಅನ್ನು ತೆಗೆದುಕೊಳ್ಳುತ್ತೇನೆ. ಇಲ್ಲಿ ನೀಡುವ ಚಹಾವನ್ನು ನಾನು ಕುಡಿಯಲು ಸಾಧ್ಯವಿಲ್ಲ. ನೀವು ನನಗೆ ವಿಷವನ್ನು ಕೊಟ್ಟರೆ ಏನು ಮಾಡೋದು ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ. 

akhilesh yadavs poison charge in refusing tea by uttar pradesh cop sparks row ash
Author
First Published Jan 8, 2023, 8:38 PM IST

ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ಪೊಲೀಸ್ (Police)  ಸಿಬ್ಬಂದಿ ನೀಡಿದ ಚಹಾ (Tea) ಸೇವಿಸಲು ಸಮಾಜವಾದಿ ಪಕ್ಷದ ಮುಖ್ಯಸ್ಥ(Samajwadi Party Chief) ಅಖಿಲೇಶ್‌ ಯಾದವ್‌ (Akhilesh Yadav) ನಿರಾಕರಿಸಿದ್ದಾರೆ. ಅವರು ತನಗೆ ವಿಷ (Poison) ಹಾಕುತ್ತಾರೆ ಎಂಬ ಭಯವಿದೆ ಎಂದೂ ಹೇಳಿದ್ದಾರೆ. ಬಿಜೆಪಿ (BJP) ಮುಖಂಡರು ಮತ್ತು ಪತ್ರಕರ್ತರ ವಿರುದ್ಧ ಪಕ್ಷದ ಕಾರ್ಯಕರ್ತರು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಪಕ್ಷದೊಂದಿಗೆ ಟ್ವಿಟ್ಟರ್‌ ಖಾತೆಯನ್ನು ನಡೆಸುತ್ತಿರುವ ಪಕ್ಷದ ಸಹೋದ್ಯೋಗಿ ಮನೀಶ್ ಜಗನ್ ಅಗರ್‌ವಾಲ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಅಖಿಲೇಶ್‌ ಯಾದವ್‌ ಲಖನೌ ಪೊಲೀಸ್ ಪ್ರಧಾನ ಕಚೇರಿಗೆ ತೆರಳಿದ್ದರು.

"ನಾನು ಇಲ್ಲಿ ಚಹಾವನ್ನು ಕುಡಿಯುವುದಿಲ್ಲ, ನಾನು ನನ್ನದೇ ಆದ ಟೀ ತರುತ್ತೇನೆ, ಆದರೆ ನಿಮ್ಮ ಕಪ್ ಅನ್ನು ತೆಗೆದುಕೊಳ್ಳುತ್ತೇನೆ. ಇಲ್ಲಿ ನೀಡುವ ಚಹಾವನ್ನು ನಾನು ಕುಡಿಯಲು ಸಾಧ್ಯವಿಲ್ಲ. ನೀವು ನನಗೆ ವಿಷವನ್ನು ಕೊಟ್ಟರೆ ಏನು ಮಾಡೋದು..? ನನಗೆ ನಂಬಿಕೆ ಇಲ್ಲ. ನಾನು ಗಂಭೀರವಾಗಿ ಹೇಳ್ತಿದ್ದೇನೆ. ನನಗೆ ನಂಬಿಕೆ ಇಲ್ಲ. ನಾನು ಅದನ್ನು ಹೊರಗಿನಿಂದ ತರುತ್ತೇನೆ," ಎಂದು ಅಖಿಲೇಶ್‌ ಯಾದವ್‌ ಪೊಲೀಸ್ ಅಧಿಕಾರಿಗಳಿಗೆ ಹೇಳುವುದನ್ನು ನೋಡಬಹುದು. ಅಲ್ಲದೆ, ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಹೊರಗಿನಿಂದ ಚಹಾ ತರುವಂತೆಯೂ ಕೇಳಿದರು.

ಇದನ್ನು ಓದಿ: ಮೈನ್‌ಪುರಿ ಉಪಚುನಾವಣೆ: ಮುಲಾಯಂ ಸೊಸೆ ಡಿಂಪಲ್‌ ಕಣಕ್ಕೆ

ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಖಿಲೇಶ್ ಯಾದವ್ ಅವರು ಪೊಲೀಸ್ ಪ್ರಧಾನ ಕಚೇರಿಗೆ ಹೋಗಿದ್ದರು ಮತ್ತು ತಮ್ಮ ಪಕ್ಷದ ಸಾಮಾಜಿಕ ಮಾಧ್ಯಮ ಕಾರ್ಯಕರ್ತ ಮನೀಶ್ ಜಗನ್ ಅಗರ್ವಾಲ್ ಅವರನ್ನು ಯಾವ ಆಧಾರದ ಮೇಲೆ ಬಂಧಿಸಲಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ತನ್ನೊಂದಿಗೆ ಮಾತನಾಡಲು ಯಾವುದೇ ಹಿರಿಯ ಪೊಲೀಸ್ ಅಧಿಕಾರಿ ಇರಲಿಲ್ಲ ಎಂದೂ ಅಖಿಲೇಶ್‌ ಯಾದವ್‌ ಹೇಳಿಕೊಂಡಿದ್ದಾರೆ.ಈ ವೇಳೆ, ಪಕ್ಷದ ಹಲವು ಕಾರ್ಯಕರ್ತರು ಹೊರಗೆ ಜಮಾಯಿಸಿದ್ದರೆ, ನಾನು ಸುಮಾರು 2 ಗಂಟೆಗಳ ಕಾಲ ಪೊಲೀಸ್ ಪ್ರಧಾನ ಕಚೇರಿಯಲ್ಲಿಯೇ ಇದ್ದೆ ಎಂದೂ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. 

ಇನ್ನು, ಬಿಜೆಪಿ ಐಟಿ ಸೆಲ್ ಕಾರ್ಯಕರ್ತೆ ರಿಚಾ ರಜಪೂತ್ ಅವರು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಅವರು ಸಲ್ಲಿಸಿದ ದೂರನ್ನು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ವೀಕರಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಚುನಾವಣಾ ಫಲಿತಾಂಶಕ್ಕೂ ಮುನ್ನ ಬಿಜೆಪಿ ವಿರುದ್ಧ ಅಖಿಲೇಶ್ ಗಂಭೀರ ಆರೋಪ!

ಇನ್ನೊಂದೆಡೆ, ಬಂಧಿತ ಸಮಾಜವಾದಿ ಪಕ್ಷದ ಕಾರ್ಯಕರ್ತನ ವಿರುದ್ಧ ಇತ್ತೀಚಿನ ಪ್ರಕರಣವನ್ನು ರಿಚಾ ರಜಪೂತ್ ದಾಖಲಿಸಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರು ತನ್ನ ಮೇಲೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತನ್ನ ನಡತೆಯನ್ನು ಅವಮಾನಿಸಿದ್ದಾರೆ ಮತ್ತು ತನ್ನ ಜೀವ ಮತ್ತು ಸುರಕ್ಷತೆಯ ಬಗ್ಗೆ ಭಯಪಡುತ್ತಾಳೆ ಎಂದು ಶ್ರೀಮತಿ ರಿಚಾ ರಜಪೂತ್ ಆರೋಪಿಸಿದ್ದರು. ನಂತರ ಅಖಿಲೇಶ್ ಯಾದವ್ ಅವರು ಮನೀಷ್ ಜಗನ್ ಅಗರ್ವಾಲ್ ಅವರನ್ನು ಭೇಟಿ ಮಾಡಲು ಲಕ್ನೋ ಜೈಲಿಗೆ ತೆರಳಿದ್ದಾರೆ. 

ಇದನ್ನೂ ಓದಿ: From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

Follow Us:
Download App:
  • android
  • ios