Asianet Suvarna News Asianet Suvarna News

ಮೈನ್‌ಪುರಿ ಉಪಚುನಾವಣೆ: ಮುಲಾಯಂ ಸೊಸೆ ಡಿಂಪಲ್‌ ಕಣಕ್ಕೆ

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ನಿಧನದ ನಂತರ ಖಾಲಿಯಾಗಿರುವ ಸ್ಥಾನಕ್ಕಾಗಿ ನಡೆಯಲಿರುವ ಮೈನ್‌ಪುರಿ ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಸೊಸೆ ಹಾಗೂ ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷ ಗುರುವಾರ ಘೋಷಿಸಿದೆ.

Mainpuri by election, Mulayam's daughter-in-law Dimple Yadav contests from Mainpuri akb
Author
First Published Nov 11, 2022, 9:53 AM IST

ನವದೆಹಲಿ: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ನಿಧನದ ನಂತರ ಖಾಲಿಯಾಗಿರುವ ಸ್ಥಾನಕ್ಕಾಗಿ ನಡೆಯಲಿರುವ ಮೈನ್‌ಪುರಿ ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಸೊಸೆ ಹಾಗೂ ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷ ಗುರುವಾರ ಘೋಷಿಸಿದೆ. ಡಿ.5 ರಂದು ಉಪಚುನಾವಣೆ ನಡೆಯಲಿದ್ದು, ಡಿ.8 ರಂದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಈ ನಿಟ್ಟಿನಲ್ಲಿ ‘ಮೈನ್‌ಪುರಿ ಉಪಚುನಾವಣೆಯಲ್ಲಿ ಡಿಂಪಲ್‌ ಯಾದವ್‌ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ’ ಎಂದು ಪಕ್ಷ ಟ್ವೀಟ್‌ ಮೂಲಕ ತಿಳಿಸಿದೆ. ಸಮಾಜವಾದಿ ಪಕ್ಷದ ಹಾಲಿ ಮುಖ್ಯಸ್ಥ ಅಖಿಲೇಶ್‌ ಪತ್ನಿಯಾಗಿರುವ ಡಿಂಪಲ್‌ 2012 ಹಾಗೂ 2014 ಕನ್ನೌಜ್‌ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆದರೆ 2019ರಲ್ಲಿ ಬಿಜೆಪಿ ಅಭ್ಯರ್ಥಿ ಸುಬ್ರತ್‌ ಪಾಠಕ್‌ ಎದುರು ಸೋತಿದ್ದರು.
 

ಸೋನಿಯಾ ಗಾಂಧಿಗೆ ಪ್ರಧಾನಿ ಪಟ್ಟ ತಪ್ಪಿಸಿದ್ದ Mulayam Singh Yadav..!

Mulayam Singh Yadav Death: ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಸಂಸ್ಥಾಪಕ ಇನ್ನಿಲ್ಲ

ಸಾಧನಾ ಗುಪ್ತಾ, ಮುಲಾಯಂ ಪ್ರೀತಿಗೆ ನಾಂದಿಯಾಯ್ತು ಆ ಘಟನೆ, ವರ್ಷಾನುಗಟ್ಟಲೇ ಸಂಬಂಧ ಮುಚ್ಚಿಟ್ಟಿದ್ದ ಮಾಜಿ ಸಿಎಂ!

Follow Us:
Download App:
  • android
  • ios