ಎನ್‌ಪಿಆರ್,ಎನ್‌ಆರ್‌ಸಿಗೆ ದಾಖಲೆ ಕೊಡಲ್ಲ: ಅಖಿಲೇಶ್ ಗುಡುಗು!

ಎನ್‌ಪಿಆರ್,ಎನ್‌ಆರ್‌ಸಿಗೆ ಎಸ್‌ಪಿ ಮುಖ್ಯಸ್ಥರ ವಿರೋಧ| ಯಾವುದೇ ದಾಖಲೆ ಕೊಡಲ್ಲ ಎಂದ ಅಖಿಲೇಶ್ ಯಾದವ್| 'ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ದೇಶದ ಬಡ ಜನರು ಹಾಗೂ ಅಲ್ಪಸಂಖ್ಯಾತರ ವಿರೋಧಿ'|'ಎನ್‌ಪಿಆರ್‌ ಫಾರಂ ಭರ್ತಿ ಮಾಡದಿರುವುವುರಲ್ಲಿ ನಾನೇ ಮೊದಲಿಗ'| 'ಲಾಠಿಚಾರ್ಜ್ ಮಾಡುವ ಪೊಲೀಸರ ಕುಟುಂಬಸ್ಥರೂ ದಾಖಲೆ ಕೊಡಬೇಕು'|ಐಸಿಯುನಿಂದ ದೇಶದ ಆರ್ಥಿಕತೆ ಹೊರಬರಬೇಕಾಗಿದೆ ಎಂದ ಅಖಿಲೇಶ್|

Akhilesh Yadav Says He Will Not Fill NPR and NRC Form

ಲಕ್ನೋ(ಡಿ.29): ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ದೇಶದ ಬಡ ಜನರು ಹಾಗೂ ಅಲ್ಪಸಂಖ್ಯಾತರ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ತಾವು ದಾಖಲೆಗಳನ್ನು ಕೊಡುವುದಿಲ್ಲ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್,  ಎನ್‌ಪಿಆರ್‌ ಫಾರಂ ಭರ್ತಿ ಮಾಡದಿರುವುವುರಲ್ಲಿ ನಾನೇ ಮೊದಲಿಗ ಎಂದು ಅವರು ಸ್ಪಷ್ಟಪಡಿಸಿದರು.

ಶೀಘ್ರ ಕ್ರಮ ಕೈಗೊಳ್ಳಿ: ಯುಪಿ ಪೊಲೀಸರಿಗೆ ನಖ್ವಿ ಆದೇಶ ಏನು?

ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿದ ಅಖಿಲೇಶ್, ಲಾಠಿಚಾರ್ಜ್ ಮಾಡುವ ಪೊಲೀಸರ ಕುಟುಂಬಸ್ಥರೂ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಮಾರ್ಮಿಕವಾಗಿ ಹೇಳಿದರು.

ಕತ್ತು ಹಿಡಿದು ನೂಕಿದರು ಎನ್ನುತ್ತಾರೆ ಪ್ರಿಯಾಂಕಾ, ಕರ್ತವ್ಯ ಮಾಡಿದೆ ಎನ್ನುತ್ತಾರೆ ಅಧಿಕಾರಿ!

Samajwadi Party leader Akhilesh Yadav in Lucknow: If need arises, I will be the first one who will not fill any form, but the question is if you will support or not. Hum nahi bharte NPR, kya karenge aap? pic.twitter.com/Fb0bSnjXYv

— ANI UP (@ANINewsUP) December 29, 2019

ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಾದರೆ  ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಕ್ಷಿಣಿಸಲಿದೆ ಎಂದು ಅಖಿಲೇಶ್ ಅಭಿಪ್ರಾಯಪಟ್ಟರು. ಐಸಿಯುನಿಂದ ದೇಶದ ಆರ್ಥಿಕತೆ ಹೊರಬರಬೇಕಾಗಿದೆ ಎಂದು ಅಖಿಲೇಶ್ ಹೇಳಿದರು.

ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿದ ಪ್ರಿಯಾಂಕಾ ಗಾಂಧಿ!

Latest Videos
Follow Us:
Download App:
  • android
  • ios