Asianet Suvarna News Asianet Suvarna News

ಕತ್ತು ಹಿಡಿದು ನೂಕಿದರು ಎನ್ನುತ್ತಾರೆ ಪ್ರಿಯಾಂಕಾ, ಕರ್ತವ್ಯ ಮಾಡಿದೆ ಎನ್ನುತ್ತಾರೆ ಅಧಿಕಾರಿ!

ಪ್ರಿಯಾಂಕಾ ಗಾಂಧಿ ವಾದ್ರಾ ಮೇಲೆ ಯುಪಿ ಪೊಲೀಸ ದೌರ್ಜನ್ಯ?| ಸ್ಕೂಟರ್ ಮೇಲೆ ಹೊರಟಿದ್ದ ಪ್ರಿಯಾಂಕಾ ಅವರನ್ನು ತಡೆದ ಪೊಲೀಸರು| ನನ್ನ ಕತ್ತು ಹಿಡಿದು ನೂಕಿದರ ಎಂದು ಆರೋಪಿಸಿದ ಪ್ರಿಯಾಂಕಾ| ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ ಎಂದ ಪೊಲೀಸ್ ಅಧಿಕಾರಿ| ಪೊಲೀಸ್ ದೌರ್ಜನ್ಯ ಖಂಡಿಸಿದ ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ|

Row Over Alleged Police Manhandling On Priyanka Gandhi
Author
Bengaluru, First Published Dec 29, 2019, 2:37 PM IST
  • Facebook
  • Twitter
  • Whatsapp

ಲಕ್ನೋ(ಡಿ.29): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಪೊಲೀಸರು ದುರ್ವರ್ತನೆ ತೋರಿದ ಆರೋಪ ಕೇಳಿ ಬಂದಿದ್ದು,  ಈಆರೋಪವನ್ನು ಯುಪಿ ಪೊಲೀಸ್ ಇಲಾಖೆ ನಿರಾಕರಿಸಿದೆ .

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಂಧನಕ್ಕೊಳಗಾಗಿರುವ ಮಾಜಿ ಐಪಿಎಸ್ ಅಧಿಕಾರಿ ಎಸ್‌ಆರ್‌ ಧರಾಪುರಿ ಮನೆಯತ್ತ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ತಡೆದಿದ್ದರು.

ಈ ವೇಳೆ ಪಕ್ಷದ ಕಾರ್ಯಕರ್ತರನೋರ್ವನ ಸ್ಕೂಟರ್‌ನಲ್ಲಿ ಧರಾಪುರಿ ಮನೆಗೆ ತೆರಳಲು ಯತ್ನಿಸಿದ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ತಡೆದಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದಲ್ಲದೇ ಪೊಲೀಸರು ಪ್ರಿಯಾಂಕಾ ಅವರನ್ನು ಒತ್ತಾಯಪೂರ್ವಕವಾಗಿ ತಡೆದು ನಿಲ್ಲಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕಾ, ಪೊಲೀಸರು ನನ್ನು ಕತ್ತು ಹಿಡಿದು ತಳ್ಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಯುಪಿ ಪೊಲೀಸರ ಈ ದುರ್ವರ್ತನೆ ನನ್ನನ್ನು ದಂಗುಬಡಿಸಿದೆ ಎಂದು ಪ್ರಿಯಾಂಕಾ ಹರಿಹಾಯ್ದಿದ್ದರು.

ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿದ ಪ್ರಿಯಾಂಕಾ ಗಾಂಧಿ!

ಆದರೆ ಪ್ರಿಯಾಂಕಾ ಆರೋಪವನ್ನು ತಳ್ಳಿ ಹಾಕಿರುವ ಕರ್ತವ್ಯನಿರತ ಪೊಲೀಸ್ ಅಧಿಕಾರಿ, ನಾನು ಕೆವಲ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಿಯಾಂಕಾ ಅವರಿಗೆಯಾವುದೇ ದೈಹಿಕ ಹಿಂಸೆ ನೀಡಿಲ್ಲ. ಕಾನೂನು ಉಲ್ಲಂಘಿಸಿ ಪೊಲೀಸರ ಕಣ್ತಪ್ಪಿಸಲು ಯತ್ನಿಸಿದ ಪ್ರಿಯಾಂಕಾ ಅವರನ್ನು ಕೇವಲ ತಡೆದು ನಿಲ್ಲಿಸಿದ್ದಾಗಿ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ದೌರ್ಜನ್ಯ ಖಂಡಿಸಿದ ಶತ್ರುಘ್ನ ಸಿನ್ಹಾ:

ಇನ್ನು ಪ್ರಿಯಾಂಕಾ ಗಾಂಧಿ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಬಾಲಿವುಡ್ ನಟ, ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಶತ್ರುಘ್ನ, ನೆಹರೂ-ಗಾಂಧಿ ಪರಿವಾರದ ಹೆಣ್ಣುಮಗಳ ಮೇಲೆ ಈ ರೀತಿ ದೌರ್ಜನ್ಯ ನಡೆದರೆ ಇನ್ನು ದೇಶದ ಸಾಮಾನ್ಯ ಜನರ ಗತಿಯೇನು ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Follow Us:
Download App:
  • android
  • ios