Asianet Suvarna News Asianet Suvarna News

ಯಾಸಿನ್ ಮಲಿಕ್ ತನ್ನ ಕರ್ಮಕ್ಕೆ ಫಲ ಪಡೆದಿದ್ದಾನೆ: ಅಜ್ಮೀರ್ ದರ್ಗಾ ದಿವಾನ್

ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಯ ನಂತರ ಜಮ್ಮು ಕಾಶ್ಮೀರದ ಪ್ರತ್ಯೇಕತಾ ಉಗ್ರವಾಸಿ ಯಾಸಿನ್ ಮಲಿಕ್ ಅವರ ಅಪರಾಧಗಳಿಗೆ ಶಿಕ್ಷೆಯಾಗುತ್ತಿದೆ ಎಂದು ಅಜ್ಮೀರ್ ದರ್ಗಾ ದಿವಾನ್ ಝೈನುಯಲ್ ಅಬೇದಿನ್ ಹೇಳಿದ್ದಾರೆ.
 

Ajmer Dargah Diwan Zainual Abedin statement came on the punishment of Yasin Malik says got punishment for deeds san
Author
Bengaluru, First Published May 26, 2022, 11:36 AM IST | Last Updated May 26, 2022, 11:42 AM IST

ನವದೆಹಲಿ (ಮೇ. 26): ಯಾಸಿನ್ ಮಲಿಕ್ (Yasin Malik) ತಾನು ಮಾಡಿದ ಕರ್ಮಗಳಿಗಾಗಿ ಫಲ ಪಡೆದಿದ್ದಾರೆ. ಯಾಸಿನ್ ಮಲಿಕ್ ಗೆ ಶಿಕ್ಷೆ ಘೋಷಣೆಯಾಗಿರುವ ಕಾರಣ ಪಾಕಿಸ್ತಾನದ (pakistan) ಭಯೋತ್ಪಾದಕರ ಪ್ರೀತಿಯ ಬಗ್ಗೆಯೂ ಜಗತ್ತಿಗೆ ಗೊತ್ತಾಗಿದೆ. ಯಾಸಿನ್ ಮಲಿಕ್ ಅವರಂಥ ವ್ಯಕ್ತಿಗಳ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ಹಣಕಾಸು ನೆರವು ನೀಡುತ್ತಿದೆ ಎಂದು  ಅಜ್ಮೀರ್ ದರ್ಗಾ ದಿವಾನ್ ಝೈನುಯಲ್ ಅಬೇದಿನ್ (Ajmer Dargah Diwan Zainual Abedin) ಹೇಳಿದ್ದಾರೆ.

ಅಜ್ಮೀರ್‌ನಲ್ಲಿರುವ ವಿಶ್ವಪ್ರಸಿದ್ಧ ಸೂಫಿ ಸಂತ ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ದರ್ಗಾದ ದಿವಾನ್ ಮತ್ತು ಆಧ್ಯಾತ್ಮಿಕ ಮುಖ್ಯಸ್ಥ ಸೈಯದ್ ಝೈನುಲ್ ಅಬೇದೀನ್ ಅಲಿ ಖಾನ್ ಅವರು ಪ್ರಕಟಣೆಯ ಮೂಲಕ ಯಾಸಿನ್ ಮಲಿಕ್ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಯ ನಂತರ ಆತನ ಅಪರಾಧಗಳಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನು ಟ್ವಿಟರ್ ಮೂಲಕ ತಿಳಿಸಲಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ತನ್ನ ಬುದ್ಧಿವಂತಿಕೆ, ಸ್ವಾತಂತ್ರ್ಯ ಮತ್ತು ಪಾರದರ್ಶಕ ಚಿತ್ರಣವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ, ಇದು ಇಡೀ ಜಗತ್ತೇ ಮೆಚ್ಚಿದೆ ಎಂದು ಪ್ರಕಟಣೆಯಲ್ಲಿ ಬರೆದಿದ್ದಾರೆ.


ಭಾರತದಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸುವ ಮೂಲಕ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳನ್ನು ನಡೆಸುವ ಮೂಲಕ ಮಲಿಕ್ ಸಾಮಾನ್ಯ ಜನರನ್ನು ಭಯೋತ್ಪಾದಕರನ್ನಾಗಿ ಮಾಡಿದರು ಮತ್ತು ಅಮಾಯಕ ಕಾಶ್ಮೀರಿಗಳ ಕೈಗೆ ಬಲವಂತವಾಗಿ ಬಂದೂಕುಗಳನ್ನು ನೀಡಿ ಪುಸ್ತಕಗಳನ್ನು ಕಸಿದುಕೊಂಡರು," ಎಂದು ಅವರು ಹೇಳಿದರು. ಯಾಸಿನ್ ಅವರ ಕೃತ್ಯಕ್ಕೆ ತಕ್ಕೆ ಶಿಕ್ಷೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಂಜೆ ಯಾಸಿನ್ ಮಲಿಕ್ ನನ್ನು ಲಾಕ್ ಅಪ್ ನಿಂದ ಕೋರ್ಟ್ ರೂಂಗೆ ಕರೆತರಲಾಗಿತ್ತು. ಅಲ್ಲಿ ಮಲಿಕ್ ಗೆ ಒಟ್ಟು 09 ಸೆಕ್ಷನ್ ಗಳ ಅಡಿಯಲ್ಲಿ ಎರಡು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ವರದಿಗಳ ಪ್ರಕಾರ, ಯಾಸಿನ್ ಮಲಿಕ್ ಶಿಕ್ಷೆಯ ಸಮಯದಲ್ಲಿ ಅನೇಕ ಜನರು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ನ್ಯಾಯಾಲಯದ ಹೊರಗೆ ತಲುಪಿದ್ದಾರೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಶ್ರೀನಗರ ಬಳಿಯ ಮೈಸುಮಾದಲ್ಲಿರುವ ಯಾಸಿನ್ ಮಲಿಕ್ ಅವರ ಮನೆಯ ಬಳಿ ಮಲಿಕ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದವು.

Yasin Malik Sentenced ಕಾಶ್ಮೀರ ಪಂಡಿತರಿಗಾದ ಅನ್ಯಾಯಕ್ಕೆ ತಕ್ಕಮಟ್ಟಿನ ನ್ಯಾಯ, ಉಗ್ರ ಯಾಸಿನ್‌ಗೆ ಜೀವಾವಧಿ ಶಿಕ್ಷೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಿದ್ದ ಆರೋಪದ ಮೇಲೆ ದೋಷಿ ಎಂದು ಸಾಬೀತಾಗಿರುವ ಉಗ್ರ ಯಾಸಿನ್ ಮಲಿಕ್‌ ಗೆ  ದೆಹಲಿಯ ಎನ್‌ಐಎ ನ್ಯಾಯಾಲಯ ಜೀವಾವದಿ ಶಿಕ್ಷೆ  ನೀಡಿದೆ. 5 ಪ್ರಕರಣಗಳಿಗೆ ಸಂಬಂಧಿಸಿ ಬುಧವಾರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಎರಡು ಜೀವಾವಧಿ ಶಿಕ್ಷೆ ಜೊತೆಗೆ 10 ವರ್ಷಗಳ ಕಠಿಣ ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ವಿಧಿಸಿದೆ. ಒಂದು ಪ್ರಕರಣದಲ್ಲಿ 10 ಲಕ್ಷ ರೂಪಾಯಿ, ಎರಡನೇ ಪ್ರಕರಣದಲ್ಲಿ 5 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.

NewsHour ಹತ್ಯೆ, ಹತ್ಯೆ, ಹತ್ಯೆ, ಕಾಶ್ಮೀರದಲ್ಲಿ ನರಹಂತಕ ಯಾಸಿನ್ ಮಲಿಕ್ ರಕ್ತ ಚರಿತ್ರೆ!

ಭಾರಿ ಭದ್ರತೆಯೊಂದಿಗೆ ಯಾಸಿನ್ ಮಲಿಕ್‌ನನ್ನೂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇನ್ನೊಂದೆಡೆ,  ಶ್ರೀನರದಲ್ಲಿರುವ ಯಾಸಿನ್ ಮಲಿಕ್ ನಿವಾಸದ ಬಳಿ ಹಿಂಸಾಚಾರ ಭುಗಿಲೆದ್ದಿದೆ. ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.  ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಮಾಡುವ ಸಲುವಾಗಿ ಪಾಕಿಸ್ತಾನದಿಂದ ಹಣ ಪಡೆದ ಆರೋಪವನ್ನು ಯಾಸಿನ್ ಮಲಿಕ್ ಮೇಲೆ ಹೊರಿಸಲಾಗಿತ್ತು. ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿದಂತೆ ಎಲ್ಲಾ ಆರೋಪಗಳ ಬಗ್ಗೆ ಯಾಸಿನ್ ಮಲಿಕ್ ಕಳೆದ ಮಂಗಳವಾರ ತಪ್ಪೊಪ್ಪಿಕೊಂಡ ನಂತರ ಅವರನ್ನು ಕೋರ್ಟ್ ದೋಷಿ ಎಂದು ಘೋಷಿಸಿತ್ತು.

Latest Videos
Follow Us:
Download App:
  • android
  • ios