Asianet Suvarna News Asianet Suvarna News

ಮೂರು ರಾಜ್ಯಗಳ ಗೆಲುವಿನೊಂದಿಗೆ ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಅಧಿಪತ್ಯ

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದರೊಂದಿಗೆ ಒಟ್ಟು 17 ರಾಜ್ಯಗಳಲ್ಲಿ ಸರ್ಕಾರ ನಡೆಸುವ ಮೂಲಕ ತನ್ನ ಬಲ ಹೆಚ್ಚಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ಹೊಸ ಹುಮ್ಮಸ್ಸಿನೊಂದಿಗೆ ಸಜ್ಜಾಗಲು ಅಣಿಯಾಗಿದೆ.

After victory In three state BJP is in power in 17 states of the country 12 on its own, 5 under alliance rule akb
Author
First Published Dec 4, 2023, 9:30 AM IST

ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವುದರೊಂದಿಗೆ ಒಟ್ಟು 17 ರಾಜ್ಯಗಳಲ್ಲಿ ಸರ್ಕಾರ ನಡೆಸುವ ಮೂಲಕ ತನ್ನ ಬಲ ಹೆಚ್ಚಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ಹೊಸ ಹುಮ್ಮಸ್ಸಿನೊಂದಿಗೆ ಸಜ್ಜಾಗಲು ಅಣಿಯಾಗಿದೆ.

ಮತ್ತೊಂದೆಡೆ ಹಲವು ಉಪಕ್ರಮಗಳ ಮೂಲಕ ಜನತೆಯ ಜೊತೆ ಬೆರೆಯಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಯತ್ನಿಸಿದರೂ, ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆ ಕೇವಲ 4ಕ್ಕೆ ಕುಸಿದಿದೆ. ಬಿಜೆಪಿ 12 ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ನಡೆಸುತ್ತಿದ್ದರೆ 5 ರಾಜ್ಯಗಳಲ್ಲಿ ಮೈತ್ರಿಯ ಬಲದಿಂದ ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್‌ ಹಿಮಾಚಲ,ಕರ್ನಾಟಕ ಮತ್ತು ಇತ್ತೀಚೆಗೆ ಗೆದ್ದ ತೆಲಂಗಾಣದಲ್ಲಿ ಮಾತ್ರ ಅಧಿಕಾರದಲ್ಲಿರುವ ಮೂಲಕ ಕೇವಲ 3ಕ್ಕೆ ಕುಸಿತ ಕಂಡಿದೆ. ಮತ್ತೊಂದೆಗೆ ಆಮ್‌ ಆದ್ಮಿ ಪಕ್ಷ(AAP) 2 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ.

ತೆಲಂಗಾಣದಲ್ಲಿ ಹಾಲಿ ಸಿಎಂ ಹಾಗೂ ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನೇ ಸೋಲಿಸಿದ ಬಿಜೆಪಿಗ

ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್‌(Gujarat), ಗೋವಾ, ಅಸ್ಸಾಂ, ತ್ರಿಪುರಾ (Tripura), ಮಣಿಪುರ, ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಬಿಜೆಪಿ ಅಧಿಕಾರದಲ್ಲಿರುವ 12 ರಾಜ್ಯಗಳು. ಮಹಾರಾಷ್ಟ್ರ, ಮೇಘಾಲಯ, ಪುದುಚೇರಿ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಈ ಐದು ರಾಜ್ಯಗಳಳ್ಲಿ ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರದಲ್ಲಿದೆ.

ಕರ್ನಾಟಕ, ಹಿಮಾಚಲ ಪ್ರದೇಶ. ಜಾರ್ಖಂಡ್‌ ಮತ್ತು ತೆಲಂಗಾಣ ಈಗ ಕಾಂಗ್ರೆಸ್‌ ಅಧಿಕಾರದಲ್ಲಿರುವ 4 ರಾಜ್ಯಗಳು, ಹಾಗೆಯೇ  ಪಂಜಾಬ್‌ ಮತ್ತು ದೆಹಲಿ ಆಮ್‌ ಆದ್ಮಿ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಾಗಿವೆ.  ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಇತರ ಪಕ್ಷಗಳು ಅಧಿಕಾರದಲ್ಲಿವೆ. ಮಿಜೋರಂ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. 

6 ತಿಂಗಳಲ್ಲಿ ಕಾಂಗ್ರೆಸ್ಸಿಗೆ 2ನೇ ಜಯ ತಂದುಕೊಟ್ಟ ಕನ್ನಡಿಗ : ಕೆಸಿಆರ್ ಸೋತಿದ್ದರ ಹಿಂದೆ ಕಾನುಗೋಲು ತಂತ್ರ

ರೆಸಾರ್ಟ್‌ ರಾಜಕಾರಣದ ತಂತ್ರ ಸಂಪೂರ್ಣ ಉಲ್ಟಾ

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಬಹುತೇಕ ರಾಜ್ಯಗಳಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಹುದು ಎಂದು ವಿಶ್ಲೇಷಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷಗಳ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಭಾರೀ ರಣತಂತ್ರ ರೂಪಿಸಿದ್ದವು. ಆದರೆ ಎಲ್ಲೆಡೆ ಎಲ್ಲ ಪಕ್ಷಗಳಿಗೆ ಸ್ಪಷ್ಟ ಬಹುಮತ ದೊರಕಿ, ರೆಸಾರ್ಟ್‌ ರಾಜಕೀಯದ ತಂತ್ರ ಬುಡಮೇಲಾಗಿದೆ.

ತೆಲಂಗಾಣದಲ್ಲಿ ಅತಂತ್ರ ವಿಧಾನಸಬೆ ಸೃಷ್ಟಿಯನ್ನು ಅಂದಾಜಿಸಿ ಕಾಂಗ್ರೆಸ್‌ ಪಕ್ಷವು ತೆಲಂಗಾಣಕ್ಕೆ ಕರ್ನಾಟಕದಿಂದ ಸಚಿವರ ಪಡೆಯನ್ನೇ ಕಳುಹಿಸಿತ್ತು, ಹೈದರಾಬಾದ್‌ನ ತಾಜ್‌ ಕೃಷ್ಣ ಐಷಾರಾಮಿ ಹೋಟೆಲ್‌ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ರಕ್ಷಿಸಲು ಕೊಠಡಿಗಳನ್ನು ಕಾದಿರಿಸಿದ್ದರು. ಅಲ್ಲದೆ ವಿಜೇತರನ್ನು ಬೇರೆಡೆಗೆ ಸ್ಥಳಾಂತರಿಸಲು ಐಷಾರಾಮಿ ಬಸ್‌ಗಳನ್ನೂ ಸಹ ತಂದು ನಿಲ್ಲಿಸಿ ಚುನಾವಣಾ ಫಲಿತಾಂಶ ಬರುವವರೆಗೆ ಕಾದು ನಂತರ ಹೊರಡುವ ಸಿದ್ಧತೆ ನಡೆಸಿತ್ತು.

ತಗ್ಗದ ಮೋದಿ ಪ್ರಭಾವ: ನರೇಂದ್ರ ಈಗಲೂ ಮತ ಸೆಳೆವ ಬಲಶಾಲಿ ನಾಯಕ

ಆದರೆ ಈ ಎಲ್ಲ ತಂತ್ರಗಳು ನೀರಿನಲ್ಲಿ ಮಾಡಿದ ಹೋಮದಂತಾಗಿದ್ದು, ತೆಲಂಗಾಣದಲ್ಲಿ ಸ್ಪಷ್ಟ ಬಹುಮತ ಬಂದಿರುವುದರಿಂದ ಕುದುರೆ ವ್ಯಾಪಾರಕ್ಕೆ ಯಾವುದೇ ಆಸ್ಪದವಿಲ್ಲದಂತಾಗಿದೆ. ಅಲ್ಲದೆ ತೆಲಂಗಾಣದಲ್ಲಿ (Telangana) ಕಿಂಗ್‌ ಮೇಕರ್‌ ಕನಸು ಕಾಣುತ್ತಿದ್ದ ಬಿಜೆಪಿ ಲೆಕ್ಕಾಚಾರವೂ ತಲೆಕೆಳಗಾಗಿದ್ದು, ಅಲ್ಲಿ ಕೇವಲ ಖಾತೆ ತೆರೆಯುವಲ್ಲಿ ಮಾತ್ರ ಯಶ ಕಂಡಿದೆ.

ನಿಮ್ಮ ಕನಸನ್ನು ಈಡೇರಿಸುವುದು ನನ್ನ ಸಂಕಲ್ಪ: ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ವಿಜಯೋತ್ಸವ ಭಾಷಣ

ಇತ್ತ ರಾಜಸ್ಥಾನದಲ್ಲೂ ಸಹ ರಾಷ್ಟ್ರೀಯ ಪಕ್ಷಗಳು ತಮ್ಮ ಬಂಡಾಯ ಅಭ್ಯರ್ಥಿಗಳು, ಪಕ್ಷೇತರರು ಹಾಗೂ ಸಣ್ಣ ಪಕ್ಷಗಳ ಜೊತೆ ಮಾತುಕತೆ ನಡೆಸಿದ್ದರು. ಈಗ ಎಲ್ಲ ರಾಜ್ಯಗಳಲ್ಲಿ ಯಾರ ಹಂಗೂ ಇಲ್ಲದೆ ಏಕಪಕ್ಷ ಆಡಳಿತ ನಡೆಸುವ ಮಟ್ಟಿಗೆ ಸ್ಪಷ್ಟ ಬಹುಮತ ಬಂದಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ನಡೆಯುತ್ತಿದ್ದ ಆಪರೇಷನ್‌ನ ಭಾಗವಾಗಿ ರೆಸಾರ್ಟ್‌ ರಾಜಕಾರಣದ ತಂತ್ರ ನಿಷ್ಪ್ರಯೋಜಕವೆನ್ನುವಂತೆ ಮಾಡಿದೆ. ಅಲ್ಲದೆ ಈ ಬಾರಿ 3 ರಾಜ್ಯಗಳಲ್ಲಿ ಬಿಜೆಪಿಯೇ ಗೆದ್ದಿರುವುದರಿಂದ ಭವಿಷ್ಯದಲ್ಲಿಯೂ ಸಹ ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಅಚ್ಚರಿಯ ರೀತಿಯಲ್ಲಿ ಸರ್ಕಾರ ಬದಲಾದ ರೀತಿ ಬದಲಾವಣೆ ಸಾಧ್ಯತೆಗಳು ಇಲ್ಲವಾಗಿವೆ.

Follow Us:
Download App:
  • android
  • ios