ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ: ನಾಲ್ವರ ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ
ಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾಗಿ 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಪುಣೆ ಸಮೀಪ ನಡೆದಿದೆ. ಪುಣೆ ಜಿಲ್ಲೆಯ ಯವತ್ ಎಂಬ ಗ್ರಾಮದ ಬಳಿ ಹಾದು ಹೋಗುವ ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಈ ಅನಾಹುತ ಸಂಭವಿಸಿದೆ.
ಪುಣೆ: ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾಗಿ 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಪುಣೆ ಸಮೀಪ ನಡೆದಿದೆ. ಪುಣೆ ಜಿಲ್ಲೆಯ ಯವತ್ ಎಂಬ ಗ್ರಾಮದ ಬಳಿ ಹಾದು ಹೋಗುವ ಪುಣೆ-ಸೊಲ್ಲಾಪುರ ಹೆದ್ದಾರಿಯಲ್ಲಿ ಈ ಅನಾಹುತ ಸಂಭವಿಸಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮೃತರ ಗುರುತು ಪತ್ತೆಯಾಗಿಲ್ಲ ಎಂದು ಯವತ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹೇಮಂತ್ ಶೆಡ್ಜೆ ತಿಳಿಸಿದರು.
ನಿನ್ನೆ ಮುಂಬೈ ಅಹ್ಮದಾಬಾದ್ ಹೈವೇಯಲ್ಲಿ ನಾಲ್ವರು ಬಲಿ
ನಿನ್ನೆಯಷ್ಟೇ ಮಹಾರಾಷ್ಟ್ರದ (Maharashtra) ಪಾಲ್‌ಗಾರ್ (Paalgar) ಜಿಲ್ಲೆಯ ದಹನು ಪ್ರದೇಶದ ಛರೋಟಿ ಎಂಬಲ್ಲಿ ಬರುವ ಮುಂಬೈ ಅಹ್ಮದಾಬಾದ್ ಹೈವೇಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಪಧ ಬದಲಿಸುವ ವೇಳೆ ಕಾರೊಂದು ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಟಾಟಾ ಸನ್ಸ್ ಸಂಸ್ಥೆಯ ಚೇರ್‌ಮ್ಯಾನ್, ಉದ್ಯಮಿ ಸೈರಸ್ ಮಿಸ್ತ್ರಿ (Cyrus Mistri) ಅವರ ಕಾರು ಅಪಘಾತಕ್ಕೀಡಾಗಿ ಮಿಸ್ತ್ರಿ ಸಾವಿಗೀಡಾದ ಸ್ಥಳದಲ್ಲಿಯೇ ಈ ಅನಾಹುತ ಸಂಭವಿಸಿತ್ತು.
ಮುಂಜಾನೆ 3.30ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಕಾರು ಗುಜರಾತ್‌ನತ್ತ (Gujarat) ಹೊರಟಿತ್ತು. ಕಾರು ಹೆದ್ದಾರಿಗೆ ತಲುಪಿ ಛರೋಟಿ ಬಳಿಯ ಮಹಾಲಕ್ಷ್ಮಿ ದೇಗುಲದ ಸಮೀಪ ಬಂದಾಗ ಕಾರು ಚಾಲಕ ಲೇನ್ ಬದಲಾಯಿಸಿದಾಗ ಕಾರು ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದರು.
ಸೈರಸ್ ಮಿಸ್ತ್ರಿ ಅಪಘಾತ ಸ್ಥಳದಲ್ಲಿ ಒಂದೇ ವರ್ಷದಲ್ಲಿ 26 ಸಾವು, ಬಿಚ್ಚಿ ಬೀಳಿಸುತ್ತಿದೆ ಸರ್ಕಾರಿ ದಾಖಲೆ!
ಈ ವರ್ಷದಲ್ಲಿ ಇಲ್ಲಿ ನಡೆದ ಎರಡನೇ ಅಪಘಾತ ಇದಾಗಿತ್ತು. ಜನವರಿ 8 ರಂದು ಕೂಡ ಇದೇ ಸ್ಥಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಮಹಾಲಕ್ಷ್ಮಿ ದೇಗುಲದ (Mahalakshmi Temple) ಬಳಿಯೇ ಕಂಟೈನರ್ ಟ್ರಕ್‌ಗೆ ಇವರ ಕಾರು ಡಿಕ್ಕಿ ಹೊಡೆದ ಪರಿಣಾಮ ನಲಸೊಪರ ಎಂಬ ಕುಟುಂಬದ ಮೂವರು ಮೃತಪಟ್ಟಿದ್ದರು. ಇದಕ್ಕೂ ಮೊದಲು ಕಳೆದ ವರ್ಷ ಸೆಪ್ಟೆಂಬರ್ 4 ರಂದು ಇದೇ ಸ್ಥಳದಲ್ಲಿ ನಡೆದ ಕಾರು ಅಪಘಾತದಲ್ಲಿ ಟಾಟಾ ಸನ್ಸ್ ಸಂಸ್ಥೆಯ ಚೇರ್‌ಮ್ಯಾನ್, ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು.
ಒಂದೇ ವರ್ಷದಲ್ಲಿ 26 ಸಾವು
ಮಿಸ್ತ್ರಿ ಅಪಘಾತವಾದ ಸ್ಥಳ ಸೇರಿದಂತೆ 100 ಕಿ.ಮಿ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ 60 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಮಿಸ್ತ್ರಿ ಅಪಘಾತವಾದ ಸ್ಥಳದಲ್ಲೇ 25 ಗಂಭೀರ ಅಪಘಾತ ಸಂಭವಿಸಿ 26 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈ ಅಹಹಮ್ಮದಾಬಾದ್(mumbai ahmedabad highway) ಹೆದ್ದಾರಿಯ ಥಾಣೆಯ ಘೋದ್‌ಬಂದರ್ ಹಾಗೂ ಪಾಲ್ಗರ್‌ನ ದಪ್ಚಾರಿ ವಲಯದಲ್ಲಿ ಕಳೆದ ಒಂದು ವರ್ಷದಲ್ಲಿ 262 ಅಪಘಾತಗಳು ಸಂಭವಿಸಿದೆ. ಈ ಎಲ್ಲಾ ಅಪಘಾತಗಳು ಸೈರಸ್ ಮಿಸ್ತ್ರಿ ಅಪಘಾತ ನಡೆದ 100 ಕಿ.ಮೀ ವ್ಯಾಪ್ತಿಯಲ್ಲಿ ನಡೆದಿದೆ. ಈ ಅಪಘಾತದಲ್ಲಿ 62 ಮಂದಿ ಮೃತಪಟ್ಟಿದ್ದರೆ, 192 ಮಂದಿ ಗಾಯಗೊಂಡಿದ್ದಾರೆ.
ಸೈರಸ್ ಮಿಸ್ತ್ರಿ ಕಾರು ಅಪಘಾತದ ಸ್ಥಳದಲ್ಲೇ ಮತ್ತೊಂದು ಭೀಕರ ಆಕ್ಸಿಡೆಂಟ್: ನಾಲ್ವರು ಸಾವು