ಸೈರಸ್ ಮಿಸ್ತ್ರಿ ಕಾರು ಅಪಘಾತದ ಸ್ಥಳದಲ್ಲೇ ಮತ್ತೊಂದು ಭೀಕರ ಆಕ್ಸಿಡೆಂಟ್: ನಾಲ್ವರು ಸಾವು
ಟಾಟಾ ಸನ್ಸ್ ಸಂಸ್ಥೆಯ ಚೇರ್‌ಮ್ಯಾನ್, ಉದ್ಯಮಿ ಸೈರಸ್ ಮಿಸ್ತ್ರಿ ಅವರ ಕಾರು ಅಪಘಾತಕ್ಕೀಡಾಗಿ ಮಿಸ್ತ್ರಿ ಸಾವಿಗೀಡಾದ ಸ್ಥಳದಲ್ಲಿಯೇ ಈಗ ಮತ್ತೊಂದು ಭೀಕರ ಅಪಘಾತವಾಗಿದ್ದು, ಈ ದುರಂತದಲ್ಲಿ ನಾಲ್ವರು ಬಲಿಯಾಗಿದ್ದಾರೆ.
ಮುಂಬೈ: ಟಾಟಾ ಸನ್ಸ್ ಸಂಸ್ಥೆಯ ಚೇರ್‌ಮ್ಯಾನ್, ಉದ್ಯಮಿ ಸೈರಸ್ ಮಿಸ್ತ್ರಿ ಅವರ ಕಾರು ಅಪಘಾತಕ್ಕೀಡಾಗಿ ಮಿಸ್ತ್ರಿ ಸಾವಿಗೀಡಾದ ಸ್ಥಳದಲ್ಲಿಯೇ ಈಗ ಮತ್ತೊಂದು ಭೀಕರ ಅಪಘಾತವಾಗಿದ್ದು, ಈ ದುರಂತದಲ್ಲಿ ನಾಲ್ವರು ಬಲಿಯಾಗಿದ್ದಾರೆ. ಕಾರೊಂದು ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಪಾಲ್‌ಗಾರ್ ಜಿಲ್ಲೆಯ ದಹನು ಪ್ರದೇಶದ ಛರೋಟಿ ಎಂಬಲ್ಲಿ ಬರುವ ಮುಂಬೈ ಅಹ್ಮದಾಬಾದ್ ಹೈವೇಯಲ್ಲಿ ಈ ಅವಘಡ ಸಂಭವಿಸಿದೆ.
ಮುಂಜಾನೆ 3.30ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಕಾರು ಗುಜರಾತ್‌ನತ್ತ ಹೊರಟಿತ್ತು. ಕಾರು ಹೆದ್ದಾರಿಗೆ ತಲುಪಿ ಛರೋಟಿ ಬಳಿಯ ಮಹಾಲಕ್ಷ್ಮಿ ದೇಗುಲದ ಸಮೀಪ ಬಂದಾಗ ಕಾರು ಚಾಲಕ ಲೇನ್ ಬದಲಾಯಿಸಿದಾಗ ಕಾರು ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸೇರಿದಂತೆ ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೀಟ್‌ಬೆಲ್ಟ್ ಅಲಾರಂ ನಿಷ್ಕ್ರಿಯಗೊಳಿಸುವ ಸಾಧನಗಳ ಮಾರಾಟ ನಿಲ್ಲಿಸಲು Amazonಗೆ ಕೇಂದ್ರ ಸರ್ಕಾರ ಸೂಚನೆ
ಈ ವರ್ಷದಲ್ಲಿ ಇಲ್ಲಿ ನಡೆದ ಎರಡನೇ ಅಪಘಾತ ಇದಾಗಿದೆ. ಜನವರಿ 8 ರಂದು ಕೂಡ ಇದೇ ಸ್ಥಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಮಹಾಲಕ್ಷ್ಮಿ ದೇಗುಲದ ಬಳಿಯೇ ಕಂಟೈನರ್ ಟ್ರಕ್‌ಗೆ ಇವರ ಕಾರು ಡಿಕ್ಕಿ ಹೊಡೆದ ಪರಿಣಾಮ ನಲಸೊಪರ ಎಂಬ ಕುಟುಂಬ ಮೂವರು ಮೃತಪಟ್ಟಿದ್ದರು. ಇದಕ್ಕೂ ಮೊದಲು ಕಳೆದ ವರ್ಷ ಸೆಪ್ಟೆಂಬರ್ 4 ರಂದು ಇದೇ ಸ್ಥಳದಲ್ಲಿ ನಡೆದ ಕಾರು ಅಪಘಾತದಲ್ಲಿ ಟಾಟಾ ಸನ್ಸ್ ಸಂಸ್ಥೆಯ ಚೇರ್‌ಮ್ಯಾನ್, ಉದ್ಯಮಿ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು.
Cyrus Mistry ಅಪಘಾತಕ್ಕೆ ಕಾರು ಪಥ ಬದಲಿಸಲು ವಿಫಲವೇ ಕಾರಣ..!
ಈ ಸ್ಥಳದಲ್ಲಿ ಒಂದೇ ವರ್ಷದಲ್ಲಿ 26 ಸಾವು
ಟಾಟಾ ಸನ್ಸ್ ಮಾಜಿ ಚೇರ್ಮೆನ್ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ನಿಧನರಾದ ವಿಚಾರ ದೇಶದಲ್ಲಿನ ರಸ್ತೆ ಸುರಕ್ಷತೆ ಕುರಿತು ಹೊಸ ಚರ್ಚೆ ಹುಟ್ಟು ಹಾಕಿತ್ತು. ಸೀಟ್ ಬೆಲ್ಟ್, ವೇಗ, ರಸ್ತೆ ನಿಯಮ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಲೇ ಇದೆ. ಇದೀಗ ಸರ್ಕಾರದ ಅಧಿಕೃತ ದಾಖಲೆಯೊಂದು ಬಿಡುಗಡೆಯಾಗಿದೆ. ಈ ದಾಖಲೆ ಪ್ರಕಾರ ಸೈರಸ್ ಮಿಸ್ತ್ರಿ ಕಾರು ಅಪಘಾತವಾದ ಈ ಸ್ಥಳದಲ್ಲೇ ಹಾಗೂ ಈ ರಸ್ತೆಯಲ್ಲಿ ಒಂದು ವರ್ಷದಲ್ಲಿ 26 ಮಂದಿ ನಿಧನರಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಿಸ್ತ್ರಿ ಅಪಘಾತವಾದ ಸ್ಥಳ ಸೇರಿದಂತೆ 100 ಕಿ.ಮಿ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ 60 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಮಿಸ್ತ್ರಿ ಅಪಘಾತವಾದ ಸ್ಥಳದಲ್ಲೇ 25 ಗಂಭೀರ ಅಪಘಾತ ಸಂಭವಿಸಿ 26 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈ ಅಹಹಮ್ಮದಾಬಾದ್(mumbai ahmedabad highway) ಹೆದ್ದಾರಿಯ ಥಾಣೆಯ ಘೋದ್‌ಬಂದರ್ ಹಾಗೂ ಪಾಲ್ಗರ್‌ನ ದಪ್ಚಾರಿ ವಲಯದಲ್ಲಿ ಕಳೆದ ಒಂದು ವರ್ಷದಲ್ಲಿ 262 ಅಪಘಾತಗಳು ಸಂಭವಿಸಿದೆ. ಈ ಎಲ್ಲಾ ಅಪಘಾತಗಳು ಸೈರಸ್ ಮಿಸ್ತ್ರಿ ಅಪಘಾತ ನಡೆದ 100 ಕಿ.ಮೀ ವ್ಯಾಪ್ತಿಯಲ್ಲಿ ನಡಿದೆ. ಈ ಅಪಘಾತದಲ್ಲಿ 62 ಮಂದಿ ಮೃತಪಟ್ಟಿದ್ದರೆ, 192 ಮಂದಿ ಗಾಯಗೊಂಡಿದ್ದಾರೆ.
ಮಿಸ್ತ್ರಿ ಅವಘಾತವಾದ ಸ್ಥಳದಲ್ಲೇ 26 ಮಂದಿ ಮೃತಪಟ್ಟಿದ್ದಾರೆ. ಅತೀ ಹೆಚ್ಚಿನ ಅಪಘಾತಗಳು ಮುಂಬೈ ಅಹಹಮ್ಮದಾಬಾದ್ ಹೆದ್ದಾರಿಯಲ್ಲಿ ನಡೆಯುತ್ತಿದೆ. ಈ ಹೆದ್ದಾರಿ ಅವೈಜ್ಞಾನಿಕವಾಗಿದೆ ಅಷ್ಟೇ ಅಲ್ಲ ನಿರ್ವಹಣೆ ಕೂಡ ಸೂಕ್ತವಾಗಿಲ್ಲ. ಸೂಚನಾ ಫಲಕಗಳಿಲ್ಲ. ಸ್ಪೀಡ್ ಕಂಟ್ರೋಲ್‌ಗಳಿಲ್ಲ. ಅಲರ್ಟ್ ಹಂಪ್ಸ್‌ಗಳಿಲ್ಲ. ಹೆದ್ದಾರಿಯಲ್ಲಿ ಇರಬೇಕಾದ ಯಾವದೇ ಸಿಗ್ನಲ್, ಸೂಚನಾ ಫಲಕಗಳು ಸೇರಿದಂತೆ ಕನಿಷ್ಠ ನಿರ್ವಹಣೆ ಈ ಹೆದ್ದಾರಿಯಲ್ಲಿ ಇಲ್ಲ. ಇದರಿಂದ ಅಪಾಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.