Asianet Suvarna News Asianet Suvarna News

ಸೈರಸ್ ಮಿಸ್ತ್ರಿ ಅಪಘಾತ ಸ್ಥಳದಲ್ಲಿ ಒಂದೇ ವರ್ಷದಲ್ಲಿ 26 ಸಾವು, ಬಿಚ್ಚಿ ಬೀಳಿಸುತ್ತಿದೆ ಸರ್ಕಾರಿ ದಾಖಲೆ!

ಟಾಟಾ ಸನ್ಸ್ ಮಾಜಿ ಚೇರ್ಮೆನ್ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ನಿಧನ ದೇಶದಲ್ಲಿನ ರಸ್ತೆ ಸುರಕ್ಷತೆ ಕುರಿತು ಹೊಸ ಚರ್ಚೆ ಹುಟ್ಟು ಹಾಕಿದೆ.  ಸೀಟ್ ಬೆಲ್ಟ್, ವೇಗ, ರಸ್ತೆ ನಿಯಮ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಲೇ ಇದೆ. ಇದೀಗ ಸರ್ಕಾರದ ಅಧಿಕೃತ ದಾಖಲೆಯೊಂದು ಬಿಡುಗಡೆಯಾಗಿದೆ. ಈ ದಾಖಲೆ ಪ್ರಕಾರ ಸೈರಸ್ ಮಿಸ್ತ್ರಿ ಅಪಾಘಾತವ ಸ್ಥಳದಲ್ಲೇ ಹಾಗೂ ರಸ್ತೆಯಲ್ಲಿ ಒಂದು ವರ್ಷದಲ್ಲಿ 62 ಮಂದಿ ನಿಧನರಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Cyrus mistry Death 26 deaths in 25 serious accidents in this year same spot where tata sons former chairmen died ckm
Author
First Published Sep 18, 2022, 9:04 PM IST

ಮುಂಬೈ(ಸೆ.18):  ಉದ್ಯಮಿ, ಟಾಟಾ ಮಾಜಿ ಸನ್ಸ್ ಚೇರ್ಮೆನ್ ಸೈರಸ್ ಮಿಸ್ತ್ರಿ ಕಾರು ಅಪಘಾತ ಭಾರತವನ್ನೇ ಬೆಚ್ಚಿ ಬೀಳಿಸಿತ್ತು. ಕಾರಣ ಸುರಕ್ಷತೆಯಲ್ಲಿ 5 ಸ್ಟಾರ್ ಪಡೆದ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೂ ಮಿಸ್ತ್ರಿ ಬದುಕುಳಿಯಲ್ಲ. ಸೀಟ್ ಬೆಲ್ಟ್ ಧರಿಸದ ಕಾರಣ ಈ ಸಾವು ಸಂಭವಿಸಿದೆ. ಹೀಗಾಗಿ ಸೀಟ್ ಬೆಲ್ಟ್ ಸೇರಿದಂತೆ ರಸ್ತೆ ಸುರಕ್ಷತಾ ನಿಯಮ ಪಾಲನೆ ಅತ್ಯಗತ್ಯ ಅನ್ನೋ ಚರ್ಚೆಗಳು ಗಂಭೀರ ಸ್ವರೂಪ ಪಡೆದುಕೊಂಡಿತು. ಇದೀಗ ಸರ್ಕಾರಿ ಅಧಿಕೃತ ದಾಖಲೆಯೊಂದು ಬಿಡುಗಡೆಯಾಗಿದೆ. ಈ ದಾಖಲೆ ಪ್ರಕಾರ ಸೈರಸ್ ಮಿಸ್ತ್ರಿ ಸಂಚರಿಸಿದ ಮುಂಬೈ-ಅಹಮ್ಮದಾಬಾದ್ ಹೆದ್ದಾರಿಯ 100 ಕಿಲೋಮೀಟರ್ ರಸ್ತೆ ಅತ್ಯಂತ ಅಪಾಯಕಾರಿ ಹಾಗೂ ಅವೈಜ್ಞಾನಿಕ ಅನ್ನೋ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಕಾರಣ ಮಿಸ್ತ್ರಿ ಅಪಘಾತವಾದ ಸ್ಥಳ ಸೇರಿದಂತೆ 100 ಕಿ.ಮಿ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ 60 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಮಿಸ್ತ್ರಿ ಅಪಘಾತವಾದ ಸ್ಥಳದಲ್ಲೇ 25 ಗಂಭೀರ ಅಪಘಾತತ ಸಂಭವಿಸಿ 26 ಮಂದಿ ಸಾವನ್ನಪ್ಪಿದ್ದಾರೆ.  

ಮುಂಬೈ ಅಹಹಮ್ಮದಾಬಾದ್(mumbai ahmedabad highway) ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಸೈರಸ್ ಮಿಸ್ತ್ರಿ(cyrus mistry) ಕಾರು ಅಪಘಾತಕ್ಕೀಡಾಗಿ(Car Accident) ಮೃತಪಟ್ಟಿದ್ದಾರೆ. ಇದೇ ಹೆದ್ದಾರಿಯ  ಥಾಣೆಯ ಘೋದ್‌ಬಂದರ್ ಹಾಗೂ ಪಾಲ್ಗರ್‌ನ ದಪ್ಚಾರಿ ವಲಯದಲ್ಲಿ ಕಳೆದ ಒಂದು ವರ್ಷದಲ್ಲಿ 262 ಅಪಘಾತಗಳು ಸಂಭವಿಸಿದೆ. ಈ ಎಲ್ಲಾ ಅಪಘಾತಗಳು ಸೈರಸ್ ಮಿಸ್ತ್ರಿ ಅಪಘಾತ ನಡೆದ 100 ಕಿ.ಮೀ ವ್ಯಾಪ್ತಿಯಲ್ಲಿ ನಡಿದೆ. ಈ ಅಪಘಾತದಲ್ಲಿ 62 ಮಂದಿ ಮೃತಪಟ್ಟಿದ್ದರೆ, 192 ಮಂದಿ ಗಾಯಗೊಂಡಿದ್ದಾರೆ. 

ಮಿಸ್ತ್ರಿ ಬಲಿಪಡೆದ ಕಾರಿನದ್ದು ಡೇಂಜರ್‌ ಇತಿಹಾಸ: ಯಾವ ದೇಶದಲ್ಲಿ ಹೇಗಿದೆ ಸೀಟ್‌ ಬೆಲ್ಟ್‌ ನಿಯಮ?

ಮಿಸ್ತ್ರಿ ಅವಘಾತವಾದ ಸ್ಥಳದಲ್ಲೇ 26 ಮಂದಿ ಮೃತಪಟ್ಟಿದ್ದಾರೆ.  ಅತೀ ಹೆಚ್ಚಿನ ಅಪಘಾತಗಳು ಮುಂಬೈ ಅಹಹಮ್ಮದಾಬಾದ್ ಹೆದ್ದಾರಿಯಲ್ಲಿ ನಡೆಯುತ್ತಿದೆ. ಈ ಹೆದ್ದಾರಿ ಅವೈಜ್ಞಾನಿಕವಾಗಿದೆ ಅಷ್ಟೇ ಅಲ್ಲ ನಿರ್ವಹಣೆ ಕೂಡ ಸೂಕ್ತವಾಗಿಲ್ಲ. ಸೂಚನಾ ಫಲಕಗಳಿಲ್ಲ. ಸ್ಪೀಡ್ ಕಂಟ್ರೋಲ್‌ಗಳಿಲ್ಲ. ಅಲರ್ಟ್ ಹಂಪ್ಸ್‌ಗಳಿಲ್ಲ. ಹೆದ್ದಾರಿಯಲ್ಲಿ ಇರಬೇಕಾದ ಯಾವದೇ ಸಿಗ್ನಲ್, ಸೂಚನಾ ಫಲಕಗಳು ಸೇರಿದಂತೆ ಕನಿಷ್ಠ ನಿರ್ವಹಣೆ ಈ ಹೆದ್ದಾರಿಯಲ್ಲಿ ಇಲ್ಲ. ಇದರಿಂದ ಅಪಾಘಾತಗಳ ಸಂಖ್ಯೆ ಹೆಚ್ಚಾಗಿದೆ. 

ಮಿಸ್ತ್ರಿ ಅಪಘಾತವಾದ ಸ್ಥಳಕ್ಕೆ ತನಿಖಾ ತಂಡ ಭೇಟಿ ನೀಡಿ ಅಧ್ಯಯನ ನಡೆಸಿದೆ. ಈ ವೇಳೆ ಅವೈಜ್ಞಾನಿಕ ಸೇತುವೆ ನಿರ್ಮಾಣ ಮಾಡಲಾಗಿದೆ ಅನ್ನೋ ವರದಿ ನೀಡಿದೆ. ಸೈರಸ್ ಮಿಸ್ತ್ರಿ ನಿಧನದ ಹಿಂದೆ ರಸ್ತೆಯೂ ಕಾರಣವಾಗಿದೆ. ಚರೋಟಿ ಅನ್ನೋ ಜಾಗ ಅಪಘಾತಗಳ ತವರೂರಾಗಿದೆ. ಚರೋಟಿಯಲ್ಲಿ ಸೈರಸ್ ಮಿಸ್ತ್ರಿ ಕಾರು ಅಪಘಾಕ್ಕೀಡಾಗಿದೆ. ಇದೇ ಜಾಗದಲ್ಲಿ ಕಳೆದ ಒಂದು ವರ್ಷದಲ್ಲಿ 26 ಸಾವುಗಳು ಸಂಭವಿಸಿದೆ.

ಹೆದ್ದಾರಿ ಸುರಕ್ಷತೆಗೆ ಕೇಂದ್ರ ಬದ್ಧ, ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯ: ಶೀಘ್ರದಲ್ಲೇ ಕಾನೂನು: ನಿತಿನ್‌ ಗಡ್ಕರಿ

ರಸ್ತೆಯ ಜೊತೆಗೆ ರಸ್ತೆ ಸಂಚಾರ ನಿಮಯ ಪಾಲನೆ ಕೂಡ ಅತೀ ಅಗತ್ಯ. ಪ್ರಯಾಣ ಮಾಡುವ ಮುನ್ನ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಇದರ ಜೊತೆಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸಿ.

Follow Us:
Download App:
  • android
  • ios