ದೆಹಲಿಯ ತಿಹಾರ್ ಜೈಲಿನಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್: ವಿಡಿಯೋ ವೈರಲ್..!

ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲು ಸಂಖ್ಯೆ 7 ರೊಳಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು, ವೈರಲ್‌ ಆಗುತ್ತಿವೆ. 

aaps satyendar jain gets massage inside tihar jail watch video ash

ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendra Jain) ಅವರು ತಿಹಾರ್‌ ಜೈಲಿನಲ್ಲಿ(Tihar Jail) ವಿವಿಐಪಿ ಸೌಲಭ್ಯಗಳನ್ನು (VVIP Treatment) ಪಡೆಯುತ್ತಿದ್ದಾರೆ, ಮಸಾಜ್‌ (Massage) ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ (BJP) ಕೆಲ ದಿನಗಳ ಹಿಂದೆ ಆರೋಪಿಸಿತ್ತು. ಅಲ್ಲದೆ, ಎಎಪಿ ನಾಯಕನಿಗೆ (AAP Leader) ವಿಶೇಷ ಸೌಲಭ್ಯಗಳನ್ನು ನೀಡಲು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಜೈಲು ಸೂಪರಿಂಟೆಂಡೆಂಟ್ (Jail Superintendent) ಅಜಿತ್ ಕುಮಾರ್ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಈಗ, ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲು (Tihar Jail) ಸಂಖ್ಯೆ 7 ರೊಳಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಿಸಿ ಕ್ಯಾಮೆರಾ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಬಿಡುಗಡೆಯಾಗಿದ್ದು, ವೈರಲ್‌ (Video Viral) ಆಗುತ್ತಿವೆ. 

6 ನಿಮಿಷಗಳ ಅವಧಿಯ ವಿಡಿಯೋ ಕ್ಲಿಪ್ ಅನ್ನು ಬಿಡುಗಡೆ ಮಾಡಲಾಗಿದ್ದು, ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಬೇರೆ ಬೇರೆ ದಿನಗಳಲ್ಲಿ ಕಾಲು, ಬೆನ್ನು ಮತ್ತು ತಲೆಗೆ ಮಸಾಜ್ ಮಾಡಿಸಿಕೊಳ್ಳುವುದನ್ನು ಈ ವಿಡಿಯೋ ತೋರಿಸುತ್ತದೆ. ಸೆಪ್ಟೆಂಬರ್ 21 ರ ಕ್ಲಿಪ್‌ವೊಂದರಲ್ಲಿ ಸತ್ಯೇಂದ್ರ ಜೈನ್ ಅವರ ಸೆಲ್‌ನೊಳಗೆ 4 ಜನರು ಇದ್ದು, ಈ ವೇಳೆ ದೆಹಲಿಯ ಆರೋಗ್ಯ ಸಚಿವರು ಒಬ್ಬ ವ್ಯಕ್ತಿಯಿಂದ ಕಾಲಿಗೆ ಮಸಾಜ್‌ ಮಾಡಿಸಿಕೊಳ್ಳುವುದನ್ನು ಕಾಣಬಹುದು.

ಇದನ್ನು ಓದಿ: ಜೈಲಿನಲ್ಲಿ ಸುರಕ್ಷಿತವಾಗಿರಲು AAP ನಾಯಕ ಸತ್ಯೇಂದ್ರ ಜೈನ್‌ಗೆ 10 ಕೋಟಿ ನೀಡಿದ್ದೆ: ಸುಖೇಶ್‌ ಚಂದ್ರಶೇಖರ್‌

ತಿಹಾರ್ ಜೈಲು ದೆಹಲಿ ಸರ್ಕಾರದ ಅಡಿಯಲ್ಲಿದ್ದು,  ದೆಹಲಿ ಕಾರಾಗೃಹಗಳ ಇಲಾಖೆ ಇದರ ಉಸ್ತುವಾರಿ ಹೊತ್ತುಕೊಂಡಿದೆ. ಇನ್ನು, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ಎಎಪಿ ಸರ್ಕಾರ ಜೈಲಿನಲ್ಲಿ ನಿಯಮಗಳ ಉಲ್ಲಂಘನೆ ನಡೆಸುತ್ತಿರುವುದಕ್ಕೆ ಈ ವಿಡಿಯೋ ಪುರಾವೆಯಾಗಿದೆ ಎಂದು ಆರೋಪಿಸಿದ್ದಾರೆ. 

“ಸತ್ಯೇಂದ್ರ ಜೈನ್ ಪೂರ್ಣ ವಿವಿಐಪಿ ಮಜಾ ಪಡೆಯುತ್ತಿದ್ದಾರಾ ? ತಿಹಾರ್ ಜೈಲಿನೊಳಗೆ ಮಸಾಜ್? 5 ತಿಂಗಳಿನಿಂದ ಜಾಮೀನು ಪಡೆಯದ ಹವಾಲಾಬಾಜ್ ತಲೆ ಮಸಾಜ್ ಮಾಡಿಸಿಕೊಳ್ಳುತ್ತಾರೆ!ಎಎಪಿ ಸರ್ಕಾರ ಜೈಲಿನಲ್ಲಿ ನಡೆಸುತ್ತಿರುವ ನಿಯಮಗಳ ಉಲ್ಲಂಘನೆ” ಎಂದು ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ. "ಕೇಜ್ರಿವಾಲ್‌ ಅವರಿಂದ ವಸೂಲಿ ಮತ್ತು ಮಸಾಜ್‌ಗಾಗಿ ಅಧಿಕೃತ ಸ್ಥಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ’’ ಎಂದೂ ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ Delhi ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್‌: ಲಕ್ಷುರಿ ಜೀವನ ನಡೆಸುತ್ತಿರುವ ಬಗ್ಗೆ ED ಆರೋಪ

ಇನ್ನು, ಈ ವಿಡಿಯೋಗೆ ಎಎಪಿಯ ವಕ್ತಾರ ಅಕ್ಷಯ್ ಮರಾಠೆ ಪ್ರತಿಕ್ರಿಯೆ ನೀಡಿದ್ದು, ಪ್ರತಿಯೊಬ್ಬ ಜೈಲು ಕೈದಿಯು "ಗೌಪ್ಯತೆ ಮತ್ತು ಘನತೆಗೆ ಅರ್ಹರು" ಮತ್ತು "ರಾಜಕೀಯ ಲಾಭಕ್ಕೋಸ್ಕರ ವಿಡಿಯೋಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ’’ ಎಂದು ಟ್ವೀಟ್‌ ಮಾಡಿದ್ದಾರೆ. 

ಅಲ್ಲದೆ, ಅಪರಾಧಿ ಎಂದು ಸಾಬೀತಾಗದ 58 ವರ್ಷದ ಸತ್ಯೇಂದ್ರ ಜೈನ್‌ಗೆ ಬಿಜೆಪಿ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಅಸಹ್ಯಕರವಾಗಿದೆ. ತುಂಬಾ ಕಹಿ ರುಚಿಯಾಗಿದೆ. ಎಲ್ಲಾ ರಾಜಕೀಯವನ್ನು ಬದಿಗಿಟ್ಟು, ಪ್ರತಿಯೊಬ್ಬ ಜೈಲು ಕೈದಿಯೂ ಖಾಸಗಿತನ ಮತ್ತು ಘನತೆಗೆ ಅರ್ಹರು. ರಾಜಕೀಯ ಲಾಭ ಗಳಿಸಲು  ಜೈಲಿನೊಳಗಿಂದ ವಿಡಿಯೋಗಳನ್ನು  ಬಿಡುಗಡೆ ಮಾಡುವುದು ಕರುಣೆಯೇ ಇಲ್ಲದ ನಸ್ಥಿತಿ ”ಎಂದೂ ಆಪ್‌ ವಕ್ತಾರ ಅಕ್ಷಯ್‌ ಮರಾಠೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ED raids ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ, 1.8 ಕೆಜಿ ಚಿನ್ನ, ಕೋಟಿ ರೂ ನಗದು ಜಪ್ತಿ!

ಜಾರಿ ನಿರ್ದೇಶನಾಲಯ (ಇಡಿ) ಈ ವರ್ಷದ ಮೇ ತಿಂಗಳಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತ್ತು. ಸತ್ಯೇಂದ್ರ ಜೈನ್ ವಿರುದ್ಧ ಸಿಬಿಐ 2017 ರ ಪ್ರಕರಣವನ್ನು ಆಧರಿಸಿ, ಇಡಿ ಸಚಿವರನ್ನು ಜೈಲಿನಲ್ಲಿರಿಸಿದೆ. ಇದರಲ್ಲಿ ಎಎಪಿ ನಾಯಕಿ ಮತ್ತು ಪತ್ನಿ ಪೂನಂ ಜೈನ್ ಫೆಬ್ರವರಿ 2015 ಮತ್ತು ಮೇ 2017 ರ ನಡುವೆ ₹ 1.47 ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಅವರು ಘೋಷಿಸಿರುವ ಆದಾಯದ ಮೂಲಗಳಿಗಿಂತ ಶೇ. 217.20 ರಷ್ಟು ಹೆಚ್ಚು ಎಂದು ತಿಳಿದುಬಂದಿದೆ.

ಆದರೆ, ಸತ್ಯೇಂದ್ರ ಜೈನ್ ಬಂಧನ ರಾಜಕೀಯ ಸೇಡಿನ ಪ್ರಕರಣ ಎಂದು ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: Delhi Minister Arrest ಹವಾಲ ಪ್ರಕರಣ, ದೆಹಲಿ ಸಚಿವ, ಕೇಜ್ರಿವಾಲ್ ಆಪ್ತ ಸತ್ಯೇಂದ್ರ ಜೈನ್ ಬಂಧನ!

Latest Videos
Follow Us:
Download App:
  • android
  • ios