Asianet Suvarna News Asianet Suvarna News

ED raids ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ, 1.8 ಕೆಜಿ ಚಿನ್ನ, ಕೋಟಿ ರೂ ನಗದು ಜಪ್ತಿ!

  • ಸತ್ಯೇಂದ್ರ ಜೈನ್ ಹಾಗೂ ಪತ್ನಿ ನಿವಾಸದ ಮೇಲೆ ಇಡಿ ದಾಳಿ
  • ದಾಳಿಯಲ್ಲಿ ಕೋಟಿ ಕೋಟಿ ರೂಪಾಯಿ ನಗದು ವಶಕ್ಕೆ
  • ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಬಂಧನದಲ್ಲಿರುವ ಸಚಿವ
     
Money laundering ED raids Delhi minister Satyendar Jain Crores in cash and gold coins two kilograms seized ckm
Author
Bengaluru, First Published Jun 7, 2022, 7:50 PM IST

ನವದೆಹಲಿ(ಜೂ.07): ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಅಕ್ರಣ ಹಣ ವರ್ಗಾವಣೆ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಸಚಿವ ಸತ್ಯೇಂದ್ರ ಜೈನ್ ನಿವಾಸದಲ್ಲಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 1.8 ಕೆಜಿ ಚಿನ್ನ ಹಾಗೂ 2.82 ರೂಪಾಯಿ ನಗದು ಜಪ್ತಿ ಮಾಡಲಾಗಿದೆ.

ಬರೋಬ್ಬರಿ 16 ಕೋಟಿ ರೂಪಾಯಿ ಹವಾಲಾ ಹಣ ವರ್ಗಾವಣೆ ಆರೋಪವಿದೆ. ಈ ಅಕ್ರಮ ಹಣ ವರ್ಗಾವಣೆಗೆ ಸಚಿವ ಸತ್ಯೇಂದ್ರ ಜನ್ ಪತ್ನಿ, ಮಕ್ಕಳು ಹಾಗೂ ಕೆಲ ಆಪ್ತರ ನೆರವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಸತ್ಯೇಂದ್ರ ಜನ್ ಕುಟುಂಬಸ್ಥರ ಮೇಲೂ ಪ್ರಕರಣ ದಾಖಲಾಗಿದೆ. ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿದಂತೆ ಇತರ ಪ್ರದೇಶಗಳಲ್ಲಿರುವ ಜೈನ್‌ ಅವರ ನಿವಾಸಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ. ಜೈನ್‌ ಅವರ ವಿಚಾರಣೆಯ ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹವಾಲ ಪ್ರಕರಣ, ದೆಹಲಿ ಸಚಿವ, ಕೇಜ್ರಿವಾಲ್ ಆಪ್ತ ಸತ್ಯೇಂದ್ರ ಜೈನ್ ಬಂಧನ!

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಜೈನ್‌ ಅವರನ್ನು ಇ.ಡಿ. ಬಂಧಿಸಿತ್ತು. ಆದರೆ ಇದೊಂದು ಸುಳ್ಳು ಪ್ರಕರಣ ಎಂದು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್‌ ನಾಯಕರು ಹೇಳಿದ್ದರು.ಆದರೆ ನಗದು ಹಣ ಪತ್ತೆಯಿಂದ ಇದೀಗ ಆಪ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ಬಂಧಿಸಲ್ಪಟ್ಟಿರುವ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ಜೂ.9ರವರೆಗೆ ದೆಹಲಿ ಕೋರ್ಚ್‌ ಇ.ಡಿ.ವಶಕ್ಕೆ ನೀಡಿದೆ.ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯಲ್‌ ಈ ಆದೇಶವನ್ನು ನೀಡಿದ್ದು, ಇದು ಭಾರಿ ಹಗರಣವಾದ ಕಾರಣ ಕಸ್ಟಡಿಯಲ್‌ ವಿಚಾರಣೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

2015-16ರಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದಾಗ ಜೈನ್‌ ಅವರು 4.81 ಕೋಟಿ ರು. ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಅವರನ್ನು ವಿಚಾರಣೆ ನಡೆಸಿದ್ದರು. ಇದಕ್ಕೆ ಸರಿಯಾದ ಉತ್ತರ ನೀಡಲು ಅವರು ವಿಫಲರಾಗಿದ್ದಾರೆ ಎಂದು ಹೇಳಿ ಅವರನ್ನು ಬಂಧಿಸಲಾಗಿತ್ತು.

ನಿಮಗೆಲ್ಲಾ ಸ್ವಾಗತ ಅಂತಾ ED ಅಧಿಕಾರಿಗಳಿಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇಕೆ?

ರಾಜಕೀಯ ಪಿತೂರಿ: ಆಪ್‌
‘ಸತ್ಯೇಂದ್ರ ಜೈನ್‌ ಅವರ ಮೇಲಿನ ಆರೋಪ ಸಂಪೂರ್ಣ ಸುಳ್ಳು, ಇದೊಂದು ರಾಜಕೀಯ ಪ್ರೇರಿತ ಪಿತೂರಿ. ನಾನೇ ದಾಖಲೆ ಪರಿಶೀಲಿಸಿದ್ದೇನೆ. ಅಕ್ರಮ ಕಂಡುಬಂದಿಲ್ಲ’ ಎಂದು ಆಪ್‌ನ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ‘ನಮ್ಮ ಪಕ್ಷ ಮತ್ತು ಸರ್ಕಾರ ಪ್ರಮಾಣಿಕವಾಗಿದೆ. ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಜೈನ್‌ ಅವರು ಆರೋಪಮುಕ್ತರಾಗಿ ಬಿಡುಗಡೆಯಾಗಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಕೇಜ್ರಿವಾಲ್‌ ರಾಜೀನಾಮೆಗೆ ಬಿಜೆಪಿ ಪಟ್ಟು:
ಸತ್ಯೇಂದ್ರ ಜೈನ್‌ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಜೈನ್‌ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಜೈನ್‌ ಬಂಧನ ಮುಂದಿನ ಹಿಮಾಚಲ ಪ್ರದೇಶ ಚುನಾವಣೆಯೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಹೇಳಿದ್ದಾರೆ

Follow Us:
Download App:
  • android
  • ios