Asianet Suvarna News Asianet Suvarna News

ಜೈಲಿನಲ್ಲಿ Delhi ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್‌: ಲಕ್ಷುರಿ ಜೀವನ ನಡೆಸುತ್ತಿರುವ ಬಗ್ಗೆ ED ಆರೋಪ

ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ತನ್ನ ಪತಿಯನ್ನು ಜೈಲಿನ ಸೆಲ್‌ನಲ್ಲೇ ಭೇಟಿಯಾಗುತ್ತಾರೆ. ಇದು ಸಹ ಜೈಲು ಕೈಪಿಡಿಗೆ ವಿರುದ್ಧವಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಇನ್ನು, ಸತ್ಯೇಂದ್ರ ಜೈನ್‌ ಆಗಾಗ್ಗೆ ತಿಹಾರ್‌ ಜೈಲಿನಲ್ಲೇ ಬಂಧಿಸಲಾಗಿರುವ ಅಂಕುಶ್ ಜೈನ್ ಮತ್ತು ವೈಭವ್ ಜೈನ್ ಅವರನ್ನು ಭೇಟಿಯಾಗುತ್ತಾರೆ ಎಂದೂ ಇಡಿ ಹೇಳಿದೆ. 

delhi minister getting massage in jail meeting co accused probe agency ash
Author
First Published Oct 30, 2022, 7:34 PM IST

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering Case) ಈ ವರ್ಷ ಮೇ ತಿಂಗಳಲ್ಲಿ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ನಾಯಕ (Aam Aadmi Party Leader) ಮತ್ತು ದೆಹಲಿ ಸಚಿವ ಸತ್ಯೇಂದ್ರ ಜೈನ್ (Delhi MInister Satyendar Jain) ತಿಹಾರ್‌ ಜೈಲಿನಲ್ಲಿ (Tihar Jail) ಐಷಾರಾಮಿ ಜೀವನ (Luxury Life)  ನಡೆಸುತ್ತಿದ್ದಾರೆ ಮತ್ತು ಪ್ರಕರಣದ ಸಹ-ಆರೋಪಿಗಳನ್ನು ಭೇಟಿ ಮಾಡುವ ಮೂಲಕ ತನಿಖೆಯ ಮೇಲೆ ನಿಯಮಿತವಾಗಿ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (Enforcement Directorate) ಇಂದು ದೆಹಲಿ ನ್ಯಾಯಾಲಯಕ್ಕೆ ಸಿಸಿಟಿವಿ (CCTV) ದೃಶ್ಯಗಳನ್ನು ಸಲ್ಲಿಸಿದೆ. 

ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸತ್ಯೇಂದ್ರ ಜೈನ್‌ ಅವರು ತಿಹಾರ್ ಜೈಲಿನಲ್ಲಿ ತಲೆ, ಕಾಲು ಮತ್ತು ಬೆನ್ನು ಮಸಾಜ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ. ಬಂಧೀಖಾನೆ ಸಚಿವರೂ ಆಗಿರುವ ಸತ್ಯೇಂದ್ರ ಜೈನ್‌ ಅವರು ತಮ್ಮ ಸ್ಥಾನದ ದುರುಪಯೋಗ ಪಡೆಯುತ್ತಿದ್ದಾರೆ ಎಂದು ಇಡಿ ಆರೋಪ ಮಾಡಿದೆ. ಜಾರಿ ನಿರ್ದೇಶನಾಲಯ ಸಲ್ಲಿಸಿರುವ ದೃಶ್ಯಾವಳಿಗಳ ಪ್ರಕಾರ, ಜೈಲು ಅಧೀಕ್ಷಕರು ಸತ್ಯೇಂದ್ರ ಜೈನ್ ಅವರನ್ನು ಪ್ರತಿದಿನ ಭೇಟಿ ಮಾಡುತ್ತಾರೆ, ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಇಡಿ ಹೇಳಿದೆ. ಅಲ್ಲದೆ, ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಜೈಲಿನಲ್ಲಿ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಲಾಗುತ್ತಿದೆ ಎಂದೂ ಇಡಿ ಹೇಳಿದೆ. 

ಇದನ್ನು ಓದಿ: ED raids ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ, 1.8 ಕೆಜಿ ಚಿನ್ನ, ಕೋಟಿ ರೂ ನಗದು ಜಪ್ತಿ!

ಇಷ್ಟೇ ಅಲ್ಲದೆ,  ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ತನ್ನ ಪತಿಯನ್ನು ಜೈಲಿನ ಸೆಲ್‌ನಲ್ಲೇ ಭೇಟಿಯಾಗುತ್ತಾರೆ. ಇದು ಸಹ ಜೈಲು ಕೈಪಿಡಿಗೆ ವಿರುದ್ಧವಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಇನ್ನು, ಸತ್ಯೇಂದ್ರ ಜೈನ್‌ ಆಗಾಗ್ಗೆ ತಿಹಾರ್‌ ಜೈಲಿನಲ್ಲೇ ಬಂಧಿಸಲಾಗಿರುವ ಅಂಕುಶ್ ಜೈನ್ ಮತ್ತು ವೈಭವ್ ಜೈನ್ ಅವರನ್ನು ಭೇಟಿಯಾಗುತ್ತಾರೆ ಎಂದೂ ಇಡಿ ಹೇಳಿದೆ. 

ಸತ್ಯೇಂದ್ರ ಜೈನ್ ಅವರ ಸೆಲ್ ಮತ್ತು ಅವರನ್ನು ಇರಿಸಲಾಗಿರುವ ವಾರ್ಡ್‌ನ ದೃಶ್ಯಾವಳಿಗಳನ್ನು ಇಡಿ ಒತ್ತಾಯಿಸಿತ್ತು ಎಂದು ತಿಹಾರ್ ಜೈಲು ಆಡಳಿತ ತಿಳಿಸಿದೆ. ಆದರೆ, ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ಕೋಣೆಗೆ ಹೊರಗಿನಿಂದ ಯಾರೂ ಭೇಟಿ ನೀಡಿಲ್ಲ ಎಂದು ಜೈಲು ಆಡಳಿತ ಹೇಳುತ್ತದೆ. 
 
 ಆದರೂ, ಬೆಳಗ್ಗೆ ವಾರ್ಡ್‌ನಲ್ಲಿರುವ ಎಲ್ಲಾ ಕೈದಿಗಳು ಪರಸ್ಪರ ಮಾತನಾಡಬಹುದು. ಮಾತನಾಡುತ್ತಿರುವ ಸಹ-ಆರೋಪಿಗಳು ಸತ್ಯೇಂದ್ರ ಜೈನ್‌ ಇರುವ ಅದೇ ವಾರ್ಡ್‌ನಲ್ಲಿದ್ದಾರೆ, ಆದ್ದರಿಂದ ಅವರು ತಮ್ಮಲ್ಲಿಯೇ ಮಾತನಾಡಬಹುದು. ಎಣಿಕೆ ಕಾರ್ಯದ ನಂತರ, ಪ್ರತಿಯೊಬ್ಬರೂ ತಮ್ಮ ಸ್ವಂತ ಸೆಲ್‌ಗೆ ಹೋದಾಗ, ಅವರು ಪರಸ್ಪರರ ಸೆಲ್‌ ಬಳಿಗೆ ಹೋಗಲಾಗುವುದಿಲ್ಲ ಎಂದೂ ಜೈಲು ಆಡಳಿತ ಸಮರ್ಥಿಸಿಕೊಂಡಿದೆ. 

ಇದನ್ನೂ ಓದಿ: Delhi Minister Arrest ಹವಾಲ ಪ್ರಕರಣ, ದೆಹಲಿ ಸಚಿವ, ಕೇಜ್ರಿವಾಲ್ ಆಪ್ತ ಸತ್ಯೇಂದ್ರ ಜೈನ್ ಬಂಧನ!

ಅಲ್ಲದೆ, ಸತ್ಯೇಂದ್ರ ಜೈನ್‌ ಅವರು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗೆ ಪ್ರವೇಶವನ್ನು ಹೊಂದಿದೆ ಎಂಬುದನ್ನು ತಿಹಾರ್ ಜೈಲು ಆಡಳಿತವು ನಿರಾಕರಿಸಿದೆ. ರೋಸ್ ಅವೆನ್ಯೂ ಕೋರ್ಟ್ ಸಂಕೀರ್ಣದಲ್ಲಿರುವ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನ್ಯಾಯಾಲಯವು ಗುರುವಾರ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯ ಆರಂಭಿಕ ವಿಚಾರಣೆಗೆ ಮನವಿಯನ್ನು ಅನುಮತಿಸಿದೆ.

ಆಗಸ್ಟ್ 24, 2017 ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಆರಂಭಿಸಿತ್ತು.

Follow Us:
Download App:
  • android
  • ios