ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಂಚಾಯತ್ ಅಧ್ಯಕ್ಷ ಅಪರಿಚಿತರ ಗುಂಡಿನ ದಾಳಿಗೆ ಬಲಿ, ಮೂವರು ಅಪರಿಚಿತರು ಬೈಕ್ ಮೂಲಕ ಆಗಮಿಸಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪಂಚಾಯತ್ ಅಧ್ಯಕ್ಷನ ಕಾರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಅಮೃತಸರ (ಜ.04) ಆಪ್ತರ ಆಹ್ವಾನದ ಮೇರೆಗೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಂಚಾಯತ್ ಅಧ್ಯಕ್ಷ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮೂವರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪಂಚಾಯತ್ ಅಧ್ಯಕ್ಷ ಮೃತಪಟ್ಟಿದ್ದಾರೆ. ಇತ್ತ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಮದುವೆ ಕಾರ್ಯಕ್ರಮದ ರೆಸಾರ್ಟ್‌ನಲ್ಲಿ ದಾಳಿ

ವಲ್ತೋಹದ ಪಂಚಾಯತ್ ಅಧ್ಯಕ್ಷ, ಆಮ್ ಆದ್ಮಿ ಪಾರ್ಟಿ ನಾಯಕ ಜರ್ನೈಲ್ ಸಿಂಗ್ ಮೃತ ದುರ್ದೈವಿ. ಆಪ್ತರ ಮದುವೆ ಕಾರ್ಯಕ್ರಮ ಅಮೃತಸರದ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿತ್ತು. ಕಾರು ಚಾಲಕನ ಜೊತೆ ಅಮೃತಸರದ ಮದುವೆ ರೆಸಾರ್ಟ್‌ಗೆ ಆಗಮಿಸಿದ್ದ ಜರ್ನೈಲ್ ಸಿಂಗ್, ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.ಮದುವೆ ಕಾರ್ಯಕ್ರಮದಲ್ಲಿ ಸಿಕ್ಕ ಆಪ್ತರು, ಗೆಳೆಯರು ಸೇರಿದಂತೆ ಹಲವರ ಜೊತೆ ಮಾತನಾಡಿದ್ದಾರೆ. ಇತ್ತ ಫೋನ್ ಕರೆ ಬಂದ ಕಾರಣದಿಂದ ಗುಂಪಿನಿಂದ ಕೆಲ ದೂರ ಸರಿದು ಮಾತನಾಡಿದ್ದಾರೆ. ಅಷ್ಟರಲ್ಲೇ ದಾಳಿಯಾಗಿದೆ.

ಆರೋಪಿಗಳ ಗುರುತು ಪತ್ತೆ, ಅರೆಸ್ಟ್‌ಗೆ ಕಾರ್ಯಾಚರಣೆ

ಪಂಚಾಯತ್ ಅಧ್ಯಕ್ಷನ ಮೇಲೆ ಗುಂಡಿನ ದಾಳಿ ನಡೆಸಿ ಹೈತ್ಯೆಗೈದ ಆರೋಪಿಗಳ ಗುರುತು ಪತ್ತೆಯಾಗಿದೆ. ರೆಸಾರ್ಟ್‌ನಲ್ಲಿರುವ ಎಲ್ಲಾ ಸಿಸಿಟಿವಿ ದೃೃಶ್ಯಗಳು, ಆರೋಪಿಗಳು ಸಾಗಿ ಬಂದ ದಾರಿಯ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾರೆ. ಇದೀಗ ಶೀಘ್ರದಲ್ಲೇ ಆರೋಪಿಗಳ ಅರೆಸ್ಟ್ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಅಮೃತಸರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಮೃತಸರ ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಮಾರ್ಚ್ ತಿಂಗಳಲ್ಲೂ ನಡೆದಿದ್ದು ದಾಳಿ

ಜರ್ನೈಲ್ ಸಿಂಗ್ ಮೇಲೆ ದಾಳಿಯಾಗುತ್ತಿರುವುದು ಇದೇ ಮೊದಲ್ಲ, 2025ರ ಮಾರ್ಚ್ ತಿಂಗಳಲ್ಲಿ ಗುಂಡಿನ ದಾಳಿ ನಡೆದಿತ್ತು. ಕಾರು ಚಾಲಕನ ಜೊತೆಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ದುರ್ಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಜರ್ನೈಲ್ ಸಿಂಗ್ ಹಾಗೂ ಕಾರು ಚಾಲಕ ಇಬ್ಬರು ಗಾಯಗೊಂಡಿದ್ದರು. ಅಪರಿಚಿತರು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದರು.ಗುಂಡಿನ ಶಬ್ದ ಕೇಳಿ ಹಲವರು ಆಗಮಿಸುತ್ತಿದ್ದಂತೆ ಅಪರಿಚಿತರು ಪರಾರಿಯಾಗಿದ್ದರು. ಬಳಿಕ ಸ್ಥಳೀಯರು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ರು. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. 3 ತಿಂಗಳ ವಿಶ್ರಾಂತಿ ಬಳಿಕ ಮತ್ತೆ ರಾಜಕೀಯವಾಗಿ ಜರ್ನೈಲ್ ಸಿಂಗ್ ಸಕ್ರಿಯರಾಗಿದ್ದರು.

ಜರ್ನೈಲ್ ಸಿಂಗ್ ಆಮ್ ಆದ್ಮಿ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಉದ್ಯಮಿಯಾಗಿರವ ಜರ್ನೈಲ್ ಸಿಂಗ್‌ಗೆ ವಿರೋಧಿಗಳ ಸಂಖ್ಯೆಯೂ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ರಾಜಕೀಯವಾಗಿ, ಉದ್ಯಮ ಕ್ಷೇತ್ರದಲ್ಲಿ ಜರ್ನೈಲ್ ಸಿಂಗ್ ನಿಲುವುಗಳು, ನಿರ್ಧಾರಗಳು ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಹೀಗಾಗಿ ವಿರೋಧಿಗಘಳು ಹುಟ್ಟಿಕೊಂಡಿದ್ದರು ಎಂದು ವರದಿಯಾಗಿದೆ.

Scroll to load tweet…